ಆಶ್ಚರ್ಯಕರ ವಿವರಗಳು
ಬೈಬಲಿನಲ್ಲಿ ಎಡಚರು
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ ನ 5 ವಾಕ್ಯಭಾಗಗಳು, ಸಾಲು ಸಾಲಾಗಿ.
- ಗೇರನ ಮಗನಾದ ಏಹೂದನು ಎಡಚನಾದ ಬೆನ್ಯಾಮೀನ್ಯನುನ್ಯಾಯ 3:15
ವಚನಗಳು
ನ್ಯಾಯ 3:15ಅವರು ಯೆಹೋವನಿಗೆ ಮೊರೆಯಿಡಲು ಆತನು ಅವರನ್ನು ರಕ್ಷಿಸುವುದಕ್ಕೋಸ್ಕರ ಬೆನ್ಯಾಮೀನ್ ಕುಲದ ಗೇರನ ಮಗನಾದ ಏಹೂದನನ್ನು ಎಬ್ಬಿಸಿದನು. ಅವನು ಎಡಚನಾಗಿದ್ದನು. ಇಸ್ರಾಯೇಲರು ಅವನ ಮೂಲಕವಾಗಿ ಮೋವಾಬ್ಯರ ಅರಸನಾದ ಎಗ್ಲೋನನಿಗೆ ಕಪ್ಪ ಕಾಣಿಕೆಯನ್ನು ಕಳುಹಿಸಿದರು.
- ಅವನು ಒಂದು ಮೊಳ ಉದ್ದದ ಕತ್ತಿಯನ್ನು ತನ್ನ ಬಲತೊಡೆಗೆ ಕಟ್ಟಿಕೊಂಡನುನ್ಯಾಯ 3:16
ವಚನಗಳು
ನ್ಯಾಯ 3:16ಅವನು ತನಗೋಸ್ಕರ ಒಂದು ಗುದ್ದುಮೊಳ ಉದ್ದವಾದ ಇಬ್ಬಾಯಿಕತ್ತಿಯನ್ನು ಮಾಡಿ ಅದನ್ನು ಬಟ್ಟೆಗಳ ಒಳಗೆ ಬಲಗಡೆಯ ಸೊಂಟಕ್ಕೆ ಕಟ್ಟಿಕೊಂಡು ಹೋಗಿ
- ತನ್ನ ಎಡಗೈಯಿಂದ ಅದನ್ನು ಹಿರಿದು ಅರಸನಾದ ಎಗ್ಲೋನನನ್ನು ಕೊಂದನುನ್ಯಾಯ 3:21–22
ವಚನಗಳು
ನ್ಯಾಯ 3:21–22ಆಗ ಏಹೂದನು ಎಡಗೈ ಚಾಚಿ ಬಲಗಡೆಯ ಸೊಂಟಕ್ಕೆ ಕಟ್ಟಿದ್ದ ಕತ್ತಿಯನ್ನು ಹಿರಿದು ಅವನ ಹೊಟ್ಟೆಯಲ್ಲಿ ತಿವಿದನು. ಆ ಕತ್ತಿ ಹಿಡಿಯ ಸಮೇತ ಹೊಟ್ಟೆಯೊಳಗೆ ಹೊಕ್ಕಿತು. ಅವನು ಕತ್ತಿಯನ್ನು ಹೊರಗೆ ತೆಗೆಯದಿದ್ದುದರಿಂದ ಕೊಬ್ಬು ಕತ್ತಿಯನ್ನು ಸುತ್ತಿಕೊಂಡಿತು; ಕೊಬ್ಬು ಬೆನ್ನಿನಿಂದ ಹೊರಗೆ ಬಂದಿತು.
- ಕೂದಲೆಳೆಗೂ ಗುರಿತಪ್ಪದೆ ಕವಣೆಕಲ್ಲು ಹೊಡೆಯಬಲ್ಲ 700 ಎಡಚರು ಬೆನ್ಯಾಮೀನ್ಯರಲ್ಲಿದ್ದರುನ್ಯಾಯ 20:16
ವಚನಗಳು
ನ್ಯಾಯ 20:16ಈ ಎಲ್ಲಾ ಜನರಲ್ಲಿ ಏಳುನೂರು ಜನರು ಎಡಚರಾದ ಯುದ್ಧವೀರರಿದ್ದರು. ಅವರಲ್ಲಿ ಪ್ರತಿಯೊಬ್ಬರು ಕೂದಲೆಳೆಯಷ್ಟು ಗುರಿತಪ್ಪದ ಹಾಗೆ ಕವಣೆಯನ್ನು ಹೊಡೆಯುವುದರಲ್ಲಿ ನಿಪುಣರಾಗಿದ್ದರು.
- ದಾವೀದನ ಬೆನ್ಯಾಮೀನ್ಯ ಬಿಲ್ಲುಗಾರರು ಎರಡೂ ಕೈಗಳಿಂದ ಕವಣೆ ಹೊಡೆಯುತ್ತಿದ್ದರು, ಬಾಣ ಎಸೆಯುತ್ತಿದ್ದರು1 ಪೂರ್ವ 12:2
ವಚನಗಳು
1 ಪೂರ್ವ 12:2ಬಿಲ್ಲುಗಾರರೂ, ಎಡಗೈ ಬಲಗೈಗಳಿಂದ ಕಲ್ಲುಗಳನ್ನೂ ಮತ್ತು ಬಾಣಗಳನ್ನೂ ಎಸೆಯಬಲ್ಲವರೂ ಆಗಿದ್ದು ಯುದ್ಧದಲ್ಲಿ ಸಹಾಯಮಾಡುವುದಕ್ಕಾಗಿ ಅವನ ಬಳಿಗೆ ಬಂದ ಯುದ್ಧವೀರರ ಪಟ್ಟಿ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು