Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಮಾರ್ಗಗಳು › ಅಬ್ಷಾಲೋಮನಿಂದ ದಾವೀದನ ಪಲಾಯನ

ಮಾರ್ಗಗಳು

ಅಬ್ಷಾಲೋಮನಿಂದ ದಾವೀದನ ಪಲಾಯನ

ಎಣ್ಣೆಮರಗಳ ಗುಡ್ಡದ ಮೇಲೆ ಮಹನಯಿಮಿಗೆ, ಗಿಲ್ಗಾಲಿನ ಮೂಲಕ ಹಿಂತಿರುಗಿ · ತಂಗುದಾಣಗಳು: 7 · ನೇರ ರೇಖೆಗಳಲ್ಲಿ ≈ 130 ಕಿ.ಮೀ

ಯೆರೂಸಲೇಮ್ಬಹುರೀಮ್ಮಹನಯಿಮ್ಗಿಲ್ಗಾಲ್10 ಕಿ.ಮೀ.123456

© OpenStreetMap contributors

ತಂಗುದಾಣಗಳು

  1. ಯೆರೂಸಲೇಮ್2 ಸಮು 15:14ಅವನು ಯೆರೂಸಲೇಮಿನಲ್ಲಿ ತನ್ನ ಸೇವಕರಿಗೆ, “ಏಳಿರಿ, ಓಡಿಹೋಗೋಣ. ಇಲ್ಲೇ ಇದ್ದರೆ ನಾವು ಅಬ್ಷಾಲೋಮನ ಕೈಯಿಂದ ತಪ್ಪಿಸಿಕೊಳ್ಳಲಾರೆವು. ಬೇಗ ಹೊರಡೋಣ. ಅವನು ಆಕಸ್ಮಾತ್ತಾಗಿ ನಮ್ಮ ಮೇಲೆ ಬಿದ್ದು, ನಮಗೆ ದುರ್ಗತಿಯನ್ನು ಉಂಟುಮಾಡಿ ಪಟ್ಟಣದವರನ್ನೆಲ್ಲಾ ಕತ್ತಿಯಿಂದ ಸಂಹರಿಸುವನು” ಎಂದು ಹೇಳಿದನು.
  2. ಕಿದ್ರೋನ್2 ಸಮು 15:23ಇವರೆಲ್ಲರೂ ಮುಂದೆ ನಡೆಯುವಾಗ ಸುತ್ತಮುತ್ತಲಿನ ಜನರೆಲ್ಲರೂ ಬಹಳವಾಗಿ ಅತ್ತರು. ಅರಸನೂ ಎಲ್ಲಾ ಜನರೂ ಕಿದ್ರೋನ್ ಹಳ್ಳವನ್ನು ದಾಟಿ ಅರಣ್ಯ ಮಾರ್ಗವನ್ನು ಹಿಡಿದರು.
  3. ಎಣ್ಣೆಮರದ ಗುಡ್ಡ2 ಸಮು 15:30ದಾವೀದನು ಮುಖವನ್ನು ಮರೆಮಾಚಿಕೊಂಡು ಅಳುತ್ತಾ, ಬರಿಗಾಲಿನಿಂದ ಎಣ್ಣೆಮರದ ಗುಡ್ಡವನ್ನೇರಿದನು. ಅವನ ಜೊತೆಯಲ್ಲಿದ್ದ ಜನರೂ ಮೋರೆಮುಚ್ಚಿಕೊಂಡು ಅಳುತ್ತಾ ಗುಡ್ಡವನ್ನು ಏರಿದರು.
  4. ಬಹುರೀಮ್2 ಸಮು 16:5ಅರಸನಾದ ದಾವೀದನು ಬಹುರೀಮಿಗೆ ಬಂದಾಗ ಸೌಲನ ವಂಶದವನೂ, ಗೇರನ ಮಗನೂ ಆದ ಶಿಮ್ಮೀಯು ದಾವೀದನನ್ನು ಶಪಿಸುತ್ತಾ, ಆ ಊರಿನಿಂದ ಹೊರಗೆ ಬಂದನು.
  5. ಮಹನಯಿಮ್2 ಸಮು 17:24ದಾವೀದನು ಮಹನಯಿಮಿಗೆ ಹೋದನು. ಅಬ್ಷಾಲೋಮನು ಮತ್ತು ಇಸ್ರಾಯೇಲರೆಲ್ಲರೂ ಕೂಡಿಕೊಂಡು ಯೊರ್ದನ್ ನದಿಯನ್ನು ದಾಟಿದರು.
  6. ಗಿಲ್ಗಾಲ್2 ಸಮು 19:15ಅರಸನು ಸ್ವದೇಶಕ್ಕೆ ಹೋಗಬೇಕೆಂದು ಹೊರಟು ಯೊರ್ದನಿಗೆ ಬಂದಾಗ ಯೆಹೂದ ಕುಲದವರು ಅವನನ್ನು ಎದುರುಗೊಳ್ಳುವುದಕ್ಕೂ, ಯೊರ್ದನ್ ನದಿಯನ್ನು ದಾಟಿಸುವುದಕ್ಕೂ ಗಿಲ್ಗಾಲಿಗೆ ಬಂದರು.
  7. ಯೆರೂಸಲೇಮ್2 ಸಮು 20:3ಅರಸನಾದ ದಾವೀದನು ಯೆರೂಸಲೇಮಿಗೆ ಬಂದ ಮೇಲೆ ತಾನು ಅರಮನೆ ಕಾಯುವುದಕ್ಕೋಸ್ಕರ ಇಟ್ಟಿದ್ದ ತನ್ನ ಹತ್ತು ಮಂದಿ ಉಪಪತ್ನಿಯರನ್ನು ಪ್ರತ್ಯೇಕವಾಗಿ ಒಂದು ಮನೆಯಲ್ಲಿಟ್ಟು, ಅವರಿಗೆ ಅನ್ನವಸ್ತ್ರ ಕೊಡುತ್ತಿದ್ದನು. ಆದರೆ ಅವರನ್ನು ತಿರುಗಿ ಸಂಗಮಿಸಲಿಲ್ಲ. ಅವರು ಜೀವದಿಂದಿರುವವರೆಗೂ ವಿಧೆವೆಯರಂತಿದ್ದು ಕಾವಲಲ್ಲಿ ಇರಬೇಕಾಯಿತು.

ರೇಖೆಗಳು ಪಠ್ಯದ ಕ್ರಮದಲ್ಲಿ ತಂಗುದಾಣಗಳನ್ನು ಜೋಡಿಸುತ್ತವೆ. ರೇಖೆ ನೆಲದ ಆಕಾರವನ್ನು ಅನುಸರಿಸುವಲ್ಲಿ, ಅದು ಒಬ್ಬ ವಿದ್ವಾಂಸರು ಮರುರಚಿಸಿದ ಸಂಭಾವ್ಯ ದಾರಿ; ಉಳಿದೆಡೆ ನೇರ ರೇಖೆ — ದಾರಿ ತಿಳಿದಿಲ್ಲ. ದೂರಗಳು ತಂಗುದಾಣಗಳ ನಡುವಿನ ನೇರ ರೇಖೆಗಳು. ಮುರಿದ ಗೆರೆ: ಹಡಗಿನಲ್ಲಿ. ಮಸುಕು: ಸ್ಥಳ ಖಚಿತವಿಲ್ಲ.

ಪ್ರತಿಯೊಂದು ಬಿಂದುವೂ ಹೆಚ್ಚು ಸಂಭವನೀಯ ನೆಲೆ; ಮಸುಕಾದ ಬಿಂದು ಎಂದರೆ ಗುರುತಿಸುವಿಕೆ ಖಚಿತವಿಲ್ಲ. ನೆಲೆ ತಿಳಿಯದ ಸ್ಥಳಗಳು ನಕ್ಷೆಯಲ್ಲಿ ಇಲ್ಲ.

ಮೂಲಗಳು: OpenBible.info, CC BY 4.0 · UBS Bible Routes, Dr Leen Ritmeyer © United Bible Societies 2023, CC BY-SA 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು