ಪ್ರಕೃತಿ
ಬೈಬಲಿನಲ್ಲಿ ಆಡುಗಳು
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ ನ 34 ವಾಕ್ಯಭಾಗಗಳು, ಸಾಲು ಸಾಲಾಗಿ.
- ಇಸ್ರಾಯೇಲರು ತಿನ್ನಬಹುದಾದ ಪ್ರಾಣಿಗಳಲ್ಲಿ ಆಡುಗಳು ಸೇರಿವೆಧರ್ಮೋ 14:4
ವಚನಗಳು
ಧರ್ಮೋ 14:4ನೀವು ತಿನ್ನಬಹುದಾದ ಪಶುಜಾತಿಗಳು ಯಾವುವೆಂದರೆ ದನ, ಕುರಿ, ಆಡು,
- ರೆಬೆಕ್ಕಳು ಎರಡು ಆಡುಮರಿಗಳಿಂದ ಇಸಾಕನಿಗೆ ಇಷ್ಟವಾದ ಅಡಿಗೆ ಮಾಡಿದಳುಆದಿ 27:9
ವಚನಗಳು
ಆದಿ 27:9ಆಡಿನ ಹಿಂಡಿನೊಳಗೆ ಹೋಗಿ ಎರಡು ಒಳ್ಳೆ ಆಡಿನ ಮರಿಗಳನ್ನು ಬೇಗ ತೆಗೆದುಕೊಂಡು ಬಾ; ಅವುಗಳಿಂದ ನಿನ್ನ ತಂದೆಗೆ ಇಷ್ಟವಾಗಿರುವ ರುಚಿಪದಾರ್ಥವನ್ನು ನಾನೇ ಸಿದ್ಧಮಾಡುತ್ತೇನೆ.
- ಏಸಾವನಂತೆ ಮುಟ್ಟಿದರೆ ತೋರುವಂತೆ ಯಾಕೋಬನ ಕೈಗಳಿಗೂ ಕುತ್ತಿಗೆಗೂ ಆಡಿನ ಚರ್ಮಗಳುಆದಿ 27:16
ವಚನಗಳು
ಆದಿ 27:16ಆ ಆಡಿನ ಮರಿಗಳ ಚರ್ಮಗಳನ್ನು ಅವನ ಕೈಗಳಿಗೂ, ನುಣುಪಾದ ಕೊರಳಿಗೂ ಸುತ್ತಿದಳು.
- ಯೋಸೇಫನ ಅಣ್ಣಂದಿರು ಅವನ ನಿಲುವಂಗಿಯನ್ನು ಆಡುಮರಿಯ ರಕ್ತದಲ್ಲಿ ಅದ್ದಿದರುಆದಿ 37:31
ವಚನಗಳು
ಆದಿ 37:31ಆ ಮೇಲೆ ಅವರು ಒಂದು ಹೋತವನ್ನು ಕೊಯ್ದು ಅದರ ರಕ್ತದಲ್ಲಿ ಯೋಸೇಫನ ಅಂಗಿಯನ್ನು ಅದ್ದಿ,
- ಯೆಹೂದನು ಸಂಬಳವಾಗಿ ತನ್ನ ಮಂದೆಯಿಂದ ಒಂದು ಆಡುಮರಿಯನ್ನು ಕೊಡುವುದಾಗಿ ಹೇಳಿದನುಆದಿ 38:17, ಆದಿ 38:20
ವಚನಗಳು
ಆದಿ 38:17ಅವನು, “ಹಿಂಡಿನಿಂದ ಒಂದು ಹೋತಮರಿಯನ್ನು ಕಳುಹಿಸುತ್ತೇನೆ” ಅಂದಾಗ ಆಕೆ, “ನೀನು ಆದನ್ನು ಕೊಡುವ ತನಕ ನನ್ನಲ್ಲಿ ಏನಾದರೂ ಒತ್ತೆಯಿಡಬೇಕು” ಎಂದು ಹೇಳಿದ್ದಕ್ಕೆ,
ಆದಿ 38:20ಯೆಹೂದನು ತಾನು ಇಟ್ಟಿದ್ದ ಒತ್ತೆಯನ್ನು ಆ ಹೆಂಗಸಿನ ಕೈಯಿಂದ ಬಿಡಿಸಿಕೊಳ್ಳುವುದಕ್ಕೊಸ್ಕರ ತನ್ನ ಸ್ನೇಹಿತನಾದ ಅದುಲ್ಲಾಮ್ಯನ ಕೈಯಲ್ಲಿ ಹೋತಮರಿಯನ್ನು ಕಳುಹಿಸಿದಾಗ ಆಕೆಯು ಅವನಿಗೆ ಸಿಗಲಿಲ್ಲ.
- ಏಸಾವನಿಗೆ ಯಾಕೋಬನು ಕೊಟ್ಟ ಉಡುಗೊರೆಯಲ್ಲಿ 200 ಹೆಣ್ಣಾಡುಗಳೂ 20 ಹೋತಗಳೂ ಇದ್ದವುಆದಿ 32:14
ವಚನಗಳು
ಆದಿ 32:14ಇನ್ನೂರು ಆಡುಕುರಿ, ಇಪ್ಪತ್ತು ಹೋತ, ಇಪ್ಪತ್ತು ಟಗರು, ಮರಿಯೊಡನೆ ಹಾಲು ಕರೆಯುವ
- ಗಿದ್ಯೋನನು ಒಂದು ಆಡುಮರಿಯನ್ನು ಸಿದ್ಧಮಾಡಿದನು: ಮಾಂಸವನ್ನು ಬುಟ್ಟಿಯಲ್ಲಿ, ಸಾರನ್ನು ಪಾತ್ರೆಯಲ್ಲಿನ್ಯಾಯ 6:19
ವಚನಗಳು
ನ್ಯಾಯ 6:19ಗಿದ್ಯೋನನು ಮನೆಗೆ ಹೋಗಿ ಒಂದು ಆಡಿನ ಮರಿಯನ್ನು ತೆಗೆದುಕೊಂಡು, ಒಂದು ಏಫಾ ಅಂದರೆ ಸುಮಾರು ಮೂವ್ವತ್ತು ಸೇರು ಹಿಟ್ಟಿನಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಸುಟ್ಟು, ಮಾಂಸವನ್ನು ಸಿದ್ಧಮಾಡಿ, ಪುಟ್ಟಿಯಲ್ಲಿಟ್ಟು ಅದರ ರಸವನ್ನು ಬಟ್ಟಲಿನಲ್ಲಿ ಹೊಯ್ದು, ಎಲ್ಲವನ್ನೂ ಏಲಾ ಮರದ ಕೆಳಗೆ ಆತನ ಮುಂದೆ ತಂದಿಟ್ಟನು.
- ಮಾನೋಹನು ಬಂಡೆಯ ಮೇಲೆ ಒಂದು ಆಡುಮರಿಯನ್ನು ಅರ್ಪಿಸಿದನುನ್ಯಾಯ 13:19
ವಚನಗಳು
ನ್ಯಾಯ 13:19ಮಾನೋಹನು ಹೋತಮರಿಯನ್ನೂ ಧಾನ್ಯದ್ರವ್ಯವನ್ನೂ ತಂದು ಬಂಡೆಯ ಮೇಲಿಟ್ಟು ಯೆಹೋವನಿಗೆ ಸಮರ್ಪಿಸಿದನು. ಮಾನೋಹನೂ ಅವನ ಹೆಂಡತಿಯೂ ನೋಡುತ್ತಿರುವಾಗಲೇ ಯೆಹೋವನ ದೂತನು ಆಶ್ಚರ್ಯವನ್ನು ನಡಿಸಿದನು.
- ಇಷಯನು ದಾವೀದನ ಕೈಯಲ್ಲಿ ಸೌಲನಿಗೆ ರೊಟ್ಟಿ, ದ್ರಾಕ್ಷಾರಸದ ಬುದ್ದಲಿ ಮತ್ತು ಒಂದು ಆಡುಮರಿಯನ್ನು ಕಳುಹಿಸಿದನು1 ಸಮು 16:20
ವಚನಗಳು
1 ಸಮು 16:20ಇಷಯನು ರೊಟ್ಟಿಯನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ, ಒಂದು ಹೋತಮರಿಯನ್ನೂ, ಕತ್ತೆಯ ಮೇಲೆ ಹೇರಿಸಿ ತನ್ನ ಮಗನಾದ ದಾವೀದನ ಮುಖಾಂತರ ಸೌಲನಿಗೆ ಕಳುಹಿಸಿದನು.
- ಕರ್ಮೆಲಿನ ನಾಬಾಲನಿಗೆ ಸಾವಿರ ಆಡುಗಳಿದ್ದವು1 ಸಮು 25:2
ವಚನಗಳು
1 ಸಮು 25:2ಕರ್ಮೆಲಿನಲ್ಲಿ ಸ್ವಂತ ಸೊತ್ತು ಹೊಂದಿದ್ದ ಒಬ್ಬ ಮನುಷ್ಯನಿದ್ದನು. ಅವನು ಮಾವೋನಿನಲ್ಲಿ ವಾಸಿಸುತ್ತಿದ್ದನು. ಅವನ ಹೆಸರು ನಾಬಾಲ್.
- ಅಣ್ಣನು: “ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ”ಲೂಕ 15:29
ವಚನಗಳು
ಲೂಕ 15:29ಆದರೆ ಅವನು ತನ್ನ ತಂದೆಗೆ, ‘ನೋಡು, ಇಷ್ಟು ವರ್ಷ ನಿನಗೆ ಸೇವೆ ಮಾಡಿದ್ದೇನೆ, ಮತ್ತು ನಾನು ನಿನ್ನ ಅಪ್ಪಣೆಗಳಲ್ಲಿ ಒಂದನ್ನಾದರೂ ಎಂದೂ ಮೀರಲಿಲ್ಲ. ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವುದಕ್ಕಾಗಿ ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ.
- ಮನೆಯವರನ್ನು ಪೋಷಿಸಲು ಬೇಕಾದಷ್ಟು ಆಡಿನ ಹಾಲುಜ್ಞಾನೋ 27:27
ವಚನಗಳು
ಜ್ಞಾನೋ 27:27ನಿನ್ನ ಊಟಕ್ಕೂ, ಮನೆಯವರ ಆಹಾರಕ್ಕೂ ಮೇಕೆಯ ಹಾಲು ಬೇಕಾದಷ್ಟಾಗುವುದು, ಅದು ನಿನ್ನ ದಾಸಿಯರಿಗೆ ಜೀವನವಾಗುವುದು.
- ಆಡುಗಳು ಹೊಲದ ಕ್ರಯವನ್ನು ತರುತ್ತವೆಜ್ಞಾನೋ 27:26
ವಚನಗಳು
ಜ್ಞಾನೋ 27:26ಕುರಿಗಳಿಂದ ನಿನಗೆ ಉಡುಪಾಗುವುದು, ಆಡುಗಳಿಂದ ಹೊಲದ ಕ್ರಯ ಹೆಚ್ಚುವುದು.
ಆಡಿನ ಕೂದಲು
- ದೇವದರ್ಶನದ ಗುಡಾರದ ಮೇಲಿನ ಡೇರೆಯನ್ನು ಆಡಿನ ಕೂದಲಿನ ಹನ್ನೊಂದು ತೆರೆಗಳಿಂದ ಮಾಡಲಾಯಿತುವಿಮೋ 26:7, ವಿಮೋ 36:14
ವಚನಗಳು
ವಿಮೋ 26:7ಈ ಗುಡಾರದ ಮೇಲೆ ಹೊದಿಸುವುದಕ್ಕಾಗಿ ಆಡಿನ ರೋಮದಿಂದ ಹನ್ನೊಂದು ಪರದೆಗಳನ್ನು ಮಾಡಿಸಬೇಕು.
ವಿಮೋ 36:14ಬೆಚಲೇಲನು ಗುಡಾರದ ಮೇಲೆ ಹೊದಿಸುವುದಕ್ಕಾಗಿ ಉಣ್ಣೆಯ ಹನ್ನೊಂದು ಪರದೆಗಳಿಂದ ಆ ಗುಡಾರಕ್ಕೆ ಮೇಲಣ ಡೇರೆಯನ್ನು ಮಾಡಿದನು.
- ಕುಶಲೆಯರಾದ ಸ್ತ್ರೀಯರು ಆಡಿನ ಕೂದಲನ್ನು ನೂತರುವಿಮೋ 35:26
ವಚನಗಳು
ವಿಮೋ 35:26ಬುದ್ಧಿವಂತೆಯರಾದ ಬೇರೆ ಸ್ತ್ರೀಯರು ಆಡಿನ ಕೂದಲುಗಳನ್ನು ನೇಯ್ದು ತಂದುಕೊಟ್ಟರು.
- ದಾವೀದನ ಹಾಸಿಗೆಯಲ್ಲಿ ಮಲಗಿಸಿದ ವಿಗ್ರಹದ ಮೇಲೆ ಮೀಕಲಳು ಆಡಿನ ಕೂದಲನ್ನು ಇಟ್ಟಳು1 ಸಮು 19:13
ವಚನಗಳು
1 ಸಮು 19:13ಅನಂತರ ಆಕೆಯು ಮನೆಯಲ್ಲಿದ್ದ ಒಂದು ವಿಗ್ರಹವನ್ನು ತಂದು, ಹಾಸಿಗೆಯ ಮೇಲೆ ಮಲಗಿಸಿ, ಅದರ ಮುಖದ ಮೇಲೆ ಮೇಕೆಕೂದಲಿನಿಂದ ಹೆಣೆದ ಜಾಲರಿಯನ್ನು ತಲೆದಿಂಬಿನ ಜಾಗದಲ್ಲಿ ಹಾಕಿ ಕಂಬಳಿಯನ್ನು ಹೊದಿಸಿದಳು.
- ಮಿದ್ಯಾನ್ಯರೊಂದಿಗಿನ ಯುದ್ಧದ ನಂತರ ಆಡಿನ ಕೂದಲಿನಿಂದ ಮಾಡಿದ್ದೆಲ್ಲವನ್ನೂ ಶುದ್ಧೀಕರಿಸಲಾಯಿತುಅರಣ್ಯ 31:20
ವಚನಗಳು
ಅರಣ್ಯ 31:20ಅದಲ್ಲದೆ ಎಲ್ಲಾ ಬಟ್ಟೆಗಳನ್ನೂ, ತೊಗಲಿನ ಸಾಮಾನನ್ನೂ, ಮೇಕೆ ಕೂದಲಿನ ವಸ್ತ್ರಗಳನ್ನು ಮರದ ವಸ್ತುಗಳನ್ನು ಶುದ್ಧ ಮಾಡಿಕೊಳ್ಳಬೇಕು” ಎಂದು ಹೇಳಿದನು.
ಧರ್ಮಶಾಸ್ತ್ರದಲ್ಲಿ
- ಪಸ್ಕದ ಕುರಿಮರಿಯನ್ನು ಕುರಿಗಳಿಂದಾಗಲಿ ಆಡುಗಳಿಂದಾಗಲಿ ತೆಗೆದುಕೊಳ್ಳಬಹುದಿತ್ತುವಿಮೋ 12:5
ವಚನಗಳು
ವಿಮೋ 12:5ಆ ಮರಿಯು ಊನವಿಲ್ಲದ ಒಂದು ವರ್ಷದ ಗಂಡುಮರಿಯಾಗಿರಬೇಕು. ನೀವು ಕುರಿಗಳಿಂದಾಗಲಿ ಅಥವಾ ಆಡುಗಳಿಂದಾಗಲಿ ಅದನ್ನು ತೆಗೆದುಕೊಳ್ಳಬಹುದು.
- ಯೋಷೀಯನು ಪಸ್ಕಕ್ಕಾಗಿ 30,000 ಕುರಿಮರಿಗಳನ್ನೂ ಆಡುಮರಿಗಳನ್ನೂ ಕೊಟ್ಟನು2 ಪೂರ್ವ 35:7
ವಚನಗಳು
2 ಪೂರ್ವ 35:7ಯೋಷೀಯನು ಹಬ್ಬಕ್ಕೆ ಬಂದ ಜನರಿಗೆ ಪಸ್ಕಯಜ್ಞಕ್ಕಾಗಿ ರಾಜಕೀಯ ಸೊತ್ತಿನಿಂದ ಮೂವತ್ತು ಸಾವಿರ ಆಡುಮರಿಗಳನ್ನೂ, ಕುರಿಮರಿಗಳನ್ನೂ, ಮೂರು ಸಾವಿರ ಹೋರಿಗಳನ್ನೂ ದಾನಮಾಡಿದನು.
- ಹೊಸದಾಗಿ ಹುಟ್ಟಿದ ಆಡುಮರಿ ಏಳು ದಿನ ತನ್ನ ತಾಯಿಯೊಂದಿಗೆ ಇರುತ್ತದೆಯಾಜ 22:27
ವಚನಗಳು
ಯಾಜ 22:27“ಕರುವಾಗಲಿ, ಕುರಿಮರಿಯಾಗಲಿ ಅಥವಾ ಆಡುಮರಿಯಾಗಲಿ ಹುಟ್ಟಿದಾಗ ಅದು ಏಳು ದಿನಗಳ ವರೆಗೆ ತಾಯಿಯ ಬಳಿಯಲ್ಲಿ ಇರಬೇಕು. ಎಂಟನೆಯ ದಿನದಿಂದ ಅದನ್ನು ಯೆಹೋವನಿಗೆ ಹೋಮವಾಗಿ ಸಮರ್ಪಿಸಿದರೆ ಅದು ಅಂಗೀಕಾರವಾಗುವುದು.
- “ಹೋತ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು”ವಿಮೋ 23:19
ವಚನಗಳು
ವಿಮೋ 23:19ನಿಮ್ಮ ಬೆಳೆಯ ಪ್ರಥಮಫಲದಲ್ಲಿ ಅತಿ ಶ್ರೇಷ್ಠವಾದದ್ದನ್ನು ನಿಮ್ಮ ದೇವರಾದ ಯೆಹೋವನ ಮಂದಿರಕ್ಕೆ ತರಬೇಕು. ಹೋತ ಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.
- ದೋಷಪರಿಹಾರಕ ದಿನ: ಎರಡು ಹೋತಗಳಿಗಾಗಿ ಚೀಟುಗಳು; ಒಂದನ್ನು ಅರಣ್ಯಕ್ಕೆ ಬಿಟ್ಟುಬಿಡಲಾಗುತ್ತದೆಯಾಜ 16:8–10, ಯಾಜ 16:21–22
ವಚನಗಳು
ಯಾಜ 16:8–10ಆಗ ಅವನು ಆ ಹೋತಗಳಲ್ಲಿ ಒಂದು ಯೆಹೋವನಿಗೋಸ್ಕರವೆಂದು ಮತ್ತೊಂದು ಅಜಾಜೇಲನಿಗೋಸ್ಕರವೆಂದು ಚೀಟುಗಳನ್ನು ಬರೆದು ಹಾಕಬೇಕು. ಯಾವ ಹೋತ ಯೆಹೋವನದೆಂದು ಗೊತ್ತಾಗುವುದೋ ಅದನ್ನು ಆರೋನನು ದೋಷಪರಿಹಾರಕ ಯಜ್ಞವಾಗಿ ಸಮರ್ಪಿಸಬೇಕು. ಯಾವ ಹೋತ ಅಜಾಜೇಲನದೆಂದು ಗೊತ್ತಾಗುವುದೋ ಅದನ್ನು ಯೆಹೋವನ ಸನ್ನಿಧಿಯಲ್ಲಿ ಸಜೀವವಾಗಿಯೇ ನಿಲ್ಲಿಸಿ, ಅದರ ಮೇಲೆ ದೋಷವನ್ನು ಹೊರಿಸಿ ಅರಣ್ಯಕ್ಕೆ ಅಜಾಜೇಲನಿಗಾಗಿ ಬಿಡಬೇಕು.
ಯಾಜ 16:21–22ಅವನು ಅದರ ತಲೆಯ ಮೇಲೆ ಎರಡು ಕೈಗಳನ್ನು ಇಟ್ಟು, ಇಸ್ರಾಯೇಲರ ಎಲ್ಲಾ ಪಾಪಗಳನ್ನು, ದ್ರೋಹಗಳನ್ನು ಮತ್ತು ಅಪರಾಧಗಳನ್ನು ಯೆಹೋವನಿಗೆ ಅರಿಕೆಮಾಡಿ ಆ ಹೋತದ ತಲೆಯ ಮೇಲೆ ಹೊರಿಸಿ, ಅದನ್ನು ಆ ಕೆಲಸಕ್ಕೆ ನೇಮಕವಾದವನ ಕೈಯಿಂದ ಅರಣ್ಯಕ್ಕೆ ಕಳುಹಿಸಿಬಿಡಬೇಕು. ಆ ಹೋತ ಅವರ ಎಲ್ಲಾ ಪಾಪಗಳನ್ನು ತನ್ನ ಮೇಲೆ ಹೊತ್ತುಕೊಂಡು ನಿರ್ಜನವಾದ ಪ್ರದೇಶಕ್ಕೆ ಹೋಗುವಂತೆ ಆ ಮನುಷ್ಯನು ಅದನ್ನು ಅರಣ್ಯಕ್ಕೆ ತೆಗೆದುಕೊಂಡುಹೋಗಿ ಅಲ್ಲೇ ಬಿಟ್ಟುಬಿಡಬೇಕು.
ಕಾಡಾಡುಗಳು
- “ಕಾಡಕುರಿಗಳಿಗೆ ಉನ್ನತವಾದ ಪರ್ವತಗಳೂ” ಆಶ್ರಯಕೀರ್ತ 104:18
ವಚನಗಳು
ಕೀರ್ತ 104:18ಕಾಡಕುರಿಗಳಿಗೆ ಉನ್ನತವಾದ ಪರ್ವತಗಳೂ, ಬೆಟ್ಟದ ಮೊಲಗಳಿಗೆ ಬಂಡೆಗಳೂ ಆಶ್ರಯಸ್ಥಾನಗಳಾಗಿವೆ.
- ಸೌಲನು ಕಾಡುಮೇಕೆಗಳ ಬಂಡೆಗಳ ಬಳಿ ದಾವೀದನನ್ನು ಹುಡುಕಿದನು1 ಸಮು 24:2
ವಚನಗಳು
1 ಸಮು 24:2ಆಗ ಅವನು ಎಲ್ಲಾ ಇಸ್ರಾಯೇಲರಲ್ಲಿ ಶ್ರೇಷ್ಠರಾದ ಮೂರು ಸಾವಿರ ಮಂದಿ ಸೈನಿಕರನ್ನು ಆರಿಸಿಕೊಂಡು ಕಾಡುಗುರಿಬಂಡೆಗಳಲ್ಲಿದ್ದ ದಾವೀದನನ್ನೂ, ಅವನ ಜನರನ್ನೂ ಹುಡುಕುವುದಕ್ಕೋಸ್ಕರ ಹೊರಟನು.
- “ಬೆಟ್ಟದ ಮೇಕೆಗಳು ಈಯುವ ಸಮಯವನ್ನು ತಿಳಿದುಕೊಂಡಿದ್ದೀಯೋ?”ಯೋಬ 39:1
ವಚನಗಳು
ಯೋಬ 39:1ಬೆಟ್ಟದ ಮೇಕೆಗಳು ಈಯುವ ಸಮಯವನ್ನು ತಿಳಿದುಕೊಂಡಿದ್ದೀಯೋ? ಹರಿಣಗಳ ಹೆರಿಗೆಯನ್ನು ನೋಡಿಕೊಳ್ಳುವೆಯಾ?
- ಕಾಡುಮೇಕೆಯನ್ನೂ ಬೆಟ್ಟದ ಆಡನ್ನೂ ತಿನ್ನಬಹುದುಧರ್ಮೋ 14:5
ವಚನಗಳು
ಧರ್ಮೋ 14:5ದುಪ್ಪಿ, ಜಿಂಕೆ, ಸಾರಂಗ, ಕಾಡುಮೇಕೆ, ಚಿಗರಿ, ಕಡವೆ, ಕೊಂಡಗುರಿ (ಕಾಡುಟಗರು) ಎಂಬಿವುಗಳೇ.
ನುಡಿಗಳು
- “ನಿನ್ನ ಕೂದಲು ಗಿಲ್ಯಾದ್ ಬೆಟ್ಟದಿಂದ ಇಳಿದು ಹೋಗುವ ಆಡಿನ ಮಂದೆ”ಪ.ಗೀ 4:1, ಪ.ಗೀ 6:5
ವಚನಗಳು
ಪ.ಗೀ 4:1ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ! ಆಹಾ, ನೀನು ಎಷ್ಟು ಸುಂದರಿ! ಮುಸುಕಿನೊಳಗಿನ ನಿನ್ನ ನೇತ್ರಗಳು ಪಾರಿವಾಳಗಳು, ನಿನ್ನ ಕೂದಲು ಗಿಲ್ಯಾದ್ ಬೆಟ್ಟದಿಂದ ಇಳಿದು ಹೋಗುವ ಆಡಿನ ಮಂದೆ.
ಪ.ಗೀ 6:5ನಿನ್ನ ಕಣ್ಣುಗಳನ್ನು ನನ್ನ ಕಡೆಯಿಂದ ತಿರುಗಿಸು, ಅವು ನನ್ನನ್ನು ಹೆದರಿಸುತ್ತವೆ. ನಿನ್ನ ಕೂದಲು ಗಿಲ್ಯಾದ್ ಬೆಟ್ಟದ ಪಾರ್ಶ್ವದಲ್ಲಿ ಮಲಗಿರುವ ಆಡುಮಂದೆಯಂತಿದೆ.
- ಗಾಂಭೀರ್ಯದ ನಡಿಗೆಯುಳ್ಳವುಗಳಲ್ಲಿ ಒಂದು ಹೋತಜ್ಞಾನೋ 30:29–31
ವಚನಗಳು
ಜ್ಞಾನೋ 30:29–31ಗಂಭೀರಾಗಮನದ ಮೂರು ಪ್ರಾಣಿಗಳುಂಟು, ಹೌದು, ಗಂಭೀರಗತಿಯ ನಾಲ್ಕುಂಟು. ಯಾವುದಕ್ಕೂ ಹೆದರಿ ಓರೆಯಾಗದ, ಮೃಗರಾಜನಾದ ಸಿಂಹ, ಹೆಮ್ಮೆಯಿಂದ ನಡೆಯುವ ಹುಂಜ, ಹೋತವು ಸಹ, ಸೈನ್ಯಸಮೇತನಾದ ರಾಜ.
- “ಕುರುಬನು ಕುರಿಗಳನ್ನೂ, ಆಡುಗಳನ್ನೂ ಬೇರ್ಪಡಿಸುವ ಪ್ರಕಾರ”ಮತ್ತಾ 25:32
ವಚನಗಳು
ಮತ್ತಾ 25:32ಆಗ ಎಲ್ಲಾ ದೇಶಗಳ ಜನರನ್ನೂ ಆತನ ಸಮ್ಮುಖದಲ್ಲಿ ತಂದು ಸೇರಿಸುವರು. ಕುರುಬನು ಕುರಿಗಳನ್ನೂ, ಆಡುಗಳನ್ನೂ ಬೇರ್ಪಡಿಸುವ ಪ್ರಕಾರ ಆತನು ಅವರನ್ನು ಬೇರ್ಪಡಿಸುವನು.
- ಒಬ್ಬನು ಆಡುಮರಿಯನ್ನು ಸೀಳುವಂತೆ ಸಂಸೋನನು ಸಿಂಹವನ್ನು ಸೀಳಿದನುನ್ಯಾಯ 14:6
ವಚನಗಳು
ನ್ಯಾಯ 14:6ಅವನ ಕೈಯಲ್ಲಿ ಏನೂ ಇಲ್ಲದಿದ್ದರೂ, ಯೆಹೋವನ ಆತ್ಮವು ಅವನ ಮೇಲೆ ಫಕ್ಕನೆ ಬಂದದ್ದರಿಂದ ಆ ಸಿಂಹವನ್ನು ಹೋತ ಮರಿಯನ್ನೋ ಎಂಬಂತೆ ಸೀಳಿಬಿಟ್ಟನು. ಈ ಸಂಗತಿಯನ್ನು ತಂದೆತಾಯಿಗಳಿಗೆ ತಿಳಿಸಲಿಲ್ಲ.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು