Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ವಿಷಯಗಳು › ನಾಲ್ವತ್ತು ಎಂಬ ಸಂಖ್ಯೆ

ಆಶ್ಚರ್ಯಕರ ವಿವರಗಳು

ಬೈಬಲಿನಲ್ಲಿ ನಾಲ್ವತ್ತು ಎಂಬ ಸಂಖ್ಯೆ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ ನ 31 ವಾಕ್ಯಭಾಗಗಳು, ಸಾಲು ಸಾಲಾಗಿ.

ನಾಲ್ವತ್ತು ದಿನಗಳು

  • ನಾಲ್ವತ್ತು ದಿನ ಹಗಲೂ ನಾಲ್ವತ್ತು ರಾತ್ರಿಯೂ ಭೂಮಿಯ ಮೇಲೆ ಮಳೆ ಸುರಿಯಿತುಆದಿ 7:4, ಆದಿ 7:12, ಆದಿ 7:17
    ವಚನಗಳು
    ಆದಿ 7:4ಏಳು ದಿನಗಳ ನಂತರ ನಾನು ಭೂಮಿಯ ಮೇಲೆ ನಲ್ವತ್ತು ದಿನ ಹಗಲಿರುಳು ಮಳೆಯನ್ನು ಸುರಿಸಿ, ನಾನು ಸೃಷ್ಟಿಮಾಡಿದ ಜೀವರಾಶಿಗಳನ್ನೆಲ್ಲಾ ಭೂಮಿಯ ಮೇಲಿನಿಂದ ನಾಶಮಾಡುತ್ತೇನೆ” ಎಂದು ಹೇಳಿದನು.
    ಆದಿ 7:12ನಲ್ವತ್ತು ದಿನ ಹಗಲಿರುಳು ಭೂಮಿಯ ಮೇಲೆ ಬಿರುಮಳೆ ಸುರಿಯಿತು.
    ಆದಿ 7:17ಜಲಪ್ರಳಯವು ನಲ್ವತ್ತು ದಿನ ಭೂಮಿಯ ಮೇಲೆ ಬಂದು ನೀರು ಹೆಚ್ಚುತ್ತಾ ನಾವೆಯನ್ನು ಮೇಲಕ್ಕೆ ಎತ್ತಲು ಅದು ನೀರಿನ ಮೇಲೆ ತೇಲಾಡಿತು.
  • ನಾಲ್ವತ್ತು ದಿನಗಳಾದ ಮೇಲೆ ನೋಹನು ನಾವೆಯ ಕಿಟಿಕಿಯನ್ನು ತೆರೆದನುಆದಿ 8:6
    ವಚನಗಳು
    ಆದಿ 8:6ನಲ್ವತ್ತು ದಿನಗಳಾದ ಮೇಲೆ ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದು ಕಾಗೆಯೊಂದನ್ನು ಹೊರಕ್ಕೆ ಬಿಟ್ಟನು.
  • ಯಾಕೋಬನ ಶವಕ್ಕೆ ಸುಗಂಧದ್ರವ್ಯ ಹಾಕಲು ನಾಲ್ವತ್ತು ದಿನಗಳು ಬೇಕಾದವುಆದಿ 50:3
    ವಚನಗಳು
    ಆದಿ 50:3ನಲ್ವತ್ತು ದಿನಗಳು ಸುಗಂಧದ್ರವ್ಯಗಳನ್ನು ತುಂಬುವ ಪದ್ಧತಿಯಿರುವುದರಿಂದ ಅಷ್ಟು ದಿನ ಸಿದ್ಧಪಡಿಸುತ್ತಾ ಇದ್ದರು. ಐಗುಪ್ತರು ಅವನಿಗೋಸ್ಕರ ಎಪ್ಪತ್ತು ದಿನ ಶೋಕಾಚರಣೆಯಲ್ಲಿದ್ದರು.
  • ಮೋಶೆಯು ನಾಲ್ವತ್ತು ದಿನ ಹಗಲೂ ನಾಲ್ವತ್ತು ರಾತ್ರಿಯೂ ಬೆಟ್ಟದ ಮೇಲೆ ಇದ್ದನುವಿಮೋ 24:18, ವಿಮೋ 34:28, ಧರ್ಮೋ 9:9
    ವಚನಗಳು
    ವಿಮೋ 24:18ಮೋಶೆಯು ಆ ಮೇಘದೊಳಗೆ ಪ್ರವೇಶಿಸಿ ಬೆಟ್ಟವನ್ನೇರಿದನು. ಅವನು ಆ ಬೆಟ್ಟದಲ್ಲಿ ನಲ್ವತ್ತು ದಿನ ಹಗಲಿರುಳು ಆ ಬೆಟ್ಟದಲ್ಲಿಯೇ ಇದ್ದನು.
    ವಿಮೋ 34:28ಮೋಶೆಯು ಆ ಬೆಟ್ಟದಲ್ಲಿ ಯೆಹೋವನ ಸನ್ನಿಧಿಯಲ್ಲಿ ಹಗಲಿರುಳು ನಲ್ವತ್ತು ದಿನ ಇದ್ದನು. ಆ ದಿನಗಳಲ್ಲಿ ಅವನು ಏನೂ ತಿನ್ನಲಿಲ್ಲ, ಏನೂ ಕುಡಿಯಲಿಲ್ಲ. ಆತನು ಒಡಂಬಡಿಕೆಯ ವಾಕ್ಯಗಳನ್ನು ಅಂದರೆ ಹತ್ತು ಆಜ್ಞೆಗಳನ್ನು ಆ ಕಲ್ಲಿನ ಹಲಗೆಗಳ ಮೇಲೆ ಬರೆದನು.
    ಧರ್ಮೋ 9:9ಯೆಹೋವನು ನಿಮ್ಮ ಸಂಗಡ ಮಾಡಿದ ನಿಬಂಧನೆಯನ್ನು ಬರೆದ ಆ ಕಲ್ಲಿನ ಹಲಿಗೆಗಳನ್ನು ತೆಗೆದುಕೊಳ್ಳುವುದಕ್ಕೆ ನಾನು ಬೆಟ್ಟವನ್ನು ಹತ್ತಿದ್ದಾಗ ನಾನು ಅನ್ನ ಪಾನಗಳನ್ನು ಬಿಟ್ಟು ಹಗಲಿರುಳು ನಲ್ವತ್ತು ದಿನ ಆ ಬೆಟ್ಟದಲ್ಲಿದ್ದೆನು.
  • ನಾಲ್ವತ್ತು ದಿನಗಳ ನಂತರ ಗೂಢಚಾರರು ಹಿಂದಿರುಗಿದರುಅರಣ್ಯ 13:25
    ವಚನಗಳು
    ಅರಣ್ಯ 13:25ಅವರು ನಲ್ವತ್ತು ದಿನಗಳು ಆ ದೇಶವನ್ನು ಸಂಚರಿಸಿ ನೋಡಿದರು.
  • ಗೊಲ್ಯಾತನು ನಾಲ್ವತ್ತು ದಿನ ಬೆಳಿಗ್ಗೆಯೂ ಸಾಯಂಕಾಲವೂ ಹೊರಗೆ ಬಂದನು1 ಸಮು 17:16
    ವಚನಗಳು
    1 ಸಮು 17:16ಆ ಫಿಲಿಷ್ಟಿಯನು ನಲ್ವತ್ತು ದಿನ ಉದಯದಲ್ಲಿಯೂ, ಸಾಯಂಕಾಲದಲ್ಲಿಯೂ, ಬಂದು ಅದೇ ಪ್ರಕಾರ ಕೂಗುತ್ತಾ ಸವಾಲು ಹಾಕುತ್ತಾ ಯುದ್ಧಕ್ಕೆ ನಿಲ್ಲುತ್ತಿದ್ದನು.
  • ಎಲೀಯನು ನಾಲ್ವತ್ತು ದಿನ ಹಗಲಿರುಳು ನಡೆದು ಹೋರೇಬಿಗೆ ಹೋದನು1 ಅರಸು 19:8
    ವಚನಗಳು
    1 ಅರಸು 19:8ಅವನು ಎದ್ದು ತಿಂದು, ಕುಡಿದು ಅದರ ಬಲದಿಂದ ನಲ್ವತ್ತು ದಿನ ಹಗಲಿರುಳು ಪ್ರಯಾಣ ಮಾಡಿ ದೇವಗಿರಿಯಾದ
  • ಯೋನನು: ಇನ್ನು ನಾಲ್ವತ್ತು ದಿನಗಳಲ್ಲಿ ನಿನೆವೆಯು ನಾಶವಾಗುವುದುಯೋನ 3:4
    ವಚನಗಳು
    ಯೋನ 3:4ಯೋನನು ಪಟ್ಟಣವನ್ನು ಪ್ರವೇಶಿಸಿ ಒಂದು ದಿನದಷ್ಟು ದೂರ ಪ್ರಯಾಣಮಾಡಿದ ನಂತರ “ನಲವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವುದು” ಎಂದು ಸಾರತೊಡಗಿದನು.
  • ಯೇಸು ನಾಲ್ವತ್ತು ದಿನ ಹಗಲೂ ನಾಲ್ವತ್ತು ರಾತ್ರಿಯೂ ಉಪವಾಸಮಾಡಿದನುಮತ್ತಾ 4:2
    ವಚನಗಳು
    ಮತ್ತಾ 4:2ಆತನು ನಲವತ್ತು ದಿನ ಹಗಲಿರುಳು ಉಪವಾಸವಿದ್ದ ತರುವಾಯ ಆತನಿಗೆ ಹಸಿವಾಯಿತು.
  • ಪುನರುತ್ಥಾನದ ನಂತರ ಯೇಸು ನಾಲ್ವತ್ತು ದಿನಗಳ ಅವಧಿಯಲ್ಲಿ ಕಾಣಿಸಿಕೊಂಡನುಅ. ಕೃ 1:3
    ವಚನಗಳು
    ಅ. ಕೃ 1:3ಯೇಸುವು ಬಾಧೆಪಟ್ಟು ಸತ್ತ ನಂತರ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ಸಂಭವಗಳ ಮೂಲಕ ತಾನು ಆರಿಸಿಕೊಂಡಿದ್ದ ಅಪೊಸ್ತಲರಿಗೆ ಸ್ಪಷ್ಟಪಡಿಸಿದನು. ಸತತವಾಗಿ ನಲವತ್ತು ದಿನಗಳ ತನಕ ಅವರಿಗೆ ಕಾಣಿಸಿಕೊಳ್ಳುತ್ತಾ ದೇವರ ರಾಜ್ಯದ ವಿಷಯವನ್ನು ಕುರಿತು ಅವರಿಗೆ ಬೋಧಿಸಿದನು.

ನಾಲ್ವತ್ತು ವರ್ಷಗಳು

  • ಇಸ್ರಾಯೇಲರು ಅರಣ್ಯದಲ್ಲಿ ನಾಲ್ವತ್ತು ವರ್ಷ ಮನ್ನವನ್ನು ತಿಂದರುವಿಮೋ 16:35
    ವಚನಗಳು
    ವಿಮೋ 16:35ಇಸ್ರಾಯೇಲರು ತಾವು ವಾಸಮಾಡಲಿರುವ ಪ್ರದೇಶಕ್ಕೆ ಬರುವವರೆಗೆ ಅಂದರೆ ಕಾನಾನ್ ದೇಶವನ್ನು ಬಂದು ಸೇರುವವರೆಗೆ ನಲ್ವತ್ತು ವರ್ಷ ಮನ್ನವನ್ನೇ ಊಟಮಾಡಿದರು.
  • ನಾಲ್ವತ್ತು ವರ್ಷಗಳ ಅಲೆದಾಟ, ಸಂಚರಿಸಿ ನೋಡಿದ ಪ್ರತಿಯೊಂದು ದಿನಕ್ಕೆ ಒಂದು ವರ್ಷಅರಣ್ಯ 14:34
    ವಚನಗಳು
    ಅರಣ್ಯ 14:34ನೀವು ಆ ದೇಶವನ್ನು ಸಂಚರಿಸಿ ನೋಡಿದ ನಲ್ವತ್ತು ದಿನಗಳ ಪ್ರಕಾರ, ಒಂದು ದಿನಕ್ಕೆ ಒಂದು ವರ್ಷವಾಗಿ ಈ ಪ್ರಕಾರ ನಲ್ವತ್ತು ವರ್ಷ ನಿಮ್ಮ ಪಾಪಫಲವನ್ನು ಅನುಭವಿಸುವವರಾಗಿ ನಾನು ಕೈಬಿಟ್ಟವರ ಗತಿ ಎಂಥದೆಂದು ತಿಳಿದುಕೊಳ್ಳಬೇಕು.
  • ಇಸಾಕನು ನಾಲ್ವತ್ತನೆಯ ವಯಸ್ಸಿನಲ್ಲಿ ರೆಬೆಕ್ಕಳನ್ನು ಮದುವೆಯಾದನುಆದಿ 25:20
    ವಚನಗಳು
    ಆದಿ 25:20ಅಬ್ರಹಾಮನು ಇಸಾಕನನ್ನು ಪಡೆದನು. ಇಸಾಕನು ನಲವತ್ತು ವರ್ಷದವನಾದಾಗ ಅರಾಮ್ಯನಾದ ಬೆತೂವೇಲನ ಮಗಳೂ ಅರಾಮ್ಯನಾದ ಲಾಬಾನನ ತಂಗಿಯೂ ಆಗಿದ್ದ ರೆಬೆಕ್ಕಳನ್ನು ಪದ್ದನ್ ಅರಾಮಿನಿಂದ ಕರೆದುತಂದು ಹೆಂಡತಿಯನ್ನಾಗಿ ಮಾಡಿಕೊಂಡನು.
  • ಮೋಶೆಯು ನಾಲ್ವತ್ತು ವರ್ಷದವನಾಗಿದ್ದಾಗ ತನ್ನ ಜನರನ್ನು ನೋಡಲು ಹೋದನು; ನಾಲ್ವತ್ತು ವರ್ಷಗಳ ನಂತರ ಪೊದೆಅ. ಕೃ 7:23, ಅ. ಕೃ 7:30
    ವಚನಗಳು
    ಅ. ಕೃ 7:23“ಅವನಿಗೆ ನಲವತ್ತು ವರ್ಷ ವಯಸ್ಸು ತುಂಬುತ್ತಾ ಇರಲು, ಇಸ್ರಾಯೇಲ್ ವಂಶಸ್ಥರಾದ ತನ್ನ ಸಹೋದರರನ್ನು ಹೋಗಿ ನೋಡಬೇಕೆಂಬ ಆಸೆಯು ಅವನ ಹೃದಯದಲ್ಲಿ ಹುಟ್ಟಿತು.
    ಅ. ಕೃ 7:30“ನಲವತ್ತು ವರ್ಷ ತುಂಬಿದ ಮೇಲೆ ದೇವದೂತನು ಸೀನಾಯಿಬೆಟ್ಟದ ಅಡವಿಯಲ್ಲಿ ಮುಳ್ಳಿನ ಪೊದೆಯೊಳಗೆ ಉರಿಯುವ ಬೆಂಕಿಯಲ್ಲಿ ಅವನಿಗೆ ಕಾಣಿಸಿಕೊಂಡನು.
  • ಅನೇಕ ನ್ಯಾಯಸ್ಥಾಪಕರ ಕಾಲದಲ್ಲಿ ದೇಶಕ್ಕೆ ನಾಲ್ವತ್ತು ವರ್ಷ ವಿಶ್ರಾಂತಿಯಿತ್ತುನ್ಯಾಯ 3:11, ನ್ಯಾಯ 5:31, ನ್ಯಾಯ 8:28
    ವಚನಗಳು
    ನ್ಯಾಯ 3:11ದೇಶದಲ್ಲಿ ನಲ್ವತ್ತು ವರ್ಷಗಳ ಕಾಲ ಸಮಾಧಾನವಿತ್ತು. ತರುವಾಯ ಕೆನಜನ ಮಗನಾದ ಒತ್ನೀಯೇಲನು ಮರಣಹೊಂದಿದನು.
    ನ್ಯಾಯ 5:31ಯೆಹೋವನ ಎಲ್ಲಾ ಶತ್ರುಗಳೂ ಹೀಗೆಯೇ ನಾಶವಾಗಲಿ. ಆತನನ್ನು ಪ್ರೀತಿಸುವ ಭಕ್ತರು ಪ್ರಕಾಶದಿಂದ ಉದಯಿಸುವ ಸೂರ್ಯನಂತಿರಲಿ.” ಅನಂತರ ದೇಶದಲ್ಲಿ ನಲವತ್ತು ವರ್ಷ ಸಮಾಧಾನವಿತ್ತು.
    ನ್ಯಾಯ 8:28ಮಿದ್ಯಾನ್ಯರು ಇಸ್ರಾಯೇಲ್ಯರ ಮುಂದೆ ಬಹಳವಾಗಿ ತಗ್ಗಿಸಲ್ಪಟ್ಟರು; ಅವರು ಪುನಃ ತಲೆಯೆತ್ತಲಿಲ್ಲ. ಗಿದ್ಯೋನನ ಜೀವಮಾನದಲ್ಲಿ ನಲ್ವತ್ತು ವರ್ಷಗಳ ಕಾಲ ದೇಶದಲ್ಲಿ ಸಮಾಧಾನವಿತ್ತು.
  • ಫಿಲಿಷ್ಟಿಯರು ನಾಲ್ವತ್ತು ವರ್ಷ ಇಸ್ರಾಯೇಲರನ್ನು ಆಳಿದರುನ್ಯಾಯ 13:1
    ವಚನಗಳು
    ನ್ಯಾಯ 13:1ಇಸ್ರಾಯೇಲರು ತಿರುಗಿ ಯೆಹೋವನ ದೃಷ್ಟಿಯಲ್ಲಿ ದ್ರೋಹಿಗಳಾದುದರಿಂದ ಆತನು ಅವರನ್ನು ನಲ್ವತ್ತು ವರ್ಷಗಳ ಕಾಲ ಫಿಲಿಷ್ಟಿಯರ ಕೈಗೆ ಒಪ್ಪಿಸಿದನು.
  • ಏಲಿಯು ನಾಲ್ವತ್ತು ವರ್ಷ ಇಸ್ರಾಯೇಲರಿಗೆ ನ್ಯಾಯಾಧಿಪತಿಯಾಗಿದ್ದನು1 ಸಮು 4:18
    ವಚನಗಳು
    1 ಸಮು 4:18ಮುದುಕನೂ, ಸ್ಥೂಲಕಾಯನೂ ಆದ ಏಲಿಯು ದೇವರ ಒಡಂಬಡಿಕೆಯ ಮಂಜೂಷದ ವರ್ತಮಾನವನ್ನು ಕೇಳಿದೊಡನೆಯೇ ಪೀಠದಿಂದ ಹಿಂದಕ್ಕೆ ಬಾಗಿಲಿನ ಕಡೆಗೆ ಬಿದ್ದು ಕುತ್ತಿಗೆ ಮುರಿದು ಸತ್ತನು. ಅವನು ಇಸ್ರಾಯೇಲರನ್ನು ನಲ್ವತು ವರ್ಷ ಪಾಲಿಸಿದ್ದನು.
  • ಸೌಲನ ಕೆಳಗೆ ನಾಲ್ವತ್ತು ವರ್ಷ, ಎಂದು ಪೌಲನು ಹೇಳುತ್ತಾನೆಅ. ಕೃ 13:21
    ವಚನಗಳು
    ಅ. ಕೃ 13:21ತರುವಾಯ ಅವರು ತಮಗೆ ಅರಸನು ಬೇಕೆಂದು ಕೇಳಿಕೊಳ್ಳಲು, ದೇವರು ಅವರಿಗೆ ಬೆನ್ಯಾಮೀನನ ಕುಲದ ಕೀಷನ ಮಗನಾದ ಸೌಲನನ್ನು ರಾಜನನ್ನಾಗಿ ಕೊಟ್ಟನು. ಅವನು ಅವರನ್ನು ನಲವತ್ತು ವರ್ಷ ಆಳಿದನು.
  • ದಾವೀದನು ನಾಲ್ವತ್ತು ವರ್ಷ ಆಳಿದನು: ಹೆಬ್ರೋನಿನಲ್ಲಿ ಏಳು, ಯೆರೂಸಲೇಮಿನಲ್ಲಿ ಮೂವತ್ತಮೂರು2 ಸಮು 5:4, 1 ಅರಸು 2:11
    ವಚನಗಳು
    2 ಸಮು 5:4ದಾವೀದನು ಮೂವತ್ತು ವರ್ಷದವನಾದಾಗ ಅರಸನಾಗಿ, ನಲ್ವತ್ತು ವರ್ಷ ಆಳಿದನು.
    1 ಅರಸು 2:11ದಾವೀದನು ಇಸ್ರಾಯೇಲರನ್ನು ಆಳಿದ್ದು ಒಟ್ಟು ನಲ್ವತ್ತು ವರ್ಷ. ಹೇಗೆಂದರೆ, ಹೆಬ್ರೋನಿನಲ್ಲಿ ಏಳು ವರ್ಷ ಮತ್ತು ಯೆರೂಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳ್ವಿಕೆ ಮಾಡಿದನು.
  • ಸೊಲೊಮೋನನು ನಾಲ್ವತ್ತು ವರ್ಷ ಆಳಿದನು1 ಅರಸು 11:42
    ವಚನಗಳು
    1 ಅರಸು 11:42ಅವನು ಯೆರೂಸಲೇಮಿನಲ್ಲಿದ್ದುಕೊಂಡು ಎಲ್ಲಾ ಇಸ್ರಾಯೇಲರನ್ನು ನಲ್ವತ್ತು ವರ್ಷ ಆಳಿದ ನಂತರ,
  • ಯೋವಾಷನು ಯೆರೂಸಲೇಮಿನಲ್ಲಿ ನಾಲ್ವತ್ತು ವರ್ಷ ಆಳಿದನು2 ಅರಸು 12:1
    ವಚನಗಳು
    2 ಅರಸು 12:1ಯೆಹೋವಾಷನು ಯೇಹುವಿನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಅರಸನಾಗಿ, ಯೆರೂಸಲೇಮಿನಲ್ಲಿ ನಲ್ವತ್ತು ವರ್ಷ ಆಳಿದನು. ಬೇರ್ಷೆಬದವಳಾದ ಚಿಬ್ಯಳು ಇವನ ತಾಯಿ.

ನಾಲ್ವತ್ತು ಏಟುಗಳು

  • ನಾಲ್ವತ್ತಕ್ಕಿಂತ ಹೆಚ್ಚು ಏಟುಗಳನ್ನು ಧರ್ಮಶಾಸ್ತ್ರವು ಅನುಮತಿಸುತ್ತಿರಲಿಲ್ಲಧರ್ಮೋ 25:3
    ವಚನಗಳು
    ಧರ್ಮೋ 25:3ಪೆಟ್ಟುಗಳ ಶಿಕ್ಷೆಯು ನಲ್ವತ್ತಕ್ಕಿಂತ ಹೆಚ್ಚಿರಬಾರದು. ಅದಕ್ಕಿಂತ ಹೆಚ್ಚು ಪೆಟ್ಟುಗಳನ್ನು ನೀವು ಹೊಡಿಸಿದರೆ ನಿಮ್ಮ ಸ್ವದೇಶದವನನ್ನು ನೀವು ಕೇವಲ ನೀಚನನ್ನಾಗಿ ಕಂಡಂತೆ ಆಗುವುದು.
  • ಪೌಲನು ಐದು ಸಾರಿ ಒಂದು ಕಡಿಮೆ ನಾಲ್ವತ್ತು ಏಟುಗಳನ್ನು ತಿಂದನು2 ಕೊರಿ 11:24
    ವಚನಗಳು
    2 ಕೊರಿ 11:24ಐದು ಸಾರಿ ಯೆಹೂದ್ಯರಿಂದ ನನಗೆ ಒಂದು ಕಡಿಮೆ ನಲವತ್ತು ಏಟುಗಳು ಬಿದ್ದವು.

ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು