ಆಶ್ಚರ್ಯಕರ ವಿವರಗಳು
ಬೈಬಲಿನಲ್ಲಿ ಹಿಮ
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ ನ 17 ವಾಕ್ಯಭಾಗಗಳು, ಸಾಲು ಸಾಲಾಗಿ.
- ಹಿಮ ಬೀಳುತ್ತಿದ್ದ ದಿನದಲ್ಲಿ ಬೆನಾಯನು ಗುಂಡಿಯೊಳಗೆ ಒಂದು ಸಿಂಹವನ್ನು ಕೊಂದನು2 ಸಮು 23:20
ವಚನಗಳು
2 ಸಮು 23:20ಯೆಹೋಯಾದಾವನ ಮಗನೂ ಕಬ್ಜಯೇಲಿನ ಪರಾಕ್ರಮಶಾಲಿಯೂ ಆದ ಬೆನಾಯನು ಇನ್ನೊಬ್ಬನು. ಇವನು ಅನೇಕ ಶೂರಕೃತ್ಯಗಳನ್ನು ಮಾಡಿದನು. ಅದಕ್ಕೆ ದೃಷ್ಟಾಂತವೆಂದರೆ ಒಂದು ಸಾರಿ ಮೋವಾಬ್ಯನಾದ ಅರೀಯೇಲನ ಇಬ್ಬರು ಮಕ್ಕಳನ್ನು ಕೊಂದನು. ಇನ್ನೊಮ್ಮೆ ಹಿಮಕಾಲದಲ್ಲಿ ಒಂದು ಸಿಂಹವು ಗುಂಡಿಯಲ್ಲಿ ಬಿದ್ದಿರಲು ಇವನು ಆ ಗುಂಡಿಗೆ ಇಳಿದು ಹೋಗಿ ಅದನ್ನು ಕೊಂದನು.
- ಲೆಬನೋನಿನ ಹಿಮವು ಎಂದಾದರೂ ಅದರ ಇಳಿಜಾರುಗಳನ್ನು ಬಿಟ್ಟುಹೋಗುವುದೋ?ಯೆರೆ 18:14
ವಚನಗಳು
ಯೆರೆ 18:14ಲೆಬನೋನಿನ ಹಿಮವು ಅರಣ್ಯದ ಶಿಖರದಿಂದ ತಪ್ಪುವುದೇ? ದೂರದಿಂದ ಇಳಿದು ಹರಿಯುವ ತೊರೆಯ ನೀರು ಬತ್ತುವುದೇ?
- ಮಂಜುಗಡ್ಡೆಯಿಂದಲೂ ಕರಗುವ ಹಿಮದಿಂದಲೂ ಕಪ್ಪಾದ ತೊರೆಗಳುಯೋಬ 6:16
ವಚನಗಳು
ಯೋಬ 6:16ಹಿಮವು ಅಡಗಿರುವ ಪ್ರವಾಹಗಳು, ಮಂಜುಗಡ್ಡೆಯಿಂದ ಕೂಡಿ ಕಪ್ಪಾಗಿರುವವು.
- ದೇವರು ಹಿಮಕ್ಕೆ ‘ಭೂಮಿಯ ಮೇಲೆ ಬೀಳು’ ಎನ್ನುತ್ತಾನೆಯೋಬ 37:6
ವಚನಗಳು
ಯೋಬ 37:6ಆತನು ಹಿಮಕ್ಕೆ, ‘ಭೂಮಿಯ ಮೇಲೆ ಬೀಳು’ ಎಂದು, ತನ್ನ ಶಕ್ತಿಯ ದೊಡ್ಡ ಮಳೆಗೆ, ‘ರಭಸದಿಂದ ಸುರಿ’ ಎಂದು ಅಪ್ಪಣೆಮಾಡುವನು.
- ಹಿಮದ ಉಗ್ರಾಣಗಳೊಳಗೆ ನೀನು ಹೋಗಿದ್ದೀಯೋ?ಯೋಬ 38:22
ವಚನಗಳು
ಯೋಬ 38:22ನಾನು ಇಕ್ಕಟ್ಟಿನ ಕಾಲಕ್ಕಾಗಿಯೂ, ಯುದ್ಧಕದನಗಳ ದಿನಕ್ಕಾಗಿಯೂ ಇಟ್ಟುಕೊಂಡಿರುವ,
- ಆತನು ಹಿಮವನ್ನು ಉಣ್ಣೆಯಂತೆ ಹರಡುತ್ತಾನೆಕೀರ್ತ 147:16
ವಚನಗಳು
ಕೀರ್ತ 147:16ಉಣ್ಣೆಯಂತಿರುವ ಹಿಮವನ್ನು ಬೀಳಿಸುತ್ತಾನೆ, ಇಬ್ಬನಿಯನ್ನು ಬೂದಿಯಂತೆ ಹರವುತ್ತಾನೆ.
- ಮಳೆಯೂ ಹಿಮವೂ ಭೂಮಿಯನ್ನು ತೋಯಿಸಿ ಮೊಳಕೆಯೊಡೆಯುವಂತೆ ಮಾಡುತ್ತವೆಯೆಶಾ 55:10
ವಚನಗಳು
ಯೆಶಾ 55:10ಮಳೆಯೂ, ಹಿಮವೂ ಆಕಾಶದಿಂದ ಬಿದ್ದು, ಭೂಮಿಯನ್ನು ತೋಯಿಸಿ, ಹಸರುಗೊಳಿಸಿ ಫಲಿಸುವಂತೆ ಮಾಡಿ, ಬಿತ್ತುವವನಿಗೆ ಬೀಜವನ್ನು, ಉಣ್ಣುವವನಿಗೆ ಆಹಾರವನ್ನು ಒದಗಿಸಿದ ಹೊರತು ಹೇಗೆ ಆಕಾಶಕ್ಕೆ ಸುಮ್ಮನೆ ಹಿಂದಿರುಗುವುದಿಲ್ಲವೋ,
- ಸಲ್ಮೋನಿನ ಮೇಲೆ ಬೀಳುವ ಹಿಮದಂತೆಕೀರ್ತ 68:14
ವಚನಗಳು
ಕೀರ್ತ 68:14ಸರ್ವಶಕ್ತನು ಅಲ್ಲಿ ರಾಜರನ್ನು ಚದುರಿಸಿದಾಗ, ಸಲ್ಮೋನಿನ ಮೇಲೆ ಹಿಮವು ಬಿದ್ದಿತು.
ಜ್ಞಾನೋಕ್ತಿಗಳ ನುಡಿಗಳು
- ನಂಬಿಗಸ್ತನಾದ ದೂತನು ಸುಗ್ಗಿಯ ಕಾಲದಲ್ಲಿ ತಣ್ಣನೆಯ ಹಿಮದಂತೆಜ್ಞಾನೋ 25:13
ವಚನಗಳು
ಜ್ಞಾನೋ 25:13ಸುಗ್ಗೀಕಾಲದಲ್ಲಿ ಹಿಮದ ಶೀತವು ಹೇಗೋ ಕಳುಹಿಸಿದ ಒಡೆಯರಿಗೆ ಆಪ್ತದೂತನು ಹಾಗೆಯೇ ಹಿತ.
- ಬೇಸಿಗೆಯಲ್ಲಿ ಹಿಮದಂತೆ, ಮೂಢನಿಗೆ ಗೌರವ ತಕ್ಕದ್ದಲ್ಲಜ್ಞಾನೋ 26:1
ವಚನಗಳು
ಜ್ಞಾನೋ 26:1ಬೇಸಿಗೆಯಲ್ಲಿ ಹಿಮ, ಸುಗ್ಗಿಯಲ್ಲಿ ಮಳೆ ಹೇಗೋ, ಮೂಢನಿಗೆ ಮಾನವು ಹಾಗೆ ಸರಿಯಲ್ಲ.
- ಹಿಮ ಬೀಳುವಾಗ ಅವಳಿಗೆ ಭಯವಿಲ್ಲ; ಅವಳ ಮನೆಯವರೆಲ್ಲರೂ ರಕ್ತಾಂಬರ ಧರಿಸಿದ್ದಾರೆಜ್ಞಾನೋ 31:21
ವಚನಗಳು
ಜ್ಞಾನೋ 31:21ಮನೆಯವರೆಲ್ಲರಿಗೂ ಸಕಲಾತಿಯನ್ನು ಹೊದಿಸಿರುವುದರಿಂದ, ಅವರ ವಿಷಯವಾಗಿ ಆಕೆಗೆ ಹಿಮದ ಭಯವಿಲ್ಲ.
ಹಿಮದಂತೆ ಬೆಳ್ಳಗೆ
- ಮೋಶೆಯ ಕೈ, ಮಿರ್ಯಾಮಳು ಮತ್ತು ಗೇಹಜಿ: ಕುಷ್ಠದಿಂದ ಹಿಮದಂತೆ ಬೆಳ್ಳಗೆವಿಮೋ 4:6, ಅರಣ್ಯ 12:10, 2 ಅರಸು 5:27
ವಚನಗಳು
ವಿಮೋ 4:6ಯೆಹೋವನು ತಿರುಗಿ ಅವನಿಗೆ, “ನಿನ್ನ ಕೈಯನ್ನು ಎದೆಯಭಾಗದೊಳಗೆ ಇಟ್ಟುಕೋ” ಎಂದು ಹೇಳಿದನು. ಅವನು ಹಾಗೆ ಇಟ್ಟುಕೊಂಡು ಹೊರಗೆ ತೆಗೆಯಲು ಅವನ ಕೈ ಕುಷ್ಠ ಹತ್ತಿ ಹಿಮದಂತೆ ಬೆಳ್ಳಗಾಗಿತ್ತು.
ಅರಣ್ಯ 12:10ಆ ಮೇಘವು ದೇವದರ್ಶನದ ಗುಡಾರದ ಮೇಲಿನಿಂದ ಬಿಟ್ಟುಹೋಯಿತು. ಪಕ್ಕನೆ ಮಿರ್ಯಾಮಳಿಗೆ ತೊನ್ನು ಹತ್ತಿದ್ದರಿಂದ ಆಕೆಯ ಚರ್ಮ ಹಿಮದಂತೆ ಬೆಳ್ಳಗಾಗಿ ಹೋಯಿತು. ಆರೋನನು ಮಿರ್ಯಾಮಳನ್ನು ನೋಡಿದಾಗ ಆಕೆಗೆ ತೊನ್ನು ಹಿಡಿದಿದೆ ಎಂದು ತಿಳಿದುಕೊಂಡನು.
2 ಅರಸು 5:27ನಾಮಾನನ ಕುಷ್ಠವು ನಿನ್ನನ್ನೂ, ನಿನ್ನ ಸಂತಾನದವರನ್ನೂ ಸದಾಕಾಲ ಹಿಡಿದಿರುವುದು” ಎಂದನು. ಕೂಡಲೆ ಅವನಿಗೆ ಕುಷ್ಠ ಹತ್ತಿತು. ಗೇಹಜಿ ಹಿಮದಂತೆ ಬಿಳುಪಾಗಿ ಎಲೀಷನ ಸನ್ನಿಧಿಯಿಂದ ಹೊರಟುಹೋದನು.
- ಯೋಬನು: ನಾನು ಹಿಮದಿಂದ ಸ್ನಾನಮಾಡಿಕೊಂಡರೂಯೋಬ 9:30
ವಚನಗಳು
ಯೋಬ 9:30ನಾನು ಹಿಮದಿಂದ ಸ್ನಾನಮಾಡಿದರೂ, ಚೌಳಿನಿಂದ ನನ್ನ ಕೈಗಳನ್ನು ತೊಳಕೊಂಡರೂ,
- ದಾವೀದನ ಪ್ರಾರ್ಥನೆ: ನನ್ನನ್ನು ತೊಳೆ, ಆಗ ನಾನು ಹಿಮಕ್ಕಿಂತಲೂ ಬೆಳ್ಳಗಾಗುವೆನುಕೀರ್ತ 51:7
ವಚನಗಳು
ಕೀರ್ತ 51:7ಹಿಸ್ಸೋಪ್ ಗಿಡದ ಬರಲಿನಿಂದ ನೀರನ್ನು ಚಿಮಕಿಸಿಯೋ ಎಂಬಂತೆ ನನ್ನ ಅಶುದ್ಧತ್ವವನ್ನು ತೆಗೆದುಬಿಡು, ಆಗ ಶುದ್ಧನಾಗುವೆನು; ನನ್ನನ್ನು ತೊಳೆ, ಆಗ ಹಿಮಕ್ಕಿಂತಲೂ ಬೆಳ್ಳಗಾಗುವೆನು.
- ಸಮಾಧಿಯ ಬಳಿಯ ದೇವದೂತನು: ಹಿಮದಂತೆ ಬೆಳ್ಳಗಿನ ವಸ್ತ್ರಗಳುಮತ್ತಾ 28:3
ವಚನಗಳು
ಮತ್ತಾ 28:3ಅವನ ಮುಖಭಾವವು ಮಿಂಚಿನಂತೆ ಇತ್ತು. ಅವನ ಉಡುಪು ಹಿಮದಂತೆ ಬೆಳ್ಳಗಿತ್ತು;
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು