ಅನ್ವೇಷಿಸಿ › ಹಳೆಯ ನಕ್ಷೆಗಳು › ಪವಿತ್ರ ನಾಡು, ಟಿಲೆಮಾನ್ ಸ್ಟೆಲ್ಲಾ
ನಕ್ಷೆಯನ್ನು ಪೂರ್ಣ ಗಾತ್ರದಲ್ಲಿ ತೆರೆಯಿರಿ (3000 × 2287)
ಹಳೆಯ ನಕ್ಷೆಗಳು · ಸುಮಾರು 1600
ಪವಿತ್ರ ನಾಡು, ಟಿಲೆಮಾನ್ ಸ್ಟೆಲ್ಲಾ ನಕ್ಷೆಕಾರ: Stella, Tilemann · ವರ್ಷ: ಸುಮಾರು 1600
ಜರ್ಮನ್ ವಿದ್ವಾಂಸ ಟಿಲೆಮಾನ್ ಸ್ಟೆಲ್ಲಾ ಬರೆದು, ಆಂಟ್ವರ್ಪ್ನಲ್ಲಿ ಜೆರಾರ್ಡ್ ಡಿ ಯೋಡೆ ಪ್ರಕಟಿಸಿದ ವಾಗ್ದತ್ತ ದೇಶದ ನಕ್ಷೆ. ಕಡಲತೀರವು ಮೇಲ್ಭಾಗದಲ್ಲಿ ಸಾಗುತ್ತದೆ, ಆದ್ದರಿಂದ ಪಶ್ಚಿಮವು ಮೇಲಿದೆ, ಮತ್ತು ದೇಶವನ್ನು ಇಸ್ರಾಯೇಲಿನ ಕುಲಗಳಿಗೆ ಹಂಚಲಾಗಿದೆ. ಕೆಳಗಿನ ಅಂಚಿನುದ್ದಕ್ಕೂ ಯೆರೂಸಲೇಮಿನ ಒಂದು ದೃಶ್ಯವಿದೆ; ಎಡಭಾಗದಲ್ಲಿ ಬೇತ್ಲೆಹೇಮಿನ ಚಾಪೆಲ್, ಬಲಭಾಗದಲ್ಲಿ ಪವಿತ್ರ ಸಮಾಧಿಯ ಮೇಲಿನ ಚಾಪೆಲ್.
Library of Congress ನಲ್ಲಿ ಈ ನಕ್ಷೆ
ವಾಕ್ಯಭಾಗಗಳು ಅರಣ್ಯ 34:1–12 ಯೆಹೋವನು ಮೋಶೆಯ ಸಂಗಡ ಮಾತನಾಡಿ ಹೇಳಿದ್ದೇನೆಂದರೆ, “ನೀನು ಇಸ್ರಾಯೇಲರಿಗೆ ಹೀಗೆ ಆಜ್ಞಾಪಿಸಬೇಕು, ‘ಸಮಸ್ತ ಕಾನಾನ್ ದೇಶವೇ ನಿಮಗೆ ಸ್ವದೇಶವಾಗಿ ದೊರಕುವುದು. ನೀವು ಅಲ್ಲಿ ಸೇರಿದಾಗ ಎದೋಮ್ಯರ ಗಡಿಗಳ ಬಳಿಯಲ್ಲಿರುವ ಚಿನ್ ಅರಣ್ಯವು ನಿಮ್ಮ ದಕ್ಷಿಣದ ಮೇರೆಯಾಗಿರಬೇಕು. ಆ ಮೇರೆಯ ಪೂರ್ವದಿಕ್ಕಿನಲ್ಲಿರುವ ಲವಣಸಮುದ್ರದ ಕೊನೆಯಿಂದ ಪ್ರಾರಂಭಿಸಬೇಕು. ದಕ್ಷಿಣಕ್ಕೆ ತಿರುಗಿಕೊಂಡು ಅಕ್ರಬ್ಬೀಮ್ ಎಂಬ ಕಣಿವೆಯ ಮಾರ್ಗವಾಗಿ ಚಿನಿಗೆ ಬರಬೇಕು. ಅದರ ಮೂಲೆ ಕಾದೇಶ್ ಬರ್ನೇಯದ ದಕ್ಷಿಣದ ಕಡೆಯಲ್ಲಿರುವುದು. ಅಲ್ಲಿಂದ ಅದು ಹಚರದ್ದಾರಿಗೆ ಹೊರಟು ಅಚ್ಮೋನಿಗೆ ಹಾದು ಹೋಗಬೇಕು. ಅಚ್ಮೋನಿನಿಂದ ಐಗುಪ್ತ ದೇಶದ ಹಳ್ಳಕ್ಕೆ ಬಂದು ಸಮುದ್ರದ ದಡದಲ್ಲಿ ಮುಗಿಯಬೇಕು. ಪಶ್ಚಿಮ ದಿಕ್ಕಿನಲ್ಲಿ ಮಹಾಸಮುದ್ರದ ದಡವೇ ನಿಮ್ಮ ದೇಶದ ಮೇರೆಯಾಗಿರುವುದು. ಉತ್ತರ ದಿಕ್ಕಿನ ಮೇರೆಗಾಗಿ ನೀವು ಮಹಾಸಮುದ್ರದಿಂದ, ಹೋರ್ ಪರ್ವತದಿಂದ ಹಮಾತಿನವರೆಗೂ ಮತ್ತು ಅಲ್ಲಿಂದ ಚೆದಾದಿನ ಹತ್ತಿರಕ್ಕೆ ಇರುವುದು. ಆ ಮೇಲೆ ಅದು ಜಿಫ್ರೋನಿಗೆ ಹೋಗಿ ಹಚರೇನಾನಿನ ಬಳಿಯಲ್ಲಿ ಮುಗಿಯಬೇಕು. ಇದು ನಿಮ್ಮ ಉತ್ತರ ದಿಕ್ಕಿನ ಮೇರೆಯಾಗಿರುವುದು. ಪೂರ್ವದಿಕ್ಕಿನ ಮೇರೆಗಾಗಿ ಹಚರೇನಾನಿನಿಂದ ಶೆಫಾಮಿಗೆ ಗುರುತು ಹಾಕಬೇಕು. ಶೆಫಾಮಿನಿಂದ ಅಯಿನಿನ ಪೂರ್ವದಲ್ಲಿರುವ ರಿಬ್ಲಕ್ಕೆ ಬರಬೇಕು. ತರುವಾಯ ಅದು ಗಟ್ಟಾ ಇಳಿದು ಕಿನ್ನೆರೆತ್ ಸಮುದ್ರದ ಪೂರ್ವದಲ್ಲಿರುವ ಬೆಟ್ಟಗಳಿಗೆ ಹೋಗಬೇಕು. ಅಲ್ಲಿಂದ ಅದು ಯೊರ್ದನ್ ನದಿಗೆ ಇಳಿದು ಅದನ್ನು ಅನುಸರಿಸಿ ಲವಣಸಮುದ್ರದ ಬಳಿಯಲ್ಲಿ ಮುಗಿಯಬೇಕು. ಇವೇ ನಿಮ್ಮ ದೇಶದ ಮೇರೆಗಳು’” ಎಂದನು.
ಮೂಲಗಳು: ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0 ; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು