Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಯಾತ್ರಿಕರಿಗೆ › ಯೊರ್ದನಿನ ಆಚೆ: ದೀಕ್ಷಾಸ್ನಾನದ ಸ್ಥಳ ಮತ್ತು ನೆಬೋ ಬೆಟ್ಟ › ಯಬ್ಬೋಕ್ ಹೊಳೆಯ ಬಳಿಯ ಪೆನೂವೇಲ್

ಯೊರ್ದನಿನ ಆಚೆ: ದೀಕ್ಷಾಸ್ನಾನದ ಸ್ಥಳ ಮತ್ತು ನೆಬೋ ಬೆಟ್ಟ · ತಂಗುದಾಣ 8 · ದಿನ 3

ಯಬ್ಬೋಕ್ ಹೊಳೆಯ ಬಳಿಯ ಪೆನೂವೇಲ್

ಬೈಬಲಿನಲ್ಲಿ

ಯಾಕೋಬನು ತನ್ನ ಕುಟುಂಬವನ್ನು ಯಬ್ಬೋಕ್ ಹೊಳೆಯ ಹಾಯಿಗೆಯ ಆಚೆಗೆ ಕಳುಹಿಸಿ ಒಬ್ಬಂಟಿಗನಾಗಿ ಉಳಿದನು; ಒಬ್ಬ ಮನುಷ್ಯನು ಬೆಳಗಾಗುವ ತನಕ ಅವನೊಂದಿಗೆ ಹೋರಾಡಿದನು, ಮತ್ತು ಯಾಕೋಬನು ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು.

ಆದಿ 32:22–31ಆ ರಾತ್ರಿ ಅವನು ತನ್ನ ಇಬ್ಬರು ಹೆಂಡತಿಯರನ್ನು, ಇಬ್ಬರು ದಾಸಿಯರನ್ನು ಹಾಗೂ ಹನ್ನೊಂದು ಮಂದಿ ಮಕ್ಕಳನ್ನು ಕರೆದುಕೊಂಡು ಯಬ್ಬೋಕ್ ಹೊಳೆಯನ್ನು ದಾಟಿದನು. ಅವರನ್ನೂ, ತನ್ನ ಆಸ್ತಿಯೆಲ್ಲವನ್ನೂ ದಾಟಿಸಿದ ಮೇಲೆ ಯಾಕೋಬನು ಒಂಟಿಯಾಗಿ ಹಿಂದೆ ನಿಂತಿರಲು ಯಾರೋ ಒಬ್ಬ ಪುರುಷನು ಬೆಳಗಾಗುವ ತನಕ ಅವನ ಸಂಗಡ ಹೋರಾಡಿದನು. ಆ ಪುರುಷನು ತಾನು ಗೆಲ್ಲದೆ ಇರುವುದನ್ನು ಕಂಡು ಯಾಕೋಬನ ತೊಡೆಯ ಕೀಲನ್ನು ಮುಟ್ಟಿದ್ದರಿಂದ ಯಾಕೋಬನು ಅವನ ಸಂಗಡ ಹೋರಾಡುತ್ತಿರುವಾಗಲೇ ಅವನ ತೊಡೆಯ ಕೀಲು ತಪ್ಪಿತು. ಆ ಪುರುಷನು, “ನನ್ನನ್ನು ಬಿಡು, ಬೆಳಗಾಗುತ್ತಿದೆ” ಎನ್ನಲು, ಯಾಕೋಬನು, “ನೀನು ನನ್ನನ್ನು ಆಶೀರ್ವದಿಸದ ಹೊರತು ನಾನು ನಿನ್ನನ್ನು ಬಿಡುವುದಿಲ್ಲ” ಎಂದನು. ಆ ಪುರುಷನು, “ನಿನ್ನ ಹೆಸರೇನು?” ಎಂದು ಕೇಳಿದ್ದಕ್ಕೆ ಅವನು, “ಯಾಕೋಬನು” ಎಂದಾಗ, ಅವನು ಯಾಕೋಬನಿಗೆ, “ಇನ್ನು ಮೇಲೆ ನೀನು ಯಾಕೋಬನೆಂದು ಕರೆಯಲ್ಪಡುವುದಿಲ್ಲ; ನೀನು ದೇವರ ಸಂಗಡಲೂ, ಮನುಷ್ಯರ ಸಂಗಡಲೂ ಹೋರಾಡಿ ಗೆದ್ದವನಾದುದರಿಂದ ನಿನಗೆ ‘ಇಸ್ರಾಯೇಲ್’ ಎಂದು ಹೆಸರಾಗುವುದು” ಎಂದು ಹೇಳಿದನು. ಯಾಕೋಬನು, “ನೀನು ನಿನ್ನ ಹೆಸರನ್ನು ನನಗೆ ತಿಳಿಸಬೇಕು” ಎಂದು ಅವನನ್ನು ಕೇಳಿಕೊಂಡಾಗ ಆತನು, “ನನ್ನ ಹೆಸರನ್ನು ವಿಚಾರಿಸುವುದೇಕೆ?” ಎಂದು ಹೇಳಿ ಅಲ್ಲಿ ಅವನನ್ನು ಆಶೀರ್ವದಿಸಿದನು. ಆಗ ಯಾಕೋಬನು, “ನಾನು ದೇವರನ್ನು ಪ್ರತ್ಯಕ್ಷವಾಗಿ ನೋಡಿದೆನಲ್ಲಾ; ಆದರೂ ನನ್ನ ಪ್ರಾಣ ಉಳಿದಿದೆ” ಎಂದು ಹೇಳಿ ಆ ಸ್ಥಳಕ್ಕೆ ಪೆನೀಯೇಲ್ ಎಂದು ಹೆಸರಿಟ್ಟನು, ಅವನು, ಪೆನೂವೇಲನ್ನು ದಾಟುತ್ತಿರುವಾಗ ಸೂರ್ಯೋದಯವಾಯಿತು. ಆದರೆ ಯಾಕೋಬನು ತೊಡೆಯ ನೋವಿನ ನಿಮಿತ್ತ ಕುಂಟುತ್ತಾ ನಡೆದನು.

ಸಂಪ್ರದಾಯ

ಪೆನೂವೇಲ್ ಎಲ್ಲಿತ್ತು ಎಂಬುದು ಖಚಿತವಿಲ್ಲ; ಒಂದು ಅಭಿಪ್ರಾಯವು ಅದನ್ನು ಪ್ರಾಚೀನ ಯಬ್ಬೋಕ್ ಆದ ಜರ್ಕಾ ನದಿಯ ಮೇಲಿರುವ ತುಲೂಲ್ ಅದ್-ಧಹಬ್ ಎಂಬ ಅವಳಿ ಗುಡ್ಡಗಳ ಮೇಲೆ ಇಡುತ್ತದೆ.

ಇಂದು ಇಲ್ಲಿ

ಜರ್ಕಾ ನದಿಯ ಹಸಿರು ಕಣಿವೆಯ ಮೇಲೆ ಚದುರಿದ ಅವಶೇಷಗಳಿರುವ ಎರಡು ಗುಡ್ಡಗಳು; ಅಲ್ಲಿ ಚರ್ಚ್ ಅಥವಾ ಪುಣ್ಯಸ್ಥಳವಿಲ್ಲ, ನದಿ ಮತ್ತು ನೋಟ ಮಾತ್ರ.

ಪ್ರಯಾಣದ ಮೊದಲು ನಿಮ್ಮ ದೇಶದ ಪ್ರಯಾಣ ಸಲಹೆಯನ್ನು ಪರಿಶೀಲಿಸಿ. ಸ್ಥಳಗಳ ತೆರೆಯುವ ಸಮಯ ಮತ್ತು ನಿಯಮಗಳು ಬದಲಾಗುತ್ತವೆ — ಅವುಗಳ ಅಧಿಕೃತ ಪುಟಗಳನ್ನು ನೋಡಿ.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು