Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಯಾತ್ರಿಕರಿಗೆ › ಒಂದು ವಾರದಲ್ಲಿ ಪವಿತ್ರ ನಾಡು › ಸಂತ ಪೇತ್ರನ ಪ್ರಾಧಾನ್ಯದ ಚರ್ಚ್

ಒಂದು ವಾರದಲ್ಲಿ ಪವಿತ್ರ ನಾಡು · ತಂಗುದಾಣ 19 · ದಿನ 6

ಸಂತ ಪೇತ್ರನ ಪ್ರಾಧಾನ್ಯದ ಚರ್ಚ್

ಬೈಬಲಿನಲ್ಲಿ

ಪುನರುತ್ಥಾನದ ನಂತರ ಯೇಸು ಮುಂಜಾನೆ ದಡದಲ್ಲಿ ನಿಂತನು; ಶಿಷ್ಯರು ಬಹಳ ಮೀನುಗಳನ್ನು ಹಿಡಿದರು, ಇದ್ದಲಿನ ಬೆಂಕಿಯ ಬಳಿ ಆತನೊಂದಿಗೆ ಊಟಮಾಡಿದರು, ಮತ್ತು ಆತನು ಪೇತ್ರನನ್ನು ಮೂರು ಸಾರಿ, “ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ಕೇಳಿದನು.

ಯೋಹಾ 21:4–17ಬೆಳಗಾಗುವಾಗ ಯೇಸು ದಡದಲ್ಲಿ ನಿಂತಿದ್ದನು. ಆದಾಗ್ಯೂ ಶಿಷ್ಯರು ಆತನನ್ನು ಯೇಸುವೇ ಎಂದು ಗುರುತಿಸಲಿಲ್ಲ. ಆಗ ಯೇಸು ಅವರನ್ನು, “ಮಕ್ಕಳಿರಾ, ನಿಮ್ಮಲ್ಲಿ ಮೀನುಗಳು ಉಂಟೋ?” ಎಂದು ಕೇಳಲು, ಅವರು ಆತನಿಗೆ “ಇಲ್ಲ” ಎಂದು ಉತ್ತರಕೊಟ್ಟರು. ಆತನು ಅವರಿಗೆ, “ನೀವು ದೋಣಿಯ ಬಲಗಡೆಯಲ್ಲಿ ಬಲೆಯನ್ನು ಬೀಸಿರಿ; ಆಗ ನಿಮಗೆ ಸಿಕ್ಕುತ್ತವೆ” ಎಂದು ಹೇಳಿದನು. ಅವರು ಬಲೆ ಬೀಸಿದಾಗ ಮೀನುಗಳು ರಾಶಿ ರಾಶಿಯಾಗಿ ಬಲೆಗೆ ಬಂದು ಸೇರಿದ್ದರಿಂದ, ಅವರಿಗೆ ಬಲೆಯನ್ನು ಎಳೆಯುವುದಕ್ಕೆ ಸಾಧ್ಯವಾಗದೆ ಹೋಯಿತು. ಆಗ ಯೇಸುವಿಗೆ ಪ್ರಿಯನಾಗಿದ್ದ ಶಿಷ್ಯನು ಪೇತ್ರನಿಗೆ, “ಆತನು ಕರ್ತನೇ” ಎಂದು ಹೇಳಿದನು. ಸೀಮೋನ್ ಪೇತ್ರನು ಅದನ್ನು ಕೇಳಿ ತಾನು ತೆಗೆದು ಬಿಟ್ಟಿದ್ದ ತನ್ನ ಮೇಲಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ಧುಮುಕಿದನು. ದಡವು ದೂರವಿರಲಿಲ್ಲ, ಹೆಚ್ಚು ಕಡಿಮೆ ಇನ್ನೂರು ಅಡಿ ದೂರವಿತ್ತು. ಉಳಿದ ಶಿಷ್ಯರು ಮೀನು ತುಂಬಿದ್ದ ಆ ಬಲೆಯನ್ನು ಎಳೆಯುತ್ತಾ ದೋಣಿಯಲ್ಲಿಯೇ ಬಂದರು. ಅವರು ದಡಕ್ಕೆ ಬಂದು ಸೇರಿದಾಗ, ಕೆಂಡಗಳನ್ನೂ ಅವುಗಳ ಮೇಲೆ ಇಟ್ಟಿದ್ದ ಮೀನುಗಳನ್ನು ಮತ್ತು ರೊಟ್ಟಿಯನ್ನು ಕಂಡರು. ಯೇಸು ಅವರಿಗೆ, “ನೀವು ಈಗ ಹಿಡಿದ ಮೀನುಗಳಲ್ಲಿ ಕೆಲವನ್ನು ತನ್ನಿರಿ” ಎಂದು ಹೇಳಲು, ಸೀಮೋನ್ ಪೇತ್ರನು ದೋಣಿಯನ್ನು ಹತ್ತಿ ಬಲೆಯನ್ನು ದಡಕ್ಕೆ ಎಳದುಕೊಂಡು ಬಂದನು. ಅದು ನೂರೈವತ್ಮೂರು ದೊಡ್ಡ ಮೀನುಗಳಿಂದ ತುಂಬಿತ್ತು. ಅಷ್ಟು ಮೀನುಗಳು ಇದ್ದರೂ ಬಲೆಯು ಹರಿದಿರಲಿಲ್ಲ. ಯೇಸು ಅವರಿಗೆ, “ಬಂದು ಊಟ ಮಾಡಿರಿ” ಎಂದು ಹೇಳಿದನು. ಶಿಷ್ಯರು ಆತನನ್ನು ಕರ್ತನೆಂದು ತಿಳಿದಿದ್ದರಿಂದ “ನೀನು ಯಾರು?” ಎಂದು ಕೇಳುವುದಕ್ಕೆ ಅವರಲ್ಲಿ ಒಬ್ಬರಿಗೂ ಧೈರ್ಯವಿರಲಿಲ್ಲ. ಯೇಸು ಬಂದು ರೊಟ್ಟಿಯನ್ನು ತೆಗೆದುಕೊಂಡು ಅವರಿಗೆ ಕೊಟ್ಟನು. ಹಾಗೆಯೇ ಮೀನನ್ನೂ ಕೊಟ್ಟನು. ಯೇಸು ಸತ್ತವರೊಳಗಿಂದ ಜೀವಿತನಾಗಿ ಎದ್ದ ಮೇಲೆ, ತನ್ನ ಶಿಷ್ಯರಿಗೆ ಕಾಣಿಸಿಕೊಂಡದ್ದು ಇದು ಮೂರನೆಯ ಸಾರಿ. ಅವರ ಊಟವಾದ ಮೇಲೆ ಯೇಸು ಸೀಮೋನ್ ಪೇತ್ರನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ಇವರಿಗಿಂತ ಹೆಚ್ಚಾಗಿ ನನ್ನನ್ನು ಪ್ರೀತಿಸುತ್ತಿಯೋ?” ಎಂದು ಕೇಳಲು ಅವನು “ಹೌದು, ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ” ಎಂದನು. ಆತನು ಅವನಿಗೆ, “ನನ್ನ ಕುರಿಮರಿಗಳನ್ನು ಮೇಯಿಸು” ಎಂದು ಹೇಳಿದನು. ಆತನು ತಿರುಗಿ ಎರಡನೆಯ ಸಾರಿ ಅವನಿಗೆ, “ಯೋಹಾನನ ಮಗನಾದ ಸೀಮೋನನೇ, ನೀನು ನನ್ನನ್ನು ಪ್ರೀತಿಸುತ್ತೀಯೋ?” ಎಂದು ಕೇಳಲು, ಅವನು ಹೌದು ಕರ್ತನೇ, ನಾನು ನಿನ್ನ ಮೇಲೆ ಮಮತೆ ಇಟ್ಟಿದ್ದೇನೆಂದು ನೀನೇ ಬಲ್ಲೆ ಎಂದನು. ಆತನು ಅವನಿಗೆ “ನನ್ನ ಕುರಿಗಳನ್ನು ಪಾಲಿಸು” ಎಂದು ಹೇಳಿದನು. ಯೇಸು ಮೂರನೆಯ ಸಾರಿ, “ಯೋಹಾನನ ಮಗನಾದ ಸೀಮೋನನೇ ನೀನು ನನ್ನ ಮೇಲೆ ಮಮತೆ ಇಟ್ಟಿದ್ದಿಯೋ?” ಎಂದು ಕೇಳಿದನು, ಮೂರನೆಯ ಸಾರಿ ಆತನು, “ನನ್ನ ಮೇಲೆ ಮಮತೆ ಇಟ್ಟಿದ್ದೀಯೋ?” ಎಂದು ತನ್ನನ್ನು ಕೇಳಿದ್ದಕ್ಕೆ ಪೇತ್ರನು ದುಃಖಪಟ್ಟು, “ಕರ್ತನೇ, ನಿನಗೆ ಎಲ್ಲವೂ ತಿಳಿದಿದೆ. ನಾನು ನಿನ್ನ ಮೇಲೆ ಮಮತೆ ಇಟ್ಟೀದ್ದೇನೆಂದು ನಿನಗೆ ತಿಳಿದಿದೆ” ಎಂದನು. ಆಗ ಅವನಿಗೆ ಯೇಸು “ನನ್ನ ಕುರಿಗಳನ್ನು ಮೇಯಿಸು” ಎಂದನು.

ಸಂಪ್ರದಾಯ

ಸಂಪ್ರದಾಯದ ಪ್ರಕಾರ, ಪ್ರಾರ್ಥನಾಲಯದಲ್ಲಿರುವ ಮೆನ್ಸಾ ಕ್ರಿಸ್ಟಿ (ಕ್ರಿಸ್ತನ ಮೇಜು) ಎಂದು ಕರೆಯಲ್ಪಡುವ ಚಪ್ಪಟೆ ಬಂಡೆಯ ಮೇಲೆ ಯೇಸು ಶಿಷ್ಯರಿಗೆ ಊಟವನ್ನು ಸಿದ್ಧಪಡಿಸಿದನು.

ಇಂದು ಇಲ್ಲಿ

ನೀರಿನ ಅಂಚಿನಲ್ಲಿ, ಒಂದು ಹಳೆಯ ಚರ್ಚಿನ ಸ್ಥಳದಲ್ಲಿ, 1933ರ ಕಪ್ಪು ಬಸಾಲ್ಟ್ ಕಲ್ಲಿನ ಒಂದು ಚಿಕ್ಕ ಪ್ರಾರ್ಥನಾಲಯ; ಬಂಡೆಯಲ್ಲಿ ಕೊರೆದ ಮೆಟ್ಟಿಲುಗಳು ಸರೋವರಕ್ಕೆ ಇಳಿಯುತ್ತವೆ.

ಹಳೆಯ ಯಾತ್ರಿಕರ ಕಣ್ಣುಗಳಿಂದ

ಅದರ ಬಳಿ ತಿಬೇರಿಯ ಸಮುದ್ರದ ಬಳಿ ಗುಡ್ಡದ ಕೆಳಗೆ ಒಂದು ಸ್ಥಳವಿದೆ, ಮತ್ತು ಆ ಸ್ಥಳದಲ್ಲಿ ಕ್ರಿಸ್ತನು ಪುನರುತ್ಥಾನದ ನಂತರ ಮೂರನೆಯ ಸಾರಿ ತನ್ನ ಶಿಷ್ಯರಿಗೆ ಕಾಣಿಸಿಕೊಂಡನು … ಮತ್ತು ಅವರು ಬಲೆಯ ಬಳಿ ಬೆಂಕಿಯನ್ನೂ ರೊಟ್ಟಿಯನ್ನೂ ಅದರ ಮೇಲೆ ಬೇಯಿಸಿದ ಮೀನನ್ನೂ ಕಂಡರು … ಅಲ್ಲಿ ಪರಿಶುದ್ಧ ಅಪೊಸ್ತಲರ ಹೆಸರಿನಲ್ಲಿ ಒಂದು ಚರ್ಚನ್ನು ಕಟ್ಟಲಾಗಿದೆ.ಮಠಾಧಿಪತಿ ದಾನಿಯೇಲ್, 1106–1108 · ನಮ್ಮ ಅನುವಾದ

ಪ್ರಯಾಣದ ಮೊದಲು ನಿಮ್ಮ ದೇಶದ ಪ್ರಯಾಣ ಸಲಹೆಯನ್ನು ಪರಿಶೀಲಿಸಿ. ಸ್ಥಳಗಳ ತೆರೆಯುವ ಸಮಯ ಮತ್ತು ನಿಯಮಗಳು ಬದಲಾಗುತ್ತವೆ — ಅವುಗಳ ಅಧಿಕೃತ ಪುಟಗಳನ್ನು ನೋಡಿ.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು