Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ವಿಷಯಗಳು › ಸೋಮಾರಿತನ

ದೈನಂದಿನ ಜೀವನ

ಬೈಬಲಿನಲ್ಲಿ ಸೋಮಾರಿತನ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ ನ 26 ವಾಕ್ಯಭಾಗಗಳು, ಸಾಲು ಸಾಲಾಗಿ.

ಜ್ಞಾನೋಕ್ತಿಗಳ ನುಡಿಗಳು

  • ಸೋಮಾರಿಯೇ, ಇರುವೆಯ ಬಳಿಗೆ ಹೋಗು: ಅದು ಬೇಸಿಗೆಯಲ್ಲಿ ಆಹಾರವನ್ನು ಕೂಡಿಸುತ್ತದೆಜ್ಞಾನೋ 6:6–8
    ವಚನಗಳು
    ಜ್ಞಾನೋ 6:6–8ಸೋಮಾರಿಯೇ, ಇರುವೆಯ ಹತ್ತಿರ ಹೋಗಿ, ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ಪಡೆದುಕೋ. ಅದಕ್ಕೆ ನಾಯಕ, ಅಧಿಕಾರಿ ಹಾಗೂ ಪ್ರಭುಗಳಿಲ್ಲದಿದ್ದರೂ, ಬೇಸಿಗೆಯಲ್ಲಿ ತನ್ನ ತೀನಿಯನ್ನು ಸಿದ್ಧಮಾಡುವುದು, ಸುಗ್ಗಿಯ ಕಾಲದಲ್ಲಿ ತನಗೆ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಟ್ಟುಕೊಳ್ಳುವುದು.
  • ಸ್ವಲ್ಪ ನಿದ್ರೆ, ಆಗ ಬಡತನವು ಕಳ್ಳನಂತೆ ಬರುತ್ತದೆಜ್ಞಾನೋ 6:9–11
    ವಚನಗಳು
    ಜ್ಞಾನೋ 6:9–11ಸೋಮಾರಿಯೇ, ಎಷ್ಟು ಹೊತ್ತು ನಿದ್ರೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವಿ? “ಇನ್ನು ಸ್ವಲ್ಪ ನಿದ್ದೆ, ಇನ್ನು ಸ್ವಲ್ಪ ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ” ಅಂದುಕೊಳ್ಳುವಿಯಾ? ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.
  • ಸೋಮಾರಿಯ ಹೊಲ: ಮುಳ್ಳುಗಳು, ಕಳೆಗಳು ಮತ್ತು ಬಿದ್ದುಹೋದ ಕಲ್ಲಿನ ಗೋಡೆಜ್ಞಾನೋ 24:30–34
    ವಚನಗಳು
    ಜ್ಞಾನೋ 24:30–34ಸೋಮಾರಿಯ ಹೊಲದ ಮೇಲೆಯೂ, ಬುದ್ಧಿಹೀನನ ದ್ರಾಕ್ಷಿಯ ತೋಟದ ಮೇಲೆಯೂ ಹಾದು ಹೋದೆನು. ಆಹಾ, ಮುಳ್ಳುಗಿಡಗಳು ಅದರಲ್ಲಿ ಹರಡಿಕೊಂಡಿದ್ದವು, ಕಳೆಗಳು ಅದನ್ನು ಮುಚ್ಚಿದ್ದವು, ಅದರ ಕಲ್ಲಿನ ಗೋಡೆಯು ಹಾಳಾಗಿತ್ತು. ಆಗ ನಾನು ನೋಡಿ ಆಲೋಚಿಸಿದೆನು, ದೃಷ್ಟಿಸಿ ಶಿಕ್ಷಿತನಾದೆನು. ಇನ್ನು ಸ್ವಲ್ಪ ನಿದ್ದೆ, ಇನ್ನು ತುಸ ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ? ಬಡತನವು ದಾರಿಗಳ್ಳನ ಹಾಗೂ, ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.
  • ಸೋಮಾರಿಯಾದ ಕೈ ಬಡತನವನ್ನು ತರುತ್ತದೆಜ್ಞಾನೋ 10:4
    ವಚನಗಳು
    ಜ್ಞಾನೋ 10:4ಜೋಲುಗೈ ದಾರಿದ್ರ್ಯ, ಚುರುಕು ಕೈ ತರುವುದು ಐಶ್ವರ್ಯ.
  • ಸುಗ್ಗಿಯಲ್ಲಿ ನಿದ್ರಿಸುವವನು ನಾಚಿಕೆಗೆಟ್ಟ ಮಗನುಜ್ಞಾನೋ 10:5
    ವಚನಗಳು
    ಜ್ಞಾನೋ 10:5ಸುಗ್ಗಿಯಲ್ಲಿ ಕೂಡಿಸುವವನು ಬುದ್ಧಿವಂತನು, ಕೊಯ್ಲಿನಲ್ಲಿ ತೂಕಡಿಸುವವನು ನಾಚಿಕೆಗೆಟ್ಟವನು.
  • ಹಲ್ಲುಗಳಿಗೆ ಹುಳಿಯಂತೆಯೂ ಕಣ್ಣುಗಳಿಗೆ ಹೊಗೆಯಂತೆಯೂಜ್ಞಾನೋ 10:26
    ವಚನಗಳು
    ಜ್ಞಾನೋ 10:26ಹಲ್ಲುಗಳಿಗೆ ಹುಳಿಯೂ, ಕಣ್ಣುಗಳಿಗೆ ಹೊಗೆಯೂ ಹೇಗೋ, ಯಜಮಾನನಿಗೆ ಸೋಮಾರಿಯು ಹಾಗೆ.
  • ಸೋಮಾರಿತನವು ಬಿಟ್ಟೀ ಕೆಲಸದಲ್ಲಿ ಕೊನೆಗೊಳ್ಳುತ್ತದೆಜ್ಞಾನೋ 12:24
    ವಚನಗಳು
    ಜ್ಞಾನೋ 12:24ಚುರುಕುಗೈಯವನಿಗೆ ರಾಜ್ಯಾಧಿಕಾರ, ಮೈಗಳ್ಳನಿಗೆ ದಾಸತ್ವದ ಬದುಕು.
  • ಸೋಮಾರಿಯು ತಾನು ಬೇಟೆಯಾಡಿದ್ದನ್ನು ಸುಡುವುದಿಲ್ಲಜ್ಞಾನೋ 12:27
    ವಚನಗಳು
    ಜ್ಞಾನೋ 12:27ಮೈಗಳ್ಳನು ಹಿಡಿದ ಬೇಟೆಯನ್ನೂ ಅನುಭವಿಸಲಾರನು, ಸನ್ಮಾರ್ಗದಲ್ಲಿ ನಡೆಯುವವನಿಗೆ ಅಮೂಲ್ಯ ಸಂಪತ್ತು ದೊರಕುವುದು.
  • ಸೋಮಾರಿಯು ಆಶಿಸುತ್ತಾನೆ, ಆದರೂ ಅವನಿಗೆ ಏನೂ ಇಲ್ಲಜ್ಞಾನೋ 13:4, ಜ್ಞಾನೋ 21:25
    ವಚನಗಳು
    ಜ್ಞಾನೋ 13:4ಸೋಮಾರಿಯ ಆಶೆಯು ವ್ಯರ್ಥ, ಉದ್ಯೋಗಿಯ ಆತ್ಮಕ್ಕೆ ಪುಷ್ಟಿ.
    ಜ್ಞಾನೋ 21:25ಸೋಮಾರಿಯ ಆಶೆಯು ಅವನನ್ನು ಕೊಲ್ಲುವುದು, ಅವನ ಕೈಗಳು ದುಡಿಯಲಾರವು.
  • ಸೋಮಾರಿಯ ದಾರಿಯು ಮುಳ್ಳುಬೇಲಿಯಂತಿದೆಜ್ಞಾನೋ 15:19
    ವಚನಗಳು
    ಜ್ಞಾನೋ 15:19ಸೋಮಾರಿಯ ಮಾರ್ಗ ಮುಳ್ಳುಬೇಲಿ, ಯಥಾರ್ಥವಂತನ ಮಾರ್ಗ ರಾಜಮಾರ್ಗ.
  • ಕೆಲಸದಲ್ಲಿ ಮೈಗಳ್ಳನು ನಾಶಮಾಡುವವನಿಗೆ ಸಹೋದರನುಜ್ಞಾನೋ 18:9
    ವಚನಗಳು
    ಜ್ಞಾನೋ 18:9ಕೆಲಸಗಳ್ಳನು ಕೆಡುಕನಿಗೆ ತಮ್ಮ.
  • ಅವನು ಕೈಯನ್ನು ತಟ್ಟೆಯಲ್ಲಿ ಮುಳುಗಿಸುತ್ತಾನೆ, ಬಾಯಿಗೆ ಎತ್ತಲೂ ಒಲ್ಲನುಜ್ಞಾನೋ 19:24, ಜ್ಞಾನೋ 26:15
    ವಚನಗಳು
    ಜ್ಞಾನೋ 19:24ಮೈಗಳ್ಳನು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ, ತಿರುಗಿ ಬಾಯಿಯ ಹತ್ತಿರಕ್ಕೆ ತರಲಾರನು.
    ಜ್ಞಾನೋ 26:15ಸೋಮಾರಿಯು ಪಾತ್ರೆಯೊಳಗೆ ಕೈ ಮುಳುಗಿಸಿದ ಮೇಲೆ, ತಿರುಗಿ ಬಾಯಿಯ ಹತ್ತಿರ ತರಲಾರದಷ್ಟು ಆಯಾಸಗೊಳ್ಳುತ್ತಾನೆ.
  • ಅವನು ಕಾಲಕ್ಕೆ ಸರಿಯಾಗಿ ಉಳುವುದಿಲ್ಲ, ಸುಗ್ಗಿಯಲ್ಲಿ ಅವನಿಗೆ ಏನೂ ಸಿಗುವುದಿಲ್ಲಜ್ಞಾನೋ 20:4
    ವಚನಗಳು
    ಜ್ಞಾನೋ 20:4ಮೈಗಳ್ಳನು ಮಳೆಗಾಲದಲ್ಲಿ ಉಳುವುದಿಲ್ಲ, ಸುಗ್ಗೀಕಾಲದಲ್ಲಿ ಅಪೇಕ್ಷಿಸಲು ಏನು ಸಿಕ್ಕೀತು?
  • “ಹೊರಗೆ ಸಿಂಹವಿದೆ”ಜ್ಞಾನೋ 22:13, ಜ್ಞಾನೋ 26:13
    ವಚನಗಳು
    ಜ್ಞಾನೋ 22:13“ಹೊರಗೆ ಸಿಂಹವಿದೆ, ನನ್ನನ್ನು ಬೀದಿಯಲ್ಲಿ ಕೊಂದ್ದಿತು” ಎಂಬುದು ಸೋಮಾರಿಯ ನೆವ.
    ಜ್ಞಾನೋ 26:13“ದಾರಿಯಲ್ಲಿ ಸಿಂಹವಿದೆ, ಬೀದಿಗಳಲ್ಲಿ ತಿರುಗಾಡುತ್ತಿದೆ” ಎಂಬುದು ಸೋಮಾರಿಯ ನೆವ.
  • ಬಾಗಿಲು ತನ್ನ ಕೀಲುಗಳ ಮೇಲೆ ತಿರುಗುವಂತೆ ಸೋಮಾರಿಯು ತನ್ನ ಹಾಸಿಗೆಯ ಮೇಲೆ ಹೊರಳಾಡುತ್ತಾನೆಜ್ಞಾನೋ 26:14
    ವಚನಗಳು
    ಜ್ಞಾನೋ 26:14ಕದವು ತಿರುಗುಣಿಯಲ್ಲಿ ಹೇಗೋ, ಹಾಗೆ ಸೋಮಾರಿಯು ಹಾಸಿಗೆಯಲ್ಲಿ ಹೊರಳಾಡುತ್ತಿರುವನು.
  • ವಿವೇಕದಿಂದ ಉತ್ತರಕೊಡುವ ಏಳು ಮಂದಿಗಿಂತ ತಾನೇ ಜ್ಞಾನಿಯೆಂದು ಭಾವಿಸಿಕೊಳ್ಳುತ್ತಾನೆಜ್ಞಾನೋ 26:16
    ವಚನಗಳು
    ಜ್ಞಾನೋ 26:16ವಿವೇಕದಿಂದ ಉತ್ತರಕೊಡಬಲ್ಲ ಏಳು ಜನರಿಗಿಂತಲೂ, ತಾನೇ ಜ್ಞಾನಿಯೆಂದು ಸೋಮಾರಿಯು ಎಣಿಸಿಕೊಳ್ಳುವನು.

ಬೇರೆ ಕಡೆಗಳಲ್ಲಿ

  • ಸೋಮಾರಿತನದಿಂದ ಮಾಳಿಗೆ ಕುಸಿಯುತ್ತದೆ, ಮನೆ ಸೋರುತ್ತದೆಪ್ರಸ 10:18
    ವಚನಗಳು
    ಪ್ರಸ 10:18ಸೋಮಾರಿತನದಿಂದ ತೊಲೆಗಳು ಬೊಗ್ಗುವವು. ಜೋಲುಗೈಯಿಂದ ಮನೆ ಸೋರುವುದು.
  • ಮೂಢನು ಕೈಕಟ್ಟಿಕೊಳ್ಳುತ್ತಾನೆಪ್ರಸ 4:5
    ವಚನಗಳು
    ಪ್ರಸ 4:5ಮೂಢನು ತನ್ನ ಕೈಗಳನ್ನು ಮುಚ್ಚಿಕೊಂಡು ಯಾವ ಕೆಲಸವನ್ನು ಮಾಡದೆ, ತನ್ನನ್ನು ತಾನು ನಾಶಪಡಿಸಿಕೊಳ್ಳುವನು.
  • ತನ್ನ ತಲಾಂತನ್ನು ಹೂಳಿಟ್ಟ ಆಳನ್ನು ಸೋಮಾರಿ ಎಂದು ಕರೆಯಲಾಗುತ್ತದೆಮತ್ತಾ 25:26
    ವಚನಗಳು
    ಮತ್ತಾ 25:26ಆಗ ಅವನ ಯಜಮಾನನು ಅವನಿಗೆ, ‘ಮೈಗಳ್ಳನಾದ ದುಷ್ಟ ಸೇವಕನೇ; ನೀನು ನನ್ನನ್ನು ಬಿತ್ತದಿರುವಲ್ಲಿ ಕೊಯ್ಯುವವನು ತೂರದಿರುವಲ್ಲಿ ರಾಶಿಮಾಡಿಕೊಳ್ಳುವವನು ಎಂದು ತಿಳಿದಿದ್ದೇಯಾ?
  • ನಿಮ್ಮ ಆಸಕ್ತಿಯು ಕುಂದದಿರಲಿರೋಮಾ 12:11
    ವಚನಗಳು
    ರೋಮಾ 12:11ಜಾಗ್ರತೆ ಬೇಕಾದಲ್ಲಿ ಆಲಸ್ಯವಾಗಿರದೆ ಆಸಕ್ತಚಿತ್ತರಾಗಿದ್ದು ಕರ್ತನ ಸೇವೆ ಮಾಡುವವರಾಗಿರಿ.
  • “ಕೆಲಸ ಮಾಡಲೊಲ್ಲದವನು ಊಟಮಾಡಬಾರದು”2 ಥೆಸ 3:10–12
    ವಚನಗಳು
    2 ಥೆಸ 3:10–12ಇದಲ್ಲದೆ ನಾವು ನಿಮ್ಮ ಸಂಗಡ ಇದ್ದಾಗ, “ಕೆಲಸ ಮಾಡಲೊಲ್ಲದವನು ಊಟಮಾಡಬಾರದು” ಎಂದು ನಿಮಗೆ ಆಜ್ಞಾಪಿಸಿದೆವಷ್ಟೆ. ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ, ಇತರರ ವಿಷಯದಲ್ಲಿ ಮಾತ್ರ ತಲೆ ಹಾಕಿ ಸೋಮಾರಿಯಾಗಿ ನಡೆಯುತ್ತಾರೆಂಬ ಸುದ್ದಿಯನ್ನು ಕೇಳಿದ್ದೇವೆ. ಇಂಥವರು ತಮ್ಮ ಕೆಲಸಕಾರ್ಯಗಳನ್ನು ನೋಡುತ್ತಾ ತಾವೇ ಸಂಪಾದಿಸಿದ್ದನ್ನು ಊಟಮಾಡಬೇಕೆಂದು ಕರ್ತನಾದ ಯೇಸು ಕ್ರಿಸ್ತನಲ್ಲಿ ನಾವು ಆಜ್ಞಾಪಿಸಿ ಬುದ್ಧಿ ಹೇಳುತ್ತೇವೆ.
  • ಯುವ ವಿಧವೆಯರು ಮನೆಮನೆಗೆ ತಿರುಗಾಡುತ್ತಾ ಸೋಮಾರಿಗಳಾಗುವುದನ್ನು ಕಲಿಯುತ್ತಾರೆ1 ತಿಮೊ 5:13
    ವಚನಗಳು
    1 ತಿಮೊ 5:13ಇದಲ್ಲದೆ ಅವರು ಮನೆಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ. ಮೈಗಳ್ಳರಾಗುವುದಲ್ಲದೆ, ಹರಟೆಮಾತನಾಡುವವರೂ, ಇತರರ ವಿಷಯಗಳಲ್ಲಿ ತಲೆ ಹಾಕುವವರೂ ಆಗಿ ಆಡಬಾರದ ಮಾತುಗಳನ್ನಾಡುತ್ತಾರೆ.
  • ಮಂದರಾಗಿರಬೇಡಿರಿಇಬ್ರಿ 6:12
    ವಚನಗಳು
    ಇಬ್ರಿ 6:12ನೀವು ಸೋಮಾರಿಗಳಾಗಿರಬೇಕೆಂದು ಅಪೇಕ್ಷಿಸುವುದಿಲ್ಲ, ಬದಲಿಗೆ ನಂಬಿಕೆಯಿಂದಲೂ, ತಾಳ್ಮೆಯಿಂದಲೂ, ವಾಗ್ದಾನಗಳನ್ನು ಬಾಧ್ಯವಾಗಿ ಹೊಂದುವವರನ್ನು ಅನುಸರಿಸುವವರಾಗಬೇಕೆಂದು ಕೋರುತ್ತೇನೆ.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು