Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಯಾತ್ರಿಕರಿಗೆ › ಪ್ರಕಟಣೆಯ ಏಳು ಸಭೆಗಳು ಮತ್ತು ಪತ್ಮೊಸ್ › ಅರ್ತೆಮೀ ದೇವಿಯ ದೇವಸ್ಥಾನ

ಪ್ರಕಟಣೆಯ ಏಳು ಸಭೆಗಳು ಮತ್ತು ಪತ್ಮೊಸ್ · ತಂಗುದಾಣ 2 · ದಿನ 1

ಅರ್ತೆಮೀ ದೇವಿಯ ದೇವಸ್ಥಾನ

ಬೈಬಲಿನಲ್ಲಿ

ಅರ್ತೆಮೀ ದೇವಿಯ ಗುಡಿಗಳನ್ನು ಮಾಡುತ್ತಿದ್ದ ಅಕ್ಕಸಾಲಿಗನಾದ ದೇಮೇತ್ರಿಯನು ಕುಶಲಕರ್ಮಿಗಳನ್ನು ಕೆರಳಿಸಿದನು; ಪಟ್ಟಣದ ಯಜಮಾನನು ಎಫೆಸವನ್ನು ಅರ್ತೆಮೀ ಮಹಾದೇವಿಯ ದೇವಸ್ಥಾನದ ಪಾಲಕ ಎಂದು ಕರೆದನು.

ಅ. ಕೃ 19:24–28ಹೇಗೆಂದರೆ, ದೇಮೇತ್ರಿಯನೆಂಬ ಒಬ್ಬ ಅಕ್ಕಸಾಲಿಗನು ಬೆಳ್ಳಿಯಿಂದ ಅರ್ತೆಮೀ ದೇವಿಯ ಗುಡಿಯಂತೆ ಸಣ್ಣಸಣ್ಣ ಗುಡಿಗಳನ್ನು ಮಾಡಿಸುವವನಾಗಿದ್ದು ಆ ಕಸುಬಿನವರಿಗೆ ಬಹಳ ಲಾಭವನ್ನು ಕೊಡುತ್ತಿದ್ದನು. ಅವನು ಅವರನ್ನೂ ಮತ್ತು ಆ ಕಸುಬಿಗೆ ಸಂಬಂಧಪಟ್ಟ ಕೆಲಸದವರನ್ನೂ ಒಟ್ಟಿಗೆ ಕರೆಸಿ ಅವರಿಗೆ; “ಜನರೇ, ಈ ಕೆಲಸದಿಂದ ನಮಗೆ ಐಶ್ವರ್ಯ ಉಂಟಾಗುತ್ತದೆಂದು ನೀವು ಬಲ್ಲಿರಿ. ಆದರೆ ಕೈಯಿಂದ ಮಾಡಿದ ಮೂರ್ತಿಗಳು ದೇವರುಗಳಲ್ಲವೆಂದು ಆ ಪೌಲನು ಹೇಳಿ ಎಫೆಸದಲ್ಲಿ ಮಾತ್ರವಲ್ಲದೆ ಹೆಚ್ಚುಕಡಿಮೆ ಆಸ್ಯಸೀಮೆಯಲ್ಲೆಲ್ಲಾ ಬಹಳ ಜನರನ್ನು ಒಡಂಬಡಿಸಿ ತಿರುಗಿಸಿಬಿಟ್ಟಿದ್ದಾನೆ ಎಂಬುದನ್ನು ನೀವು ನೋಡುತ್ತಿದ್ದೀರಿ, ಕೇಳುತ್ತಿದ್ದೀರಿ. ಇದರಿಂದ ನಮ್ಮ ಉದ್ಯೋಗಕ್ಕೆ ಕುಂದು ಬರುವುದಲ್ಲದೆ ಅರ್ತೆಮೀ ಮಹಾದೇವಿಯ ದೇವಸ್ಥಾನವು ಗಣನೆಗೆ ಬಾರದೆಹೋಗುವ ಹಾಗೆಯೂ, ಎಲ್ಲಾ ಆಸ್ಯಸೀಮೆಯೂ, ಲೋಕವೆಲ್ಲಾ ಪೂಜಿಸುವ ಈ ದೇವಿಯ ವೈಭವಕ್ಕೆ ಹಾನಿಬರುವ ಹಾಗೆ ಗಂಡಾಂತರವುಂಟಾಗುತ್ತದೆಂದು” ಹೇಳಿದನು. ಅವರು ಈ ಮಾತುಗಳನ್ನು ಕೇಳಿ ಕೋಪಗೊಂಡು; “ಎಫೆಸದವರ ಅರ್ತೆಮೀದೇವಿ ಮಹಾದೇವಿ” ಎಂದು ಅರ್ಭಟಿಸಿದರು.
ಅ. ಕೃ 19:35ಕೊನೆಗೆ ಪಟ್ಟಣದ ಯಜಮಾನನು ಜನರ ಗುಂಪನ್ನು ಸಮಾಧಾನಪಡಿಸಿ; “ಎಫೆಸದವರೇ, ಎಫೆಸ ಪಟ್ಟಣದವರು ಅರ್ತೆಮೀ ಮಹಾದೇವಿಯ ದೇವಸ್ಥಾನಕ್ಕೂ, ಆಕಾಶದಿಂದ ಬಿದ್ದ ಆಕೆಯ ಮೂರ್ತಿಗೂ, ಪಾಲಕರಾಗಿದ್ದಾರೆಂಬುದನ್ನು ತಿಳಿಯದಿರುವ ಮನುಷ್ಯನು ಯಾವನಿದ್ದಾನೇ?

ಇಂದು ಇಲ್ಲಿ

ಒಂದು ಕಾಲದಲ್ಲಿ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದು; ಈಗ ಸೆಲ್ಚುಕ್‌ನ ಕೆಳಗಿನ ಜವುಗು ಹೊಲದಲ್ಲಿ, ತುಂಡುಗಳಿಂದ ಮತ್ತೆ ಕಟ್ಟಿದ ಒಂದೇ ಒಂದು ಕಂಬ ನಿಂತಿದೆ.

ಪ್ರಯಾಣದ ಮೊದಲು ನಿಮ್ಮ ದೇಶದ ಪ್ರಯಾಣ ಸಲಹೆಯನ್ನು ಪರಿಶೀಲಿಸಿ. ಸ್ಥಳಗಳ ತೆರೆಯುವ ಸಮಯ ಮತ್ತು ನಿಯಮಗಳು ಬದಲಾಗುತ್ತವೆ — ಅವುಗಳ ಅಧಿಕೃತ ಪುಟಗಳನ್ನು ನೋಡಿ.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು