ಅನ್ವೇಷಿಸಿ › ವಿಷಯಗಳು › ಬೀಗದಕೈಗಳು, ಮುದ್ರೆಗಳು, ಮುದ್ರೆಯುಂಗುರಗಳು
ಆಶ್ಚರ್ಯಕರ ವಿವರಗಳು
ಬೈಬಲಿನಲ್ಲಿ ಬೀಗದಕೈಗಳು, ಮುದ್ರೆಗಳು, ಮುದ್ರೆಯುಂಗುರಗಳು
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ ನ 27 ವಾಕ್ಯಭಾಗಗಳು, ಸಾಲು ಸಾಲಾಗಿ.
ಬೀಗದಕೈಗಳು ಮತ್ತು ಅಗುಳಿಗಳು
- ಏಹೂದನು ಅರಸನಾದ ಎಗ್ಲೋನನ ಮೇಲಂತಸ್ತಿನ ಕೋಣೆಯ ಬಾಗಿಲುಗಳನ್ನು ತನ್ನ ಹಿಂದೆ ಬೀಗ ಹಾಕಿದನುನ್ಯಾಯ 3:23
ವಚನಗಳು
ನ್ಯಾಯ 3:23ಏಹೂದನು ಪಡಸಾಲೆಗೆ ಬಂದು, ಆ ಮೇಲುಪ್ಪರಿಗೆಯ ಕದವನ್ನು ಮುಚ್ಚಿ ಬೀಗಹಾಕಿ ಹೊರಟು ಹೋದನು.
- ಸೇವಕರು ಕಾದು ಕಾದು, ಆ ಮೇಲೆ ಬೀಗದಕೈ ತೆಗೆದುಕೊಂಡು ಬಾಗಿಲುಗಳನ್ನು ತೆರೆದರುನ್ಯಾಯ 3:24–25
ವಚನಗಳು
ನ್ಯಾಯ 3:24–25ತರುವಾಯ ಸೇವಕರು ಅಲ್ಲಿ ಬಂದು ಬಾಗಿಲಿಗೆ ಬೀಗಹಾಕಿರುವುದನ್ನು ಕಂಡು, ಅರಸನು ತಂಪಾದ ಕೋಣೆಗೆ ಸೇರಿದ ಪಾಯಖಾನೆಗೆ ಹೋಗಿರಬೇಕು ಅಂದುಕೊಂಡು ತಮಗೆ ಬೇಸರವಾಗುವ ತನಕ ಕಾಯುತ್ತಾ ಇದ್ದರು. ಆದರೂ ಕದಗಳು ತೆರೆಯಲ್ಪಡದೆ ಇರುವುದನ್ನು ನೋಡಿ ಬೀಗದ ಕೈಯನ್ನು ತೆಗೆದುಕೊಂಡು ಬಾಗಿಲನ್ನು ತೆರೆಯಲು, ಇಗೋ, ಅವರ ಒಡೆಯನು ಸತ್ತುಬಿದ್ದಿದ್ದನು.
- ಲೇವಿಯರು ರಾತ್ರಿಯಲ್ಲಿ ದೇವರ ಆಲಯವನ್ನು ಕಾಯುತ್ತಾ ಪ್ರತಿದಿನ ಬೆಳಿಗ್ಗೆ ಅದನ್ನು ತೆರೆಯುತ್ತಿದ್ದರು1 ಪೂರ್ವ 9:27
ವಚನಗಳು
1 ಪೂರ್ವ 9:27ಅವರು ರಾತ್ರಿಯಲ್ಲಿ ದೇವಾಲಯದ ಸುತ್ತಲೂ ಕಾವಲು ಕಾಯುತ್ತಿದ್ದರು. ಪ್ರತಿದಿನ ಬೆಳಿಗ್ಗೆ ದೇವಾಲಯದ ಬಾಗಿಲು ತೆರೆಯುತ್ತಿದ್ದರು.
- ಯೆರೂಸಲೇಮಿನ ಬಾಗಿಲುಗಳನ್ನು ಕದಗಳು, ಅಗುಳಿಗಳು ಮತ್ತು ಸಲಾಕೆಗಳೊಂದಿಗೆ ಪುನಃ ಕಟ್ಟಲಾಯಿತುನೆಹೆ 3:3
ವಚನಗಳು
ನೆಹೆ 3:3ಮೀನುಬಾಗಿಲನ್ನು ಕಟ್ಟಿದವರು ಹಸ್ಸೆನಾಹನ ಮನೆಯವರು. ಇವರು ಅವುಗಳಿಗೆ ಹೊಸ್ತಿಲುಗಳನ್ನಿಟ್ಟು ಅದಕ್ಕೆ ಬಾಗಿಲು ತಿರುಗುಣಿ ಅಗುಳಿಗಳನ್ನು ಇರಿಸಿದರು.
ಮುದ್ರೆಗಳು ಮತ್ತು ಮುದ್ರೆಯುಂಗುರಗಳು
- ಯೆಹೂದನು ತನ್ನ ಮುದ್ರೆ, ದಾರ ಮತ್ತು ಕೋಲನ್ನು ತಾಮಾರಳ ಬಳಿ ಒತ್ತೆಯಾಗಿ ಬಿಟ್ಟನುಆದಿ 38:18
ವಚನಗಳು
ಆದಿ 38:18ಅವನು, “ಏನು ಒತ್ತೇ ಇಡಲಿ” ಎಂದು ಕೇಳಿದನು. ಆಗ ಆಕೆಯು “ನಿನ್ನ ಮುದ್ರೆ, ನಿನ್ನ ದಾರ, ನಿನ್ನ ಕೈಕೋಲು ಈ ಮೂರನ್ನು ಒತ್ತೆಯಾಗಿ ಇಡು” ಅಂದಳು. ಅವನು ಅವುಗಳನ್ನು ಕೊಟ್ಟು ಆಕೆಯನ್ನು ಸಂಗಮಿಸಲು ಆಕೆಯು ಅವನಿಗೆ ಗರ್ಭಿಣಿಯಾದಳು.
- ತಾಮಾರಳು: ‘ಮುದ್ರೆ, ದಾರ, ಕೋಲು ಇವುಗಳ ಗುರುತನ್ನು ತಿಳಿಯಬಹುದು’ಆದಿ 38:25
ವಚನಗಳು
ಆದಿ 38:25ಆಕೆಯನ್ನು ಹೊರಕ್ಕೆ ತಂದಾಗ, ಆಕೆಯು ತನ್ನ ಮಾವನಿಗೆ, “ಈ ಸಾಮಾನುಗಳನ್ನು ಕಳುಹಿಸಿ, ಇವು ಯಾವ ಮನುಷ್ಯನದೋ, ಅವನಿಂದಲೇ ನಾನು ಗರ್ಭಿಣಿಯಾಗಿದ್ದೇನೆ. ಮುದ್ರೆ, ದಾರ, ಕೋಲು ಇವುಗಳ ಗುರುತನ್ನು ತಿಳಿಯಬಹುದು” ಎಂದು ಕೇಳಿಕೊಂಡಳು.
- ಫರೋಹನು ತನ್ನ ಮುದ್ರೆಯುಂಗುರವನ್ನು ಯೋಸೇಫನ ಬೆರಳಿಗೆ ಇಟ್ಟನುಆದಿ 41:42
ವಚನಗಳು
ಆದಿ 41:42ಫರೋಹನು ತನ್ನ ಕೈಯಿಂದ ಉಂಗುರವನ್ನು ತೆಗೆದು ಯೋಸೇಫನ ಬೆರಳಿಗೆ ತೊಡಿಸಿ ಅವನಿಗೆ ನಾರುಮಡಿಯನ್ನು ಹೊದಿಸಿ ಅವನ ಕೊರಳಿಗೆ ಚಿನ್ನದ ಸರವನ್ನು ಹಾಕಿದನು.
- ಈಜೆಬೆಲಳು ಅಹಾಬನ ಹೆಸರಿನಲ್ಲಿ ಪತ್ರಗಳನ್ನು ಬರೆದು ಅವನ ಮುದ್ರೆಯಿಂದ ಮುದ್ರಿಸಿದಳು1 ಅರಸು 21:8
ವಚನಗಳು
1 ಅರಸು 21:8ಆಮೇಲೆ ಈಜೆಬೆಲಳು ಅಹಾಬನ ಹೆಸರಿನಲ್ಲಿ ಒಂದು ಪತ್ರ ಬರೆದು, ಅದಕ್ಕೆ ಅವನ ಮುದ್ರೆ ಹಾಕಿ, ಅದನ್ನು ನಾಬೋತನ ಊರಿನಲ್ಲಿದ್ದ ಎಲ್ಲಾ ಪ್ರಧಾನ ಪುರುಷರಿಗೂ ಹಿರಿಯರಿಗೂ ಕಳುಹಿಸಿದಳು.
- ಅಹಷ್ವೇರೋಷನು ತನ್ನ ಮುದ್ರೆಯುಂಗುರವನ್ನು ಹಾಮಾನನಿಗೆ ಕೊಟ್ಟನುಎಸ್ತೇ 3:10
ವಚನಗಳು
ಎಸ್ತೇ 3:10ಆಗ ಅರಸನು ತನ್ನ ಕೈಯಲ್ಲಿದ್ದ ಮುದ್ರೆಯುಂಗುರವನ್ನು ತೆಗೆದು ಅಗಾಗನ ವಂಶದವನೂ ಹಮ್ಮೆದಾತನ ಮಗನೂ ಯೆಹೂದ್ಯರ ದ್ವೇಷಿಯೂ ಆದ ಹಾಮಾನನಿಗೆ ಒಪ್ಪಿಸಿದನು.
- ಹಾಮಾನನ ಆಜ್ಞೆಯನ್ನು ಅರಸನ ಹೆಸರಿನಲ್ಲಿ ಬರೆದು ಉಂಗುರದಿಂದ ಮುದ್ರಿಸಲಾಯಿತುಎಸ್ತೇ 3:12
ವಚನಗಳು
ಎಸ್ತೇ 3:12ಮೊದಲನೆಯ ತಿಂಗಳಿನ ಹದಿಮೂರನೆಯ ದಿನದಲ್ಲಿ ರಾಜಲೇಖಕರು ಕೂಡಿ ಬರಬೇಕು ಎಂದು ಅಪ್ಪಣೆಯಾಯಿತು. ಅವರು ಹಾಮಾನನ ಆಜ್ಞಾನುಸಾರ ಉಪರಾಜರಿಗೂ, ಆಯಾ ಸಂಸ್ಥಾನಗಳ ಅಧಿಕಾರಿಗಳಿಗೂ, ಆಯಾ ಜನಾಂಗಗಳ ಅಧಿಪತಿಗಳಿಗೂ ಪತ್ರಗಳನ್ನು ಬರೆದರು. ಆಯಾ ಸಂಸ್ಥಾನಗಳ ಬರಹದಲ್ಲಿಯೂ ಆಯಾ ಜನಾಂಗಗಳ ಭಾಷೆಯಲ್ಲಿಯೂ ಇದ್ದ ಆ ಪತ್ರಗಳು ಅರಸನಾದ ಅಹಷ್ವೇರೋಷನ ಹೆಸರಿನಲ್ಲೇ ಲಿಖಿತವಾಗಿದ್ದವು; ಅವುಗಳಿಗೆ ರಾಜಮುದ್ರೆಯನ್ನು ಹಾಕಲಾಗಿತ್ತು.
- ಹಾಮಾನನಿಂದ ಹಿಂದಕ್ಕೆ ತೆಗೆದುಕೊಂಡ ಉಂಗುರವನ್ನು ಮೊರ್ದೆಕೈಗೆ ಕೊಡಲಾಯಿತುಎಸ್ತೇ 8:2
ವಚನಗಳು
ಎಸ್ತೇ 8:2ಆಗ ಅರಸನು ತಾನು ಹಾಮಾನನಿಗೆ ನೀಡಿದ್ದ ತನ್ನ ಮುದ್ರೆಯುಂಗುರವನ್ನು ಮೊರ್ದೆಕೈಗೆ ಕೊಟ್ಟನು; ಎಸ್ತೇರಳು ಹಾಮಾನನ ಮನೆಯ ಆಡಳಿತವನ್ನು ಅವನಿಗೆ ಒಪ್ಪಿಸಿದಳು.
- ರಾಜಮುದ್ರೆಯುಂಗುರದಿಂದ ಮುದ್ರಿಸಿದ ಆಜ್ಞೆಯನ್ನು ರದ್ದುಮಾಡಲಾಗದುಎಸ್ತೇ 8:8
ವಚನಗಳು
ಎಸ್ತೇ 8:8ಆದುದರಿಂದ ಯೆಹೂದ್ಯರ ವಿಷಯವಾಗಿ ನಿಮಗೆ ಸರಿತೋರುವುದನ್ನು ಅರಸನ ಹೆಸರಿನಲ್ಲಿ ನೀವೂ ಬರೆಯಿಸಿ, ಅದಕ್ಕೆ ರಾಜಮುದ್ರೆಯನ್ನು ಹಾಕಿರಿ” ಎಂದು ಹೇಳಿದನು.
- ಮೊರ್ದೆಕೈ ಪತ್ರಗಳಿಗೆ ಮುದ್ರೆಹಾಕಿ ಕುದುರೆ ಸವಾರರಾದ ಅಂಚೆಯವರ ಮೂಲಕ ಕಳುಹಿಸಿದನುಎಸ್ತೇ 8:10
ವಚನಗಳು
ಎಸ್ತೇ 8:10ಮೊರ್ದೆಕೈಯು ಅರಸನ ಹೆಸರಿನಲ್ಲಿ ಬರೆಯಲ್ಪಟ್ಟ ಆ ಪತ್ರಗಳಿಗೆ ರಾಜಮುದ್ರೆಯನ್ನು ಹಾಕಿ, ಅರಮನೆಯ ಅಶ್ವಾಲಯಗಳಲ್ಲಿ ಹುಟ್ಟಿ ಬೆಳೆದಂಥ, ಅರಸನ ಸೇವೆಗಾಗಿ ಉಪಯೋಗಿಸಲ್ಪಡುತ್ತಿದ್ದ ವೇಗವಾಗಿ ಓಡುವಂಥ ಕುದುರೆಗಳ ಮುಖಾಂತರ ಕಳುಹಿಸಿದನು.
- ಸಿಂಹಗಳ ಗವಿಯನ್ನು ಅರಸನ ಉಂಗುರದಿಂದಲೂ ಅವನ ಪ್ರಧಾನರ ಉಂಗುರಗಳಿಂದಲೂ ಮುದ್ರಿಸಲಾಯಿತುದಾನಿ 6:17
ವಚನಗಳು
ದಾನಿ 6:17ಕೂಡಲೆ ಬಂಡೆಯನ್ನು ತಂದು ಗವಿಯ ಬಾಯನ್ನು ಮುಚ್ಚಿದರು. ದಾನಿಯೇಲನ ಈ ಶಿಕ್ಷೆಯನ್ನು ಯಾರು ಬದಲಾಯಿಸದಂತೆ ರಾಜನ ಮುದ್ರೆಯಿಂದಲೂ, ತನ್ನ ಮುಖಂಡರ ಮುದ್ರೆಯಿಂದಲೂ ಅದಕ್ಕೆ ಮುದ್ರೆಯನ್ನು ಹಾಕಿ ಭದ್ರ ಮಾಡಲಾಯಿತು.
- ಮುಖ್ಯಸ್ಥರ, ಲೇವಿಯರ ಮತ್ತು ಯಾಜಕರ ಹೆಸರುಗಳಿಂದ ಮುದ್ರಿಸಿದ ಲಿಖಿತ ಒಪ್ಪಂದನೆಹೆ 9:38, ನೆಹೆ 10:1
- ಯೆರೆಮೀಯನು ಕ್ರಯಪತ್ರಕ್ಕೆ ಸಹಿಮಾಡಿ ಮುದ್ರೆಹಾಕಿದನು: ಒಂದು ಮುದ್ರಿತ ಪ್ರತಿ, ಒಂದು ತೆರೆದ ಪ್ರತಿಯೆರೆ 32:10–11
ವಚನಗಳು
ಯೆರೆ 32:10–11ಪತ್ರಕ್ಕೆ ಸಹಿ ಹಾಕಿ ಮುಚ್ಚಿ ಆ ಮುಚ್ಚಳಕ್ಕೆ ಸಾಕ್ಷಿಗಳನ್ನು ಹಾಕಿಸಿ, ತಕ್ಕಡಿಯಲ್ಲಿ ಆ ಬೆಳ್ಳಿಯನ್ನು ತೂಗಿ ಅವನಿಗೆ ಕೊಟ್ಟೆನು. ಆ ಮೇಲೆ ನಾನು ಕ್ರಯಪತ್ರವನ್ನು ಅಂದರೆ ನಿಯಮ ಮತ್ತು ಷರತ್ತುಗಳಿಂದ ಮುಚ್ಚಿದ್ದ ಪತ್ರವನ್ನೂ ಹಾಗು ಮುಚ್ಚಳದ ಪತ್ರವನ್ನೂ ತೆಗೆದುಕೊಂಡೆನು.
- ಬಹುಕಾಲ ಉಳಿಯುವಂತೆ ಕ್ರಯಪತ್ರಗಳನ್ನು ಮಣ್ಣಿನ ಕುಡಿಕೆಯಲ್ಲಿ ಇಡಲಾಯಿತುಯೆರೆ 32:14
ವಚನಗಳು
ಯೆರೆ 32:14“ಇಸ್ರಾಯೇಲರ ದೇವರೂ ಸೇನಾಧೀಶ್ವರನೂ ಆದ ಯೆಹೋವನು ಇಂತೆನ್ನುತ್ತಾನೆ, ‘ನೀನು ಈ ಕ್ರಯಪತ್ರಗಳನ್ನು, ಅಂದರೆ ಮುಚ್ಚಿದ ಪತ್ರವನ್ನೂ ಮತ್ತು ಮುಚ್ಚಳಿಕೆಯ ಪತ್ರವನ್ನೂ ತೆಗೆದುಕೊಂಡು ಬಹು ದಿನ ಇರುವ ಹಾಗೆ ಅದನ್ನು ಮಡಿಕೆಯಲ್ಲಿ ಬಚ್ಚಿಡು.
- ಕಲ್ಲಿಗೆ ಮುದ್ರೆಹಾಕಿ ಕಾವಲನ್ನು ನೇಮಿಸಿ ಯೇಸುವಿನ ಸಮಾಧಿಯನ್ನು ಭದ್ರಪಡಿಸಲಾಯಿತುಮತ್ತಾ 27:66
ವಚನಗಳು
ಮತ್ತಾ 27:66ಅವರು ಹೊರಟು ಕಾವಲುಗಾರರನ್ನು ಇರಿಸಿ ಆ ಕಲ್ಲಿಗೆ ಮುದ್ರೆಹಾಕಿ ಸಮಾಧಿಯನ್ನು ಸುಭದ್ರಮಾಡಿದರು.
ಮುದ್ರೆಯಂತೆ ಕೆತ್ತಿದ್ದು
- ಇಸ್ರಾಯೇಲನ ಮಕ್ಕಳ ಹೆಸರುಗಳನ್ನು ಮುದ್ರೆಯಂತೆ ಕೆತ್ತಿದ ಎರಡು ಗೋಮೇಧಿಕ ರತ್ನಗಳುವಿಮೋ 28:9, ವಿಮೋ 28:11, ವಿಮೋ 39:6
ವಚನಗಳು
ವಿಮೋ 28:9ಮತ್ತು ನೀನು ಎರಡು ಗೋಮೇಧಕ ಅಮೂಲ್ಯರತ್ನಗಳನ್ನು ತೆಗೆದುಕೊಂಡು ಅವುಗಳಲ್ಲಿ ಇಸ್ರಾಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸಬೇಕು.
ವಿಮೋ 28:11ಮುದ್ರೆಗಳನ್ನು ಕೆತ್ತುವ ಹಾಗೆ ಆ ಶಿಲ್ಪಿಗರಿಂದ ಎರಡೂ ರತ್ನಗಳಲ್ಲಿ ಇಸ್ರಾಯೇಲರ ಕುಲಗಳ ಹೆಸರುಗಳನ್ನು ಕೆತ್ತಿಸಿ, ಅದಕ್ಕೆ ಚಿನ್ನವನ್ನು ಆ ಮುದ್ರೆಗಳ ಮೇಲೆ ಇರಿಸಬೇಕು.
ವಿಮೋ 39:6ಮುದ್ರಾಕ್ಷವನ್ನು ಕೆತ್ತುವ ರೀತಿಯಲ್ಲಿ ಗೋಮೇಧಕರತ್ನಗಳಲ್ಲಿ ಇಸ್ರಾಯೇಲನ ಹನ್ನೆರಡು ಮಕ್ಕಳ ಹೆಸರುಗಳನ್ನು ಕೆತ್ತಿ ಆ ರತ್ನಗಳನ್ನು ಕುಂದಣದಲ್ಲಿ ಹಚ್ಚಿದರು.
- ಎದೆಪದಕದ ಹನ್ನೆರಡು ರತ್ನಗಳು, ಪ್ರತಿಯೊಂದರಲ್ಲಿ ಒಂದು ಕುಲದ ಹೆಸರು ಮುದ್ರೆಯಂತೆ ಕೆತ್ತಲ್ಪಟ್ಟಿದೆವಿಮೋ 28:21, ವಿಮೋ 39:14
ವಚನಗಳು
ವಿಮೋ 28:21ಇಸ್ರಾಯೇಲರ ಕುಲಗಳ ಸಂಖ್ಯೆಗೆ ಅನುಗುಣವಾಗಿ ಹನ್ನೆರಡು ರತ್ನಗಳಿರಬೇಕು. ಮುದ್ರೆಗಳನ್ನು ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರನ್ನು ಕೆತ್ತಿಸಬೇಕು.
ವಿಮೋ 39:14ಇಸ್ರಾಯೇಲರ ಕುಲಗಳ ಸಂಖ್ಯೆಯ ಪ್ರಕಾರ ಹನ್ನೆರಡು ರತ್ನಗಳಿದ್ದವು; ಮುದ್ರಾಕ್ಷಗಳಲ್ಲಿ ಕೆತ್ತುವ ರೀತಿಯಲ್ಲಿ ಒಂದೊಂದು ರತ್ನದಲ್ಲಿ ಒಂದೊಂದು ಕುಲದ ಹೆಸರು ಕೆತ್ತಲ್ಪಟ್ಟಿತ್ತು.
- ಮುದ್ರೆಯಂತೆ ಕೆತ್ತಿದ ಚಿನ್ನದ ಪಟ್ಟಿ: ಯೆಹೋವನಿಗೆ ಮೀಸಲುವಿಮೋ 28:36, ವಿಮೋ 39:30
ವಚನಗಳು
ವಿಮೋ 28:36ಚೊಕ್ಕ ಬಂಗಾರದಿಂದ ಒಂದು ಪಟ್ಟಿಯನ್ನು ಮಾಡಿಸಿ ಮುದ್ರೆಯನ್ನು ಕೆತ್ತಿಸುವ ರೀತಿಯಲ್ಲಿ ಅದರ ಮೇಲೆ “ಯೆಹೋವನಿಗೆ ಮೀಸಲು” ಎಂಬ ಲಿಪಿಯನ್ನು ಕೆತ್ತಿಸಬೇಕು.
ವಿಮೋ 39:30ಅವರು ಚೊಕ್ಕ ಬಂಗಾರದಿಂದ ಪರಿಶುದ್ಧ ಕಿರೀಟಕ್ಕೆ ಬಾಸಿಂಗವನ್ನು ಮಾಡಿ ಮುದ್ರೆಯನ್ನು ಕೆತ್ತುವ ರೀತಿಯಲ್ಲಿ ಅದರಲ್ಲಿ, ಯೆಹೋವನಿಗೆ ಮೀಸಲು ಎಂಬ ಲಿಪಿಯನ್ನು ಬರೆದರು.
- ಪರಮಗೀತೆಯಲ್ಲಿನ ಒಂದು ನುಡಿ: ‘ನಿನ್ನ ಹೃದಯದ ಮೇಲೆ ನನ್ನನ್ನು ಧರಿಸಿಕೋ’ಪ.ಗೀ 8:6
ವಚನಗಳು
ಪ.ಗೀ 8:6ನಿನ್ನ ಕೈಯಲ್ಲಿನ ಮುದ್ರೆಯ ಹಾಗೆ ನಿನ್ನ ಹೃದಯದ ಮೇಲೆ ನನ್ನನ್ನು ಧರಿಸಿಕೋ. ಪ್ರೀತಿ ಮೃತ್ಯುವಿನಷ್ಟು ಶಕ್ತಿಶಾಲಿ, ಪ್ರೀತಿದ್ರೋಹದಿಂದ ಹುಟ್ಟುವ ಮತ್ಸರವು ಪಾತಾಳದಷ್ಟು ಕ್ರೂರ, ಅದರ ಜ್ವಾಲೆಯು ಬೆಂಕಿಯ ಉರಿ, ಧಗಧಗಿಸುವ ಕೋಪಾಗ್ನಿ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು