ಅನ್ವೇಷಿಸಿ › ಯಾತ್ರಿಕರಿಗೆ › ಒಂದು ವಾರದಲ್ಲಿ ಪವಿತ್ರ ನಾಡು › ಗಲಿಲಾಯ ಸಮುದ್ರ
ಒಂದು ವಾರದಲ್ಲಿ ಪವಿತ್ರ ನಾಡು · ತಂಗುದಾಣ 21 · ದಿನ 6
ಗಲಿಲಾಯ ಸಮುದ್ರ
ಸಮುದ್ರಮಟ್ಟದಿಂದ 214 ಮೀ ಕೆಳಗೆ

ಬೈಬಲಿನಲ್ಲಿ
ಸರೋವರವನ್ನು ದಾಟುವಾಗ ಬಿರುಗಾಳಿಯ ಸಮಯದಲ್ಲಿ ಯೇಸು ದೋಣಿಯ ಹಿಂಭಾಗದಲ್ಲಿ ನಿದ್ರಿಸುತ್ತಿದ್ದನು, ಮತ್ತು ಗಾಳಿಯನ್ನೂ ಅಲೆಗಳನ್ನೂ ಶಾಂತಗೊಳಿಸಿದನು. ಇನ್ನೊಂದು ರಾತ್ರಿ ಆತನು ಸಮುದ್ರದ ಮೇಲೆ ನಡೆಯುತ್ತಾ ಶಿಷ್ಯರ ಬಳಿಗೆ ಬಂದನು, ಮತ್ತು ಪೇತ್ರನು ದೋಣಿಯಿಂದ ಇಳಿದನು.
ಆ ದಿನ ಸಾಯಂಕಾಲವಾದಾಗ ಆತನು ಅವರಿಗೆ, “ಆಚೇದಡಕ್ಕೆ ಹೋಗೋಣ” ಎಂದು ಹೇಳಿದನು. ಅವರು ಆ ಜನರ ಗುಂಪನ್ನು ಬಿಟ್ಟು ಆತನನ್ನು ಅದೇ ದೋಣಿಯಲ್ಲಿ ಹಾಗೆಯೇ ಕರೆದುಕೊಂಡು ಹೋದರು. ಬೇರೆ ದೋಣಿಗಳೂ ಸಹ ಆತನ ಸಂಗಡ ಇದ್ದವು. ತರುವಾಯ ದೊಡ್ಡ ಬಿರುಗಾಳಿ ಎದ್ದು ಅಲೆಗಳು ಆ ದೋಣಿಗೆ ಬಡಿದು ನೀರು ಒಳಗೆ ನುಗ್ಗಿದ್ದರಿಂದ ಆ ದೋಣಿ ಆಗಲೇ ತುಂಬುವುದಕ್ಕೆ ಬಂದಿತ್ತು. ಆದರೆ ಆತನು ದೋಣಿಯ ಹಿಂಭಾಗದಲ್ಲಿ ತಲೆದಿಂಬನ್ನು ಒರಗಿ ನಿದ್ದೆಮಾಡುತ್ತಿದ್ದನು. ಅವರು ಆತನನ್ನು ಎಬ್ಬಿಸಿ, “ಗುರುವೇ, ನಾವು ಮುಳುಗಿಹೋಗುವುದರಲ್ಲಿ ನಿನಗೆ ಚಿಂತೆಯಿಲ್ಲವೇ” ಎಂದು ಕೇಳಿದರು. ಆತನು ಎದ್ದು ಗಾಳಿಯನ್ನು ಗದರಿಸಿ, ಸಮುದ್ರಕ್ಕೆ “ಶಾಂತವಾಗಿರು, ಮೊರೆಯಬೇಡ” ಎಂದು ಅಪ್ಪಣೆಕೊಡುತ್ತಲೇ ಗಾಳಿ ನಿಂತುಹೋಗಿ ಸಮುದ್ರವು ಶಾಂತವಾಯಿತು. ತರುವಾಯ ಆತನು ಅವರನ್ನು, “ಯಾಕೆ ಭಯಪಡುತ್ತೀರಿ? ಇನ್ನೂ ನಿಮಗೆ ನಂಬಿಕೆಯಿಲ್ಲವೇ?” ಎಂದು ಕೇಳಲು ಅವರು ಬಹು ಭಯಪಟ್ಟು, “ಈತನು ಯಾರಿರಬಹುದು? ಗಾಳಿಯೂ, ಸಮುದ್ರವೂ ಸಹ ಈತನು ಹೇಳಿದ ಹಾಗೆ ಕೇಳುತ್ತವಲ್ಲಾ” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.ರಾತ್ರಿಯ ನಾಲ್ಕನೆಯ ಜಾವದಲ್ಲಿ ಯೇಸು ಸಮುದ್ರದ ಮೇಲೆ ನಡೆಯುತ್ತಾ ಅವರ ಕಡೆಗೆ ಬಂದನು. ಸಮುದ್ರದ ಮೇಲೆ ನಡೆಯುವ ಆತನನ್ನು ನೋಡಿದ ಶಿಷ್ಯರು “ಭೂತವೆಂದು” ದಿಗಿಲುಬಿದ್ದು ಭಯದಿಂದ ಕೂಗಿದರು. ಕೂಡಲೆ ಯೇಸು ಮಾತನಾಡಿ ಅವರಿಗೆ, “ಧೈರ್ಯವಾಗಿರಿ ನಾನೇ ಭಯಪಡಬೇಡಿರಿ” ಎಂದು ಹೇಳಿದನು. ಅದಕ್ಕೆ ಪೇತ್ರನು, “ಕರ್ತನೇ ನೀನೇ ಆದರೆ ನಾನು ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವುದಕ್ಕೆ ಅಪ್ಪಣೆ ಕೊಡು” ಅನ್ನಲು, ಆತನು, “ಬಾ” ಅಂದನು. ಆಗ ಪೇತ್ರನು ಯೇಸುವಿನ ಬಳಿಗೆ ಹೋಗುವುದಕ್ಕೆ ದೋಣಿಯಿಂದ ಇಳಿದು ನೀರಿನ ಮೇಲೆ ನಡೆದನು.ಇಂದು ಇಲ್ಲಿ
ಸಮುದ್ರಮಟ್ಟಕ್ಕಿಂತ 200 ಮೀಟರ್ಗಿಂತಲೂ ಹೆಚ್ಚು ಕೆಳಗಿರುವ ಸಿಹಿನೀರಿನ ಸರೋವರ; ತಿಬೇರಿಯ ಮತ್ತು ಗಿನೋಸಾರ್ನಿಂದ ದೋಣಿಗಳು ಸಂಚರಿಸುತ್ತವೆ; ಗಿನೋಸಾರ್ನಲ್ಲಿ 1986ರಲ್ಲಿ ಸಿಕ್ಕಿದ ಯೇಸುವಿನ ಕಾಲದ ಮೀನುಗಾರರ ದೋಣಿಯನ್ನು ತೋರಿಸಲಾಗುತ್ತದೆ.
ಹಳೆಯ ಯಾತ್ರಿಕರ ಕಣ್ಣುಗಳಿಂದ
ನಕ್ಷತ್ರಗಳ ಬೆಳಕಿನಲ್ಲಿ ಗಲಿಲಾಯಕ್ಕೆ ಆಕಾಶದ ವಿಶಾಲ ವ್ಯಾಪ್ತಿಯ ಹೊರತು ಬೇರೆ ಗಡಿಗಳಿಲ್ಲ; ಅದು ಮಹಾ ಘಟನೆಗಳಿಗೆ ತಕ್ಕ ರಂಗಮಂದಿರ; ಜಗತ್ತನ್ನು ರಕ್ಷಿಸಬಲ್ಲ ಒಂದು ಧರ್ಮದ ಜನ್ಮಕ್ಕೆ ತಕ್ಕದ್ದು; ಮತ್ತು ಅದರ ರಂಗದ ಮೇಲೆ ನಿಂತು ಅದರ ಉನ್ನತ ಆಜ್ಞೆಗಳನ್ನು ಸಾರಲು ನೇಮಿಸಲ್ಪಟ್ಟ ಘನವಾದ ವ್ಯಕ್ತಿಗೆ ತಕ್ಕದ್ದು.ಮಾರ್ಕ್ ಟ್ವೇನ್, “ದಿ ಇನ್ನೊಸೆಂಟ್ಸ್ ಅಬ್ರಾಡ್”, 1869 · ನಮ್ಮ ಅನುವಾದ
ತಿಬೇರಿಯ ಸಮುದ್ರವನ್ನು ಒಂದು ಸರೋವರದಂತೆ ಸುತ್ತಲೂ ನಡೆದು ಬರಬಹುದು, ಮತ್ತು ಅದರ ನೀರು ಬಹಳ ಸಿಹಿಯಾಗಿದೆ … ಅದು 50 ವೆರ್ಸ್ಟ್ ಉದ್ದ ಮತ್ತು 20 ಅಗಲ. ಅದರಲ್ಲಿ ಬಹಳ ಮೀನುಗಳಿವೆ, ಮತ್ತು ಅಲ್ಲಿ ಒಂದು ಮೀನು ಅದ್ಭುತವೂ ಆಶ್ಚರ್ಯಕರವೂ ಆಗಿದೆ … ಆಕಾರದಲ್ಲಿ ಅದು ಚಿಕ್ಕ ಕಾರ್ಪ್ ಮೀನಿನಂತಿದೆ; ನಾನು ಊರಿನಲ್ಲಿದ್ದಾಗ ಆ ಮೀನನ್ನು ಅನೇಕ ಸಾರಿ ತಿಂದೆನು.ಮಠಾಧಿಪತಿ ದಾನಿಯೇಲ್, 1106–1108 · ನಮ್ಮ ಅನುವಾದ
ಪ್ರಯಾಣದ ಮೊದಲು ನಿಮ್ಮ ದೇಶದ ಪ್ರಯಾಣ ಸಲಹೆಯನ್ನು ಪರಿಶೀಲಿಸಿ. ಸ್ಥಳಗಳ ತೆರೆಯುವ ಸಮಯ ಮತ್ತು ನಿಯಮಗಳು ಬದಲಾಗುತ್ತವೆ — ಅವುಗಳ ಅಧಿಕೃತ ಪುಟಗಳನ್ನು ನೋಡಿ.
ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು