ಅನ್ವೇಷಿಸಿ › ವಿಷಯಗಳು › ದೀರ್ಘಾಯುಷ್ಯ
ಆಶ್ಚರ್ಯಕರ ವಿವರಗಳು
ಬೈಬಲಿನಲ್ಲಿ ದೀರ್ಘಾಯುಷ್ಯ
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ ನ 37 ವಾಕ್ಯಭಾಗಗಳು, ಸಾಲು ಸಾಲಾಗಿ.
- ಜಲಪ್ರಳಯಕ್ಕೆ ಮೊದಲು ಯೆಹೋವನು ಮನುಷ್ಯನ ದಿನಗಳಿಗೆ ಮಿತಿಯನ್ನು ಗೊತ್ತುಮಾಡುತ್ತಾನೆಆದಿ 6:3
ವಚನಗಳು
ಆದಿ 6:3ಆಗ ಯೆಹೋವನು, “ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿ ಹೆಣಗಲು ಸಾಧ್ಯವಿಲ್ಲ; ಏಕೆಂದರೆ ಅವರು ರಕ್ತಮಾಂಸ ಹೊಂದಿರುವ ಮರ್ತ್ಯರೇ. ಅವರು ನೂರ ಇಪ್ಪತ್ತು ವರ್ಷ ಬದುಕುವರು” ಅಂದನು.
- ಒಂದು ಕೀರ್ತನೆ: ನಮ್ಮ ಆಯುಷ್ಯವು ಎಪ್ಪತ್ತು ವರ್ಷ, ಬಲವಿದ್ದರೆ ಎಂಬತ್ತುಕೀರ್ತ 90:10
ವಚನಗಳು
ಕೀರ್ತ 90:10ನಮ್ಮ ಆಯುಷ್ಕಾಲವು ಎಪ್ಪತ್ತು ವರ್ಷ, ಬಲ ಹೆಚ್ಚಿದರೆ ಎಂಭತ್ತು; ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.
ಜಲಪ್ರಳಯಕ್ಕೆ ಮೊದಲು
- ಆದಾಮನು 930 ವರ್ಷ ಬದುಕಿದನುಆದಿ 5:5
ವಚನಗಳು
ಆದಿ 5:5ಆದಾಮನು ಒಟ್ಟು ಒಂಭೈನೂರ ಮೂವತ್ತು ವರ್ಷ ಬದುಕಿ ನಂತರ ಸತ್ತನು.
- ಸೇತನು 912 ವರ್ಷ ಬದುಕಿದನುಆದಿ 5:8
ವಚನಗಳು
ಆದಿ 5:8ಸೇತನು ಒಟ್ಟು ಒಂಭೈನೂರ ಹನ್ನೆರಡು ವರ್ಷ ಬದುಕಿ ನಂತರ ಸತ್ತನು.
- ಎನೋಷನು 905 ವರ್ಷ ಬದುಕಿದನುಆದಿ 5:11
ವಚನಗಳು
ಆದಿ 5:11ಎನೋಷನು ಒಟ್ಟು ಒಂಭೈನೂರ ಐದು ವರ್ಷ ಬದುಕಿ ನಂತರ ಸತ್ತನು.
- ಕೇನಾನನು 910 ವರ್ಷ ಬದುಕಿದನುಆದಿ 5:14
ವಚನಗಳು
ಆದಿ 5:14ಕೇನಾನನು ಒಟ್ಟು ಒಂಭೈನೂರ ಹತ್ತು ವರ್ಷ ಬದುಕಿ ನಂತರ ಸತ್ತನು.
- ಮಹಲಲೇಲನು 895 ವರ್ಷ ಬದುಕಿದನುಆದಿ 5:17
ವಚನಗಳು
ಆದಿ 5:17ಮಹಲಲೇಲನು ಒಟ್ಟು ಎಂಟುನೂರ ತೊಂಭತ್ತೈದು ವರ್ಷ ಬದುಕಿ ನಂತರ ಸತ್ತನು.
- ಯೆರೆದನು 962 ವರ್ಷ ಬದುಕಿದನುಆದಿ 5:20
ವಚನಗಳು
ಆದಿ 5:20ಯೆರೆದನು ಒಟ್ಟು ಒಂಭೈನೂರ ಅರುವತ್ತೆರಡು ವರ್ಷ ಬದುಕಿ ನಂತರ ಸತ್ತನು.
- ಹನೋಕನು: 365 ವರ್ಷ, ಆ ಮೇಲೆ ಅವನು ಕಾಣದೆ ಹೋದನುಆದಿ 5:23–24
ವಚನಗಳು
ಆದಿ 5:23–24ಹನೋಕನು ಬದುಕಿದ ಒಟ್ಟು ಕಾಲ ಮುನ್ನೂರ ಅರುವತ್ತೈದು ವರ್ಷಗಳು. ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇರುವಾಗ ದೇವರು ಅವನನ್ನು ಕರೆದುಕೊಂಡ ಕಾರಣ ಕಣ್ಮರೆಯಾಗಿ ಕಾಣದೆ ಹೋದನು.
- ಮೆತೂಷೆಲಹನು 969 ವರ್ಷ ಬದುಕಿದನುಆದಿ 5:27
ವಚನಗಳು
ಆದಿ 5:27ಮೆತೂಷೆಲಹನು ಒಟ್ಟು ಒಂಭೈನೂರ ಅರುವತ್ತೊಂಭತ್ತು ವರ್ಷ ಬದುಕಿ ನಂತರ ಸತ್ತನು.
- ಲೆಮೆಕನು 777 ವರ್ಷ ಬದುಕಿದನುಆದಿ 5:31
ವಚನಗಳು
ಆದಿ 5:31ಲೆಮೆಕನು ಒಟ್ಟು ಏಳುನೂರ ಎಪ್ಪತ್ತೇಳು ವರ್ಷ ಬದುಕಿ ನಂತರ ಸತ್ತನು.
- ನೋಹನು ಜಲಪ್ರಳಯದ ನಂತರ 350 ವರ್ಷ, ಒಟ್ಟು 950 ವರ್ಷ ಬದುಕಿದನುಆದಿ 9:28–29
ವಚನಗಳು
ಆದಿ 9:28–29ಪ್ರಳಯವಾದ ಮೇಲೆ ನೋಹನು ಮುನ್ನೂರೈವತ್ತು ವರ್ಷ ಬದುಕಿದನು. ನೋಹನು ಒಂಭೈನೂರ ಐವತ್ತು ವರ್ಷ ಬದುಕಿ ಸತ್ತನು.
ಜಲಪ್ರಳಯದ ನಂತರ
- ಶೇಮನು: 100ನೆಯ ವಯಸ್ಸಿನಲ್ಲಿ ಮಗನು, ಆ ಮೇಲೆ ಇನ್ನೂ 500 ವರ್ಷಆದಿ 11:10–11
ವಚನಗಳು
ಆದಿ 11:10–11ಶೇಮನ ವಂಶವೃಕ್ಷ: ಜಲಪ್ರಳಯವು ಕಳೆದು ಎರಡು ವರ್ಷಗಳಾದ ಮೇಲೆ ಶೇಮನು ನೂರು ವರ್ಷದವನಾಗಿ ಅರ್ಪಕ್ಷದನನ್ನು ಪಡೆದನು. ಶೇಮನು ಅರ್ಪಕ್ಷದನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಐನೂರು ವರ್ಷ ಬದುಕಿದನು.
- ಅರ್ಪಕ್ಷದನು: 35ನೆಯ ವಯಸ್ಸಿನಲ್ಲಿ ಮಗನು, ಆ ಮೇಲೆ ಇನ್ನೂ 403 ವರ್ಷಆದಿ 11:12–13
ವಚನಗಳು
ಆದಿ 11:12–13ಅರ್ಪಕ್ಷದನು ಮೂವತ್ತೈದು ವರ್ಷದವನಾಗಿ ಶೆಲಹನನ್ನು ಪಡೆದನು. ಅರ್ಪಕ್ಷದನು ಶೆಲಹನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರ್ಷ ಬದುಕಿದನು.
- ಶೆಲಹನು: 30ನೆಯ ವಯಸ್ಸಿನಲ್ಲಿ ಮಗನು, ಆ ಮೇಲೆ ಇನ್ನೂ 403 ವರ್ಷಆದಿ 11:14–15
ವಚನಗಳು
ಆದಿ 11:14–15ಶೆಲಹನು ಮೂವತ್ತನಾಲ್ಕು ವರ್ಷದವನಾಗಿ ಎಬರನನ್ನು ಪಡೆದನು. ಶೆಲಹನು ಎಬರನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂರು ವರ್ಷ ಬದುಕಿದನು.
- ಏಬೆರನು: 34ನೆಯ ವಯಸ್ಸಿನಲ್ಲಿ ಮಗನು, ಆ ಮೇಲೆ ಇನ್ನೂ 430 ವರ್ಷಆದಿ 11:16–17
ವಚನಗಳು
ಆದಿ 11:16–17ಎಬರನು ಮೂವತ್ತನಾಲ್ಕು ವರ್ಷದವನಾಗಿ ಪೆಲೆಗನನ್ನು ಪಡೆದನು. ಎಬರನು ಪೆಲೆಗನನ್ನು ಪಡೆದ ಮೇಲೆ ಗಂಡು ಹೆಣ್ಣು ಮಕ್ಕಳನ್ನು ಪಡೆದು ನಾನೂರ ಮೂವತ್ತು ವರ್ಷ ಬದುಕಿದನು.
- ಪೆಲೆಗನು: 30ನೆಯ ವಯಸ್ಸಿನಲ್ಲಿ ಮಗನು, ಆ ಮೇಲೆ ಇನ್ನೂ 209 ವರ್ಷಆದಿ 11:18–19
ವಚನಗಳು
ಆದಿ 11:18–19ಪೆಲೆಗನು ಮೂವತ್ತು ವರ್ಷದವನಾಗಿ ರೆಗೂವನನ್ನು ಪಡೆದನು. ಪೆಲೆಗನು ರೆಗೂವನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಇನ್ನೂರ ಒಂಭತ್ತು ವರ್ಷ ಬದುಕಿದನು.
- ನಾಹೋರನು: 29ನೆಯ ವಯಸ್ಸಿನಲ್ಲಿ ಮಗನು, ಆ ಮೇಲೆ ಇನ್ನೂ 119 ವರ್ಷಆದಿ 11:24–25
ವಚನಗಳು
ಆದಿ 11:24–25ನಾಹೋರನು ಇಪ್ಪತ್ತೊಂಭತ್ತು ವರ್ಷದವನಾಗಿ ತೆರಹನನ್ನು ಪಡೆದನು. ನಾಹೋರ್ ತೆರಹನನ್ನು ಪಡೆದ ಮೇಲೆ ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ನೂರ ಹತ್ತೊಂಬತ್ತು ವರ್ಷ ಬದುಕಿದನು.
- ತೆರಹನು 205 ವರ್ಷ ಬದುಕಿ ಹಾರಾನಿನಲ್ಲಿ ಸತ್ತನುಆದಿ 11:32
ವಚನಗಳು
ಆದಿ 11:32ತೆರಹನು ಇನ್ನೂರ ಐದು ವರ್ಷ ಬದುಕಿ ನಂತರ ಹಾರಾನಿನಲ್ಲಿ ಸತ್ತನು.
ಆ ಮೇಲಿನ ಜೀವನಗಳು
- ಸಾರಳು 127 ವರ್ಷ ಬದುಕಿದಳುಆದಿ 23:1
ವಚನಗಳು
ಆದಿ 23:1ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದಳು. ಇದು ಅವಳ ಒಟ್ಟು ಜೀವಮಾನ ಕಾಲದ ವರ್ಷಗಳು.
- ಅಬ್ರಹಾಮನು 175 ವರ್ಷ ಬದುಕಿದನುಆದಿ 25:7
ವಚನಗಳು
ಆದಿ 25:7ಅಬ್ರಹಾಮನು ನೂರ ಎಪ್ಪತ್ತೈದು ವರ್ಷ ಬದುಕಿದನು.
- ಇಷ್ಮಾಯೇಲನೂ ದೀರ್ಘಕಾಲ ಬದುಕಿದನುಆದಿ 25:17
ವಚನಗಳು
ಆದಿ 25:17ಇಷ್ಮಾಯೇಲನು ನೂರಮೂವತ್ತೇಳು ವರ್ಷ ಬದುಕಿದನು. ನಂತರ ಅವನು ಪ್ರಾಣ ಬಿಟ್ಟು ತನ್ನ ಪೂರ್ವಿಕರ ಬಳಿಗೆ ಸೇರಿದನು.
- ಇಸಾಕನು 180 ವರ್ಷ ಬದುಕಿದನುಆದಿ 35:28
ವಚನಗಳು
ಆದಿ 35:28ಇಸಾಕನು ದಿನತುಂಬಿದ ಮುದುಕನಾಗಿದ್ದು ನೂರ ಎಂಭತ್ತನೆಯ ವರ್ಷದಲ್ಲಿ ಪ್ರಾಣಬಿಟ್ಟು ತನ್ನ ಪೂರ್ವಿಕರ ಬಳಿಗೆ ಸೇರಿದನು.
- ಯಾಕೋಬನು 147 ವರ್ಷ ಬದುಕಿದನು, ಕೊನೆಯ ಹದಿನೇಳು ವರ್ಷ ಐಗುಪ್ತದಲ್ಲಿಆದಿ 47:28
ವಚನಗಳು
ಆದಿ 47:28ಯಾಕೋಬನು ಐಗುಪ್ತ ದೇಶದಲ್ಲಿ ಹದಿನೇಳು ವರ್ಷ ಬದುಕಿದನು. ಅವನ ಜೀವಿತ ಕಾಲದ ದಿನಗಳು ನೂರ ನಲ್ವತ್ತೇಳು ವರ್ಷಗಳು.
- ಯೋಸೇಫನು 110ನೆಯ ವಯಸ್ಸಿನಲ್ಲಿ ಸತ್ತನು, ಐಗುಪ್ತದಲ್ಲಿ ಅವನ ಶವಕ್ಕೆ ಸುಗಂಧದ್ರವ್ಯ ಹಾಕಲಾಯಿತುಆದಿ 50:26
ವಚನಗಳು
ಆದಿ 50:26ಯೋಸೇಫನು ನೂರಹತ್ತು ವರ್ಷದವನಾಗಿ ಪ್ರಾಣ ಬಿಟ್ಟನು. ಅವನ ಶವಕ್ಕೆ ಸುಗಂಧದ್ರವ್ಯಗಳನ್ನು ತುಂಬಿ ಐಗುಪ್ತ ದೇಶದೊಳಗೆ ಅದನ್ನು ಪೆಟ್ಟಿಗೆಯಲ್ಲಿ ಇರಿಸಿದರು.
- ಲೇವಿಯು 137 ವರ್ಷ, ಕೆಹಾತನು 133, ಅಮ್ರಾಮನು 137 ವರ್ಷ ಬದುಕಿದರುವಿಮೋ 6:16, ವಿಮೋ 6:18, ವಿಮೋ 6:20
ವಚನಗಳು
ವಿಮೋ 6:16ವಂಶಾವಳಿಗಳ ಪ್ರಕಾರ ಲೇವಿಯರ ಮಕ್ಕಳು: ಗೇರ್ಷೋನ್, ಕೆಹಾತ್, ಮೆರಾರೀ, ಇವರೇ. ಲೇವಿಯು ನೂರ ಮೂವತ್ತೇಳು ವರ್ಷ ಬದುಕಿದ್ದನು.
ವಿಮೋ 6:18ಕೊಹಾತನ ಮಕ್ಕಳು: ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್. ಕೆಹಾತನು ನೂರ ಮೂವತ್ತಮೂರು ವರ್ಷ ಬದುಕಿದನು.
ವಿಮೋ 6:20ಅಮ್ರಾಮನು ತನ್ನ ತಂದೆಯ ತಂಗಿ ಯೋಕೆಬೆದಳನ್ನು ಮದುವೆಮಾಡಿಕೊಂಡನು. ಆಕೆಯು ಅವನಿಗೆ ಆರೋನನನ್ನೂ, ಮೋಶೆಯನ್ನೂ ಹೆತ್ತಳು. ಅಮ್ರಾಮನು ನೂರಮೂವತ್ತೇಳು ವರ್ಷ ಬದುಕಿದನು.
- ಆರೋನನು 123ನೆಯ ವಯಸ್ಸಿನಲ್ಲಿ ಹೋರ್ ಬೆಟ್ಟದ ಮೇಲೆ ಸತ್ತನುಅರಣ್ಯ 33:39
ವಚನಗಳು
ಅರಣ್ಯ 33:39ಆರೋನನು ಹೋರ್ ಬೆಟ್ಟದಲ್ಲಿ ಸತ್ತಾಗ ಅವನು ನೂರ ಇಪ್ಪತ್ತಮೂರು ವರ್ಷದವನಾಗಿದ್ದನು.
- ಮೋಶೆಯು 120ನೆಯ ವಯಸ್ಸಿನಲ್ಲಿ ಸತ್ತನು, ಅವನ ಕಣ್ಣು ಮೊಬ್ಬಾಗಿರಲಿಲ್ಲಧರ್ಮೋ 34:7
ವಚನಗಳು
ಧರ್ಮೋ 34:7ಮೋಶೆ ಸಾಯುವಾಗ ನೂರಿಪ್ಪತ್ತು ವರ್ಷದವನಾಗಿದ್ದನು. ಅವನ ಕಣ್ಣು ಮೊಬ್ಬಾಗಲಿಲ್ಲ, ಅವನ ಜೀವಕಳೆ ಕುಂದಿಹೋಗಿರಲಿಲ್ಲ.
- 85 ವರ್ಷದ ಕಾಲೇಬನು: ಮೋಶೆಯು ಕಳುಹಿಸಿದ ದಿನದಷ್ಟೇ ಈಗಲೂ ಬಲವಿದೆಯೆಹೋ 14:10–11
ವಚನಗಳು
ಯೆಹೋ 14:10–11ಯೆಹೋವನು ಈ ಮಾತುಗಳನ್ನು ಮೋಶೆಗೆ ಹೇಳಿದಂದಿನಿಂದ ಇಸ್ರಾಯೇಲ್ಯರು ಅರಣ್ಯದಲ್ಲಿ ಅಲೆಯುತ್ತಿದ್ದ ವರ್ಷಗಳು ಸೇರಿ ನಲ್ವತ್ತೈದು ವರ್ಷಗಳು ದಾಟಿದವು. ಯೆಹೋವನು ತಾನು ನುಡಿದಂತೆಯೇ ಈ ಕಾಲವೆಲ್ಲಾ ನನ್ನನ್ನು ಜೀವದಿಂದುಳಿಸಿದ್ದಾನೆ. ಈಗ ನಾನು ಎಂಭತ್ತೈದು ವರ್ಷದವನಾಗಿದ್ದೇನೆ. ಮೋಶೆಯು ನನ್ನನ್ನು ಕಳುಹಿಸಿದಾಗ ನನಗೆಷ್ಟು ಬಲವಿತ್ತೋ ಈಗಲೂ ಅಷ್ಟೇ ಬಲವಿದೆ. ಯುದ್ಧಮಾಡುವುದಕ್ಕೂ ವಿಶೇಷ ಕಾರ್ಯಗಳನ್ನು ನಿರ್ವಹಿಸುವುದಕ್ಕೂ ನನಗೆ ಮೊದಲಿನಂತೆಯೇ ಈಗಲೂ ಬಲವಿದೆ.
- ಯೆಹೋಶುವನು 110ನೆಯ ವಯಸ್ಸಿನಲ್ಲಿ ಸತ್ತನುಯೆಹೋ 24:29
ವಚನಗಳು
ಯೆಹೋ 24:29ಇದಾದ ಮೇಲೆ ಯೆಹೋವನ ಸೇವಕನಾದ ನೂನನ ಮಗನಾದ ಯೆಹೋಶುವನು ನೂರಹತ್ತು ವರ್ಷದವನಾಗಿ ಮರಣಹೊಂದಿದನು.
- ಏಲಿಯು 98 ವರ್ಷದವನಾಗಿದ್ದು ಕಣ್ಣು ಕಾಣುತ್ತಿರಲಿಲ್ಲ1 ಸಮು 4:15
ವಚನಗಳು
1 ಸಮು 4:15ಕಣ್ಣುಗಳು ಇಂಗಿಹೋಗಿ ಕುರುಡನಾಗಿದ್ದನು.
- ಎಂಬತ್ತು ವರ್ಷದ ಬರ್ಜಿಲ್ಲೈ ಅರಸನಾದ ದಾವೀದನಿಗೆ ಆಹಾರ ಒದಗಿಸಿದ್ದನು2 ಸಮು 19:32
ವಚನಗಳು
2 ಸಮು 19:32ಇವನು ಎಂಬತ್ತು ವರ್ಷದ ಮುದುಕನು. ಇವನು ಬಹು ಶ್ರೀಮಂತನಾಗಿದ್ದುದರಿಂದ ದಾವೀದನು ಮಹನಯಿಮಿನಲ್ಲಿದ್ದ ಕಾಲದಲ್ಲೆಲ್ಲಾ ಅವನ ಜೀವನಕ್ಕೆ ಬೇಕಾದದ್ದನ್ನು ಇವನೇ ಒದಗಿಸಿಕೊಡುತ್ತಿದ್ದನು.
- ಯಾಜಕನಾದ ಯೆಹೋಯಾದನು 130ನೆಯ ವಯಸ್ಸಿನಲ್ಲಿ ಸತ್ತನು2 ಪೂರ್ವ 24:15
ವಚನಗಳು
2 ಪೂರ್ವ 24:15ಯೆಹೋಯಾದನು ಮುಪ್ಪಿನ ಮುದುಕನಾಗಿ ಮರಣ ಹೊಂದಿದನು; ಅವನು ಸಾಯುವಾಗ ನೂರಮೂವತ್ತು ವರ್ಷದವನಾಗಿದ್ದನು.
- ಯೋಬನು ಇನ್ನೂ 140 ವರ್ಷ ಬದುಕಿ ನಾಲ್ಕು ತಲೆಮಾರುಗಳನ್ನು ನೋಡಿದನುಯೋಬ 42:16–17
ವಚನಗಳು
ಯೋಬ 42:16–17ಆ ಮೇಲೆ ಯೋಬನು ನೂರನಲ್ವತ್ತು ವರ್ಷ ಬಾಳಿ ತನ್ನ ಮಕ್ಕಳನ್ನು, ಮೊಮ್ಮಕ್ಕಳನ್ನು ಅಂತು ತನ್ನ ಸಂತಾನದ ನಾಲ್ಕು ತಲೆಗಳನ್ನು ಕಂಡನು. ತರುವಾಯ ಯೋಬನು ಮುಪ್ಪಿನ ಮುದುಕನಾಗಿ ಮರಣ ಹೊಂದಿದನು.
- ಎಂಬತ್ತನಾಲ್ಕು ವರ್ಷದ ವರೆಗೆ ವಿಧವೆಯಾಗಿದ್ದ ಅನ್ನಳು ದೇವಾಲಯವನ್ನು ಬಿಟ್ಟುಹೋಗುತ್ತಿರಲಿಲ್ಲಲೂಕ 2:36–37
ವಚನಗಳು
ಲೂಕ 2:36–37ಇದಲ್ಲದೆ ಅಸೇರನ ಕುಲದ ಫನುವೇಲನ ಮಗಳಾದ ಅನ್ನಳೆಂಬ ಒಬ್ಬ ಪ್ರವಾದಿನಿ ಇದ್ದಳು. ಆಕೆ ಬಹಳ ಮುಪ್ಪಿನವಳು. ಮದುವೆಯಾಗಿ ಏಳು ವರ್ಷ ಗಂಡನ ಕೂಡ ಸಂಸಾರ ಮಾಡಿ ವಿಧವೆಯಾಗಿದ್ದಳು, ಅವಳು ಎಂಭತ್ತುನಾಲ್ಕು ವರ್ಷದವಳಾಗಿದ್ದಳು. ಆಕೆ ದೇವಾಲಯವನ್ನು ಬಿಟ್ಟುಹೋಗದೆ ಉಪವಾಸ ವಿಜ್ಞಾಪನೆಗಳಿಂದ ರಾತ್ರಿ ಹಗಲೂ ದೇವರನ್ನು ಆರಾಧಿಸುತ್ತಿದ್ದಳು.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು