ಅನ್ವೇಷಿಸಿ › ಯಾತ್ರಿಕರಿಗೆ › ಗ್ರೀಸ್ನಲ್ಲಿ ಪೌಲನು › ಫಿಲಿಪ್ಪಿ: ಫೋರಮ್ ಮತ್ತು ಪೌಲನ ಸೆರೆಮನೆ
ಗ್ರೀಸ್ನಲ್ಲಿ ಪೌಲನು · ತಂಗುದಾಣ 3 · ದಿನ 1
ಫಿಲಿಪ್ಪಿ: ಫೋರಮ್ ಮತ್ತು ಪೌಲನ ಸೆರೆಮನೆ
ಬೈಬಲಿನಲ್ಲಿ
ಪೌಲ ಮತ್ತು ಸೀಲರನ್ನು ಪೇಟೆಗೆ ಎಳೆದುಕೊಂಡು ಹೋಗಿ, ಹೊಡೆದು ಸೆರೆಯಲ್ಲಿ ಹಾಕಿದರು; ಮಧ್ಯರಾತ್ರಿಯಲ್ಲಿ ಅವರು ಸ್ತುತಿಗೀತೆಗಳನ್ನು ಹಾಡುತ್ತಿದ್ದಾಗ ಭೂಕಂಪವು ಸೆರೆಮನೆಯ ಬಾಗಿಲುಗಳನ್ನು ತೆರೆಯಿತು. ಪೌಲನು ನಂತರ ಇಲ್ಲಿನ ದೇವಜನರಿಗೆ ಪತ್ರ ಬರೆದನು.
ಅವಳ ಯಜಮಾನರು ತಮ್ಮ ಆದಾಯದ ನಿರೀಕ್ಷೆ ತಪ್ಪಿತಲ್ಲಾ ಎಂದು ತಿಳಿದು ಪೌಲನನ್ನೂ ಮತ್ತು ಸೀಲನನ್ನೂ ಹಿಡಿದು ಮಾರುಕಟ್ಟೆಯ ಸ್ಥಳಕ್ಕೆ ಅಧಿಕಾರಿಗಳ ಬಳಿಗೆ ಎಳೆದುಕೊಂಡು ಹೋದರು. ಅವರನ್ನು ಅಧಿಕಾರಿಗಳ ಮುಂದೆ ತಂದು; “ಈ ಮನುಷ್ಯರು ನಮ್ಮ ಪಟ್ಟಣವನ್ನು ಬಹಳವಾಗಿ ಕದಡುತ್ತಿದ್ದಾರೆ; ಇವರು ಯೆಹೂದ್ಯರಾಗಿದ್ದು ರೋಮನ್ನರಾದ ನಾವು ಅವಲಂಬಿಸಿ ಆಚರಿಸಬಾರದ ಆಚಾರಗಳನ್ನು ಪ್ರಚಾರ ಮಾಡುತ್ತಿದ್ದಾರೆ” ಅಂದರು. ಆಗ ಜನರು ಗುಂಪಾಗಿ ಕೂಡಿ, ಅವರಿಗೆ ವಿರೋಧವಾಗಿ ಒಟ್ಟಾಗಿ ಎದ್ದರು. ಮತ್ತು ಅಧಿಕಾರಿಗಳು; ಇವರ ವಸ್ತ್ರಗಳನ್ನು ಹರಿದು, ತೆಗೆದು, ಛಡಿಗಳಿಂದ ಹೊಡೆಸಬೇಕೆಂದು ಅಪ್ಪಣೆಕೊಟ್ಟರು. ಅವರಿಗೆ ಬಹಳ ಹೊಡೆತಗಳನ್ನು ಹೊಡಿಸಿದ ಮೇಲೆ ಸೆರೆಮನೆಯೊಳಗೆ ಹಾಕಿಸಿ, ಇವರನ್ನು ಭದ್ರವಾಗಿ ಕಾಯಬೇಕೆಂದು ಸೆರೆಯ ಯಜಮಾನನಿಗೆ ಆಜ್ಞಾಪಿಸಿದರು. ಅವನು ಇಂಥಾ ಅಪ್ಪಣೆಯನ್ನು ಹೊಂದಿ ಅವರನ್ನು ಸೆರೆಮನೆಯ ಒಳಕೋಣೆಯಲ್ಲಿ ಹಾಕಿ ಅವರ ಕಾಲುಗಳಿಗೆ ಕೋಳವನ್ನು ಹಾಕಿ ಬಿಗಿಸಿದನು. ಮಧ್ಯರಾತ್ರಿಯಲ್ಲಿ ಪೌಲನೂ ಮತ್ತು ಸೀಲನೂ ಪ್ರಾರ್ಥನೆಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಿದ್ದರು; ಸೆರೆಯಲ್ಲಿದ್ದವರು ಲಕ್ಷ್ಯವಿಟ್ಟು ಕೇಳುತ್ತಿದ್ದರು. ಆಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು.ಕ್ರಿಸ್ತ ಯೇಸುವಿನ ದಾಸರಾದ ಪೌಲ ಮತ್ತು ತಿಮೊಥೆಯರು, ಫಿಲಿಪ್ಪಿಯದಲ್ಲಿ ಕ್ರಿಸ್ತ ಯೇಸುವಿನ ಮೂಲಕ ದೇವಜನರಾಗಿರುವವರೆಲ್ಲರಿಗೂ ಮತ್ತು ಅವರೊಂದಿಗಿರುವ ಸಭಾಧ್ಯಕ್ಷರಿಗೂ ಹಾಗೂ ಸಭಾಸೇವಕರಿಗೂ ಬರೆಯುವುದೇನೆಂದರೆ,ಸಂಪ್ರದಾಯ
ಆದಿ ಕ್ರೈಸ್ತ ಕಾಲದಿಂದಲೂ ಫೋರಮ್ನ ಪಕ್ಕದಲ್ಲಿರುವ ಒಂದು ಚಿಕ್ಕ ರೋಮನ್ ನೆಲಮಾಳಿಗೆಯನ್ನು ಪೌಲನ ಸೆರೆಮನೆ ಎಂದು ತೋರಿಸಲಾಗುತ್ತಿದೆ; ಅದು ಬಹುಶಃ ಒಂದು ನೀರಿನ ತೊಟ್ಟಿಯಾಗಿತ್ತು. ಇಲ್ಲಿನ ಒಂದು ಆದಿ ಚರ್ಚನ್ನು 4ನೆಯ ಶತಮಾನದಲ್ಲಿ ಪೌಲನಿಗೆ ಸಮರ್ಪಿಸಲಾಗಿತ್ತು.
ಇಂದು ಇಲ್ಲಿ
ವಿಯಾ ಎಗ್ನಾಟಿಯಾದ ಉದ್ದಕ್ಕೂ ಉತ್ಖನನಗಳು: 2ನೆಯ ಶತಮಾನದ ಫೋರಮ್, ರಂಗಮಂದಿರ, ಅಷ್ಟಭುಜಾಕೃತಿಯ ಚರ್ಚ್ ಮತ್ತು ದೊಡ್ಡ ಬಸಿಲಿಕಗಳು; ಇದು ವಿಶ್ವ ಪರಂಪರೆಯ ತಾಣ.
ಪ್ರಯಾಣದ ಮೊದಲು ನಿಮ್ಮ ದೇಶದ ಪ್ರಯಾಣ ಸಲಹೆಯನ್ನು ಪರಿಶೀಲಿಸಿ. ಸ್ಥಳಗಳ ತೆರೆಯುವ ಸಮಯ ಮತ್ತು ನಿಯಮಗಳು ಬದಲಾಗುತ್ತವೆ — ಅವುಗಳ ಅಧಿಕೃತ ಪುಟಗಳನ್ನು ನೋಡಿ.
ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು