ಅನ್ವೇಷಿಸಿ › ವಿಷಯಗಳು › ಮುದ್ದುಗಳು
ದೈನಂದಿನ ಜೀವನ
ಬೈಬಲಿನಲ್ಲಿ ಮುದ್ದುಗಳು
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ ನ 32 ವಾಕ್ಯಭಾಗಗಳು, ಸಾಲು ಸಾಲಾಗಿ.
ವಂದನೆ ಮತ್ತು ಬೀಳ್ಕೊಡುಗೆ
- ಯಾಕೋಬನು ಬಾವಿಯ ಬಳಿ ರಾಹೇಲಳಿಗೆ ಮುದ್ದಿಟ್ಟು ಗಟ್ಟಿಯಾಗಿ ಅಳುತ್ತಾನೆಆದಿ 29:11
ವಚನಗಳು
ಆದಿ 29:11ಯಾಕೋಬನು ರಾಹೇಲಳಿಗೆ ಮುದ್ದಿಟ್ಟು ಜೋರಾಗಿ ಅತ್ತು ಆಕೆಗೆ,
- ಲಾಬಾನನು ತನ್ನ ಮೊಮ್ಮಕ್ಕಳಿಗೂ ಹೆಣ್ಣುಮಕ್ಕಳಿಗೂ ಮುದ್ದಿಟ್ಟು ಬೀಳ್ಕೊಡುತ್ತಾನೆಆದಿ 31:55
ವಚನಗಳು
ಆದಿ 31:55ಮುಂಜಾನೆ ಲಾಬಾನನು ಎದ್ದು ತನ್ನ ಹೆಣ್ಣು ಮಕ್ಕಳಿಗೂ, ಮೊಮ್ಮಕ್ಕಳಿಗೂ ಮುದ್ದಿಟ್ಟು ಅವರನ್ನು ಆಶೀರ್ವದಿಸಿ ತನ್ನ ಮನೆಗೆ ಹಿಂತಿರುಗಿ ಹೋದನು.
- ಏಸಾವನು ಯಾಕೋಬನ ಬಳಿಗೆ ಓಡಿಬಂದು ಅವನನ್ನು ಅಪ್ಪಿಕೊಂಡು ಮುದ್ದಿಡುತ್ತಾನೆಆದಿ 33:4
ವಚನಗಳು
ಆದಿ 33:4ಆಗ ಏಸಾವನು ಅವನನ್ನು ಎದುರುಗೊಳ್ಳುವುದಕ್ಕೆ ಓಡಿ ಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವರಿಬ್ಬರೂ ಅತ್ತರು.
- ಯೋಸೇಫನು ಅಳುತ್ತಾ ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಡುತ್ತಾನೆಆದಿ 45:15
ವಚನಗಳು
ಆದಿ 45:15ಇದಲ್ಲದೆ ಅವನು ತನ್ನ ಅಣ್ಣಂದಿರಲ್ಲಿ ಪ್ರತಿಯೊಬ್ಬನಿಗೂ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವರು ಅವನ ಸಂಗಡ ಮಾತನಾಡಿದರು.
- ಆರೋನನು ದೇವರ ಬೆಟ್ಟದ ಬಳಿ ಮೋಶೆಯನ್ನು ಎದುರುಗೊಂಡು ಮುದ್ದಿಡುತ್ತಾನೆವಿಮೋ 4:27
ವಚನಗಳು
ವಿಮೋ 4:27ಇದಲ್ಲದೆ ಯೆಹೋವನು ಆರೋನನಿಗೆ, “ನೀನು ಮೋಶೆಯನ್ನು ಎದುರುಗೊಳ್ಳುವುದಕ್ಕೆ ಮರುಭೂಮಿಗೆ ಹೊರಟುಹೋಗು” ಎಂದನು. ಅವನು ಹೋಗಿ ದೇವರ ಬೆಟ್ಟದಲ್ಲೇ ಅವನನ್ನು ಎದುರುಗೊಂಡು ಮುದ್ದಿಟ್ಟನು.
- ಮೋಶೆಯು ತನ್ನ ಮಾವನಿಗೆ ವಂದಿಸಿ ಮುದ್ದಿಡುತ್ತಾನೆವಿಮೋ 18:7
ವಚನಗಳು
ವಿಮೋ 18:7ಮೋಶೆಯು ತನ್ನ ಮಾವನನ್ನು ಎದುರುಗೊಳ್ಳುವುದಕ್ಕೆ ಹೊರಟು ಆತನನ್ನು ವಂದಿಸಿ ಮುದ್ದಿಟ್ಟನು. ಅವರು ಪರಸ್ಪರ ಯೋಗಕ್ಷೇಮವನ್ನು ವಿಚಾರಿಸಿದ ಮೇಲೆ ಡೇರೆಯೊಳಗೆ ಹೋದರು.
- ನವೊಮಿಯು ತನ್ನ ಸೊಸೆಯರಿಗೆ ಮುದ್ದಿಡುತ್ತಾಳೆ; ಒರ್ಫಳು ಅವಳಿಗೆ ಮುದ್ದಿಟ್ಟು ಬೀಳ್ಕೊಳ್ಳುತ್ತಾಳೆರೂತ 1:9, ರೂತ 1:14
- ದಾವೀದನೂ ಯೋನಾತಾನನೂ ಒಬ್ಬರಿಗೊಬ್ಬರು ಮುದ್ದಿಟ್ಟು ಒಟ್ಟಿಗೆ ಅಳುತ್ತಾರೆ1 ಸಮು 20:41
ವಚನಗಳು
1 ಸಮು 20:41ಹುಡುಗನು ಹೋಗುತ್ತಲೇ ದಾವೀದನು ಕಲ್ಲುಕುಪ್ಪೆಯ ಬಳಿಯಿಂದ ಎದ್ದುಬಂದು ಮೂರು ಸಾರಿ ಸಾಷ್ಟಾಂಗವಾಗಿ ಯೋನಾತಾನನನ್ನು ವಂದಿಸಿದನು. ಅವರು ಒಬ್ಬರಿಗೊಬ್ಬರು ಮುದ್ದಿಟ್ಟುಕೊಂಡು ಅತ್ತರು. ದಾವೀದನು ಬಹಳವಾಗಿ ಅತ್ತನು.
- ದಾವೀದನು ಯೊರ್ದನಿನ ಬಳಿ ಬರ್ಜಿಲ್ಲೈಗೆ ಮುದ್ದಿಡುತ್ತಾನೆ2 ಸಮು 19:39
ವಚನಗಳು
2 ಸಮು 19:39ಎಲ್ಲಾ ಜನರೂ ನದಿದಾಟಿದರು. ಅರಸನು ನದಿ ದಾಟಿದ ಮೇಲೆ ಬರ್ಜಿಲ್ಲೈಯನ್ನು ಮುದ್ದಿಟ್ಟು ಆಶೀರ್ವದಿಸಿದನು. ಅನಂತರ ಬರ್ಜಿಲ್ಲೈಯು ತನ್ನ ಊರಿಗೆ ಹೋದನು.
- ತಂದೆತಾಯಿಗಳಿಗೆ ಮುದ್ದಿಟ್ಟು ಬೀಳ್ಕೊಳ್ಳಲು ಎಲೀಷನು ಅನುಮತಿ ಕೇಳುತ್ತಾನೆ1 ಅರಸು 19:20
ವಚನಗಳು
1 ಅರಸು 19:20ಕೂಡಲೇ ಅವನು ಎತ್ತುಗಳನ್ನು ಬಿಟ್ಟು ಓಡುತ್ತಾ ಬಂದು ಎಲೀಯನಿಗೆ, “ನನ್ನ ತಂದೆತಾಯಿಗಳನ್ನು ಮುದ್ದಿಟ್ಟು ಬರುವುದಕ್ಕೆ ಅಪ್ಪಣೆಯಾಗಲಿ, ಅನಂತರ ನಿನ್ನನ್ನು ಹಿಂಬಾಲಿಸುವೆನು” ಅಂದನು. ಅದಕ್ಕೆ ಎಲೀಯನು “ಹೋಗು ನಾನು ನಿನಗೆ ಮಾಡಿರುವುದನ್ನು ಮರೆಯಬೇಡ?” ಎಂದು ಉತ್ತರಕೊಟ್ಟನು.
- ತಂದೆಯು ಹಿಂದಿರುಗಿ ಬರುತ್ತಿರುವ ಮಗನ ಬಳಿಗೆ ಓಡಿಹೋಗಿ ಅವನಿಗೆ ಮುದ್ದಿಡುತ್ತಾನೆಲೂಕ 15:20
ವಚನಗಳು
ಲೂಕ 15:20ಎದ್ದು ತನ್ನ ತಂದೆಯ ಕಡೆಗೆ ಬಂದನು. “ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು, ಕನಿಕರಪಟ್ಟು, ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು, ಅವನಿಗೆ ಬಹಳವಾಗಿ ಮುದ್ದಿಟ್ಟನು.
- ಎಫೆಸದ ಹಿರಿಯರು ಪೌಲನನ್ನು ಅಪ್ಪಿಕೊಂಡು ಮುದ್ದಿಡುತ್ತಾರೆಅ. ಕೃ 20:37
ವಚನಗಳು
ಅ. ಕೃ 20:37ಬಳಿಕ ಪೌಲನು; “ನೀವು ನನ್ನ ಮುಖವನ್ನು ಇನ್ನೆಂದೂ ಕಾಣಲಾರಿರಿ” ಅನ್ನಲು, ಅವರೆಲ್ಲರು ವ್ಯಥೆಪಟ್ಟು, ದುಃಖದಿಂದ ಅಳುತ್ತಾ, ಅವನ ಕೊರಳನ್ನು ತಬ್ಬಿಕೊಂಡು ಅವನಿಗೆ ಮುದ್ದಿಟ್ಟರು.
ಕುಟುಂಬ ಮತ್ತು ಮಮತೆ
- ಇಸಾಕನು: “ಮಗನೇ, ನೀನು ಹತ್ತಿರ ಬಂದು ನನಗೆ ಮುದ್ದಿಡು”ಆದಿ 27:26–27
ವಚನಗಳು
ಆದಿ 27:26–27ಆಮೇಲೆ ಅವನ ತಂದೆಯಾದ ಇಸಾಕನು ಅವನಿಗೆ, “ಮಗನೇ, ನೀನು ಹತ್ತಿರ ಬಂದು ನನಗೆ ಮುದ್ದಿಡು” ಎಂದು ಹೇಳಲು ಅವನು ಹತ್ತಿರ ಬಂದು ತಂದೆಗೆ ಮುದ್ದಿಟ್ಟನು. ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿ ಅವನನ್ನು ಆಶೀರ್ವದಿಸಿ, “ಆಹಾ, ನನ್ನ ಮಗನ ಸುವಾಸನೆಯು, ಯೆಹೋವನು ಆಶೀರ್ವದಿಸಿದ ಹೊಲದ ಸುವಾಸನೆಯಂತಿರುವುದು.
- ಬಹುತೇಕ ಕುರುಡನಾದ ವೃದ್ಧ ಯಾಕೋಬನು ಯೋಸೇಫನ ಮಕ್ಕಳಿಗೆ ಮುದ್ದಿಡುತ್ತಾನೆಆದಿ 48:10
ವಚನಗಳು
ಆದಿ 48:10ಇಸ್ರಾಯೇಲನು ವೃದ್ಧಾಪ್ಯದಿಂದ ಮೊಬ್ಬು ಕಣ್ಣುಳ್ಳವನಾಗಿ ನೋಡಲಾರದೆ ಇದ್ದನು. ಯೋಸೇಫನು ಅವರನ್ನು ಅವನ ಬಳಿಗೆ ಕರೆದುಕೊಂಡು ಬರಲು ಅವನು ಅವರನ್ನು ಮುದ್ದಿಟ್ಟು ಅಪ್ಪಿಕೊಂಡನು.
- ಯೋಸೇಫನು ಸತ್ತ ತನ್ನ ತಂದೆಯ ಮೇಲೆ ಬಿದ್ದು ಅತ್ತು ಮುದ್ದಿಡುತ್ತಾನೆಆದಿ 50:1
ವಚನಗಳು
ಆದಿ 50:1ಆಗ ಯೋಸೇಫನು ತನ್ನ ತಂದೆಯ ಮುಖದ ಮೇಲೆ ಬಿದ್ದು ಕಣ್ಣೀರು ಸುರಿಸುತ್ತಾ ಅವನಿಗೆ ಮುದ್ದಿಟ್ಟನು.
- ಸಮುವೇಲನು ಸೌಲನನ್ನು ಅಭಿಷೇಕಿಸಿ ಮುದ್ದಿಡುತ್ತಾನೆ1 ಸಮು 10:1
ವಚನಗಳು
1 ಸಮು 10:1ಆ ಆಳು ಮುಂದೆ ಹೋದಾಗ ಸಮುವೇಲನು ತೈಲದ ಕೊಂಬಿನಿಂದ ಅವನ ತಲೆಯ ಮೇಲೆ ತೈಲವನ್ನು ಹೊಯ್ದು ಅವನನ್ನು ಮುದ್ದಿಟ್ಟು ಅವನಿಗೆ, “ಯೆಹೋವನು ತನ್ನ ಸ್ವತ್ತನ್ನು ಅಳುವುದಕ್ಕೋಸ್ಕರ ನಿಜವಾಗಿ ನಿನ್ನನ್ನು ಅಭಿಷೇಕಿಸಿದ್ದಾನೆ.
- ಅಬ್ಷಾಲೋಮನು ಹಿಂದಿರುಗಿದ ಮೇಲೆ ಅರಸನಾದ ದಾವೀದನು ಅವನಿಗೆ ಮುದ್ದಿಡುತ್ತಾನೆ2 ಸಮು 14:33
ವಚನಗಳು
2 ಸಮು 14:33ಯೋವಾಬನು ಹೋಗಿ ಇದನ್ನು ಅರಸನಿಗೆ ತಿಳಿಸಿದಾಗ ಅರಸನು ಅಬ್ಷಾಲೋಮನನ್ನು ಕರೇಕಳುಹಿಸಿದನು. ಅವನು ಅರಸನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು. ಅರಸನು ಅವನನ್ನು ಮುದ್ದಿಟ್ಟನು.
- “ನಿನ್ನ ಬಾಯ ಮುದ್ದುಗಳಿಂದ ನನಗೆ ಮುದ್ದಿಡು”ಪ.ಗೀ 1:2
ವಚನಗಳು
ಪ.ಗೀ 1:2ನಿನ್ನ ಬಾಯ ಮುದ್ದುಗಳಿಂದ ನನಗೆ ಮುದ್ದಿಡು ನಿನ್ನ ಪ್ರೀತಿಯು ದ್ರಾಕ್ಷಾರಸಕ್ಕಿಂತಲೂ ಉತ್ತಮ.
- ಯಥಾರ್ಥವಾದ ಉತ್ತರವು ತುಟಿಗಳಿಗೆ ಕೊಟ್ಟ ಮುದ್ದಿನಂತಿದೆಜ್ಞಾನೋ 24:26
ವಚನಗಳು
ಜ್ಞಾನೋ 24:26ಯಥಾರ್ಥವಾದ ಉತ್ತರವು, ತುಟಿಗೆ ಮುದ್ದು.
ವಂಚಿಸುವ ಮುದ್ದುಗಳು
- ಶತ್ರುವಿನ ಮುದ್ದುಗಳು ಮೋಸಕರಜ್ಞಾನೋ 27:6
ವಚನಗಳು
ಜ್ಞಾನೋ 27:6ಮಿತ್ರನು ಮಾಡುವ ಗಾಯಗಳು ಮೇಲಿಗಾಗಿಯೇ, ಶತ್ರುವಿನ ಮುದ್ದುಗಳು ಹೇರಳವಾಗಿವೆ.
- ಅಬ್ಷಾಲೋಮನು ಜನರಿಗೆ ಮುದ್ದಿಟ್ಟು ಅವರನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಾನೆ2 ಸಮು 15:5
ವಚನಗಳು
2 ಸಮು 15:5ಯಾರಾದರೂ ಅವನಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದಕ್ಕೆ ಬಂದರೆ ಅಂಥವರನ್ನು ಕೂಡಲೆ ಕೈಚಾಚಿ ಅವರನ್ನು ಹಿಡಿದು ಮುದ್ದಿಡುವನು.
- ಯೋವಾಬನು ಮುದ್ದಿಡುವಂತೆ ಅಮಾಸನ ಗಡ್ಡವನ್ನು ಹಿಡಿದು ಅವನನ್ನು ತಿವಿಯುತ್ತಾನೆ2 ಸಮು 20:9–10
ವಚನಗಳು
2 ಸಮು 20:9–10ಅವನು ಅಮಾಸನನ್ನು, “ಸಹೋದರನೇ ಕ್ಷೇಮವೋ” ಎಂದು ಕೇಳಿ ಮುದ್ದಿಡುವುದಕ್ಕೋಸ್ಕರವೋ ಎಂಬಂತೆ ಬಲಗೈಯಿಂದ ಅವನ ಗಡ್ಡವನ್ನು ಹಿಡಿದು, ಕೈಯಲ್ಲಿದ್ದ ಕತ್ತಿಯನ್ನು ಗಮನಿಸದಿದ್ದ ಅಮಾಸನ ಹೊಟ್ಟೆಯೊಳಗೆ ತಿವಿದನು. ಅದರಿಂದ ಅವನ ಕರಳುಗಳೆಲ್ಲಾ ಹೊರಗೆ ಬಂದವು. ಎರಡನೆಯ ಸಾರಿ ತಿವಿಯಲಿಲ್ಲ. ಅಷ್ಟಕ್ಕೆ ಅವನು ಸತ್ತನು. ಯೋವಾಬನೂ ಅವನ ತಮ್ಮನಾದ ಅಬೀಷೈಯೂ ಮತ್ತು ಬಿಕ್ರೀಯ ಮಗನಾದ ಶೆಬನನ್ನು ಹಿಂದಟ್ಟುವುದಕ್ಕೋಸ್ಕರ ಮುಂದೆ ನಡೆದಾಗ,
- ಯೂದನು: “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು”ಮತ್ತಾ 26:48–49, ಲೂಕ 22:48
ವಚನಗಳು
ಮತ್ತಾ 26:48–49ಇದಲ್ಲದೆ ಆತನನ್ನು ಹಿಡಿದುಕೊಡುವವನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಅವನೇ ಆತನು; ಅವನನ್ನು ಹಿಡಿಯಿರಿ” ಎಂದು ಮುನ್ಸೂಚನೆ ನೀಡಿದ್ದನು. ಕೂಡಲೇ ಅವನು ಯೇಸುವಿನ ಬಳಿಗೆ ಬಂದು, “ಗುರುವೇ ನಮಸ್ಕಾರ” ಎಂದು ಹೇಳಿ ಆತನಿಗೆ ಮುದ್ದಿಟ್ಟನು.
ಲೂಕ 22:48ಯೇಸು ಅವನಿಗೆ, “ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡಿದುಕೊಡುತ್ತೀಯಾ?” ಎಂದು ಕೇಳಿದನು.
ಆರಾಧನೆ ಮತ್ತು ಆದಿ ಸಭೆ
- ವಿಗ್ರಹಗಳಿಗೆ ಮುದ್ದಿಡುವುದು: ಬಾಳ್ ಮತ್ತು ಬಸವಗಳು1 ಅರಸು 19:18, ಹೋಶೇ 13:2
ವಚನಗಳು
1 ಅರಸು 19:18ಆದರೆ ಬಾಳನ ವಿಗ್ರಹಕ್ಕೆ ಅಡ್ಡಬೀಳದೆಯೂ, ಅದನ್ನು ಮುದ್ದಿಡದೆಯೂ ಇರುವ ಏಳು ಸಾವಿರ ಇಸ್ರಾಯೇಲರನ್ನು ಉಳಿಸುವೆನು” ಎಂದು ಹೇಳಿದನು.
ಹೋಶೇ 13:2ಈಗ ಎಫ್ರಾಯೀಮ್ಯರು ಹೆಚ್ಚೆಚ್ಚಾಗಿ ಪಾಪಮಾಡುತ್ತಾರೆ, ತಮ್ಮ ಬೆಳ್ಳಿಯಿಂದ ಸ್ವಬುದ್ಧಿಗೆ ತಕ್ಕ ಎರಕದ ಬೊಂಬೆಗಳನ್ನು ರೂಪಿಸಿಕೊಂಡಿದ್ದಾರೆ; ಅವೆಲ್ಲಾ ಶಿಲ್ಪಿಗಳ ಕೈಕೆಲಸವೇ; ಇಂಥವುಗಳನ್ನು ಮಾತನಾಡಿಸುತ್ತಾರೆ, ಮನುಷ್ಯರಾದ ಪೂಜಾರಿಗಳು ಪಶುವಿನ ಮೂರ್ತಿಗಳನ್ನು ಮುದ್ದಿಸುತ್ತಾರೆ.
- ಒಬ್ಬ ಸ್ತ್ರೀಯು ಯೇಸುವಿನ ಪಾದಗಳಿಗೆ ಮುದ್ದಿಡುತ್ತಾಳೆ; ಆತಿಥೇಯನು ಮುದ್ದಿಡಲಿಲ್ಲಲೂಕ 7:38, ಲೂಕ 7:45
- ಪವಿತ್ರವಾದ ಮುದ್ದಿನಿಂದ ಒಬ್ಬರನ್ನೊಬ್ಬರು ವಂದಿಸಿರಿರೋಮಾ 16:16, 1 ಥೆಸ 5:26, 1 ಪೇತ್ರ 5:14
ವಚನಗಳು
ರೋಮಾ 16:16ಪವಿತ್ರವಾದ ಮುದ್ದಿಟ್ಟು ಒಬ್ಬರನ್ನೊಬ್ಬರು ವಂದಿಸಿರಿ. ಕ್ರಿಸ್ತನ ಸಭೆಗಳಲ್ಲಿರುವವರೆಲ್ಲರೂ ನಿಮ್ಮನ್ನು ವಂದಿಸುತ್ತಿದ್ದಾರೆ.
1 ಥೆಸ 5:26ಪವಿತ್ರವಾದ ಮುದ್ದಿಟ್ಟು ಸಹೋದರರೆಲ್ಲರನ್ನೂ ವಂದಿಸಿರಿ.
1 ಪೇತ್ರ 5:14ಪ್ರೀತಿಯಿಂದ ಮುದ್ದಿಟ್ಟು ಒಬ್ಬರನೊಬ್ಬರು ವಂದಿಸಿರಿ. ಕ್ರಿಸ್ತನಲ್ಲಿರುವ ನಿಮ್ಮೆಲ್ಲರಿಗೂ ಸಮಾಧಾನವುಂಟಾಗಲಿ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು