ಅನ್ವೇಷಿಸಿ › ಯಾತ್ರಿಕರಿಗೆ › ಸೀನಾಯಿ › ಸಂತ ಕ್ಯಾಥರೀನ್ ಮಠ
ಸೀನಾಯಿ · ತಂಗುದಾಣ 6 · ದಿನ 2
ಸಂತ ಕ್ಯಾಥರೀನ್ ಮಠ
ಸಮುದ್ರಮಟ್ಟದಿಂದ 1,570 ಮೀ ಎತ್ತರ
ಬೈಬಲಿನಲ್ಲಿ
ಹೋರೇಬಿನಲ್ಲಿ ಇತ್ರೋವಿನ ಮಂದೆಯನ್ನು ಮೇಯಿಸುತ್ತಿದ್ದ ಮೋಶೆಯು ಉರಿಯುತ್ತಿದ್ದರೂ ಸುಟ್ಟುಹೋಗದ ಒಂದು ಪೊದೆಯನ್ನು ಕಂಡನು; ದೇವರು ಅವನನ್ನು ಕರೆದನು: ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು, ಯಾಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧ ಸ್ಥಳವಾಗಿದೆ.
ಮೋಶೆಯು ತನ್ನ ಮಾವನಾದ, ಮಿದ್ಯಾನ್ಯರ ಯಾಜಕನಾದ ಇತ್ರೋನನ ಮಂದೆಯನ್ನು ಮೇಯಿಸುತ್ತಿರಲಾಗಿ ಆ ಮಂದೆಯನ್ನು ಅಡವಿಯ ಮತ್ತೊಂದುಭಾಗಕ್ಕೆ ನಡಿಸಿಕೊಂಡು ಹೋಗುತ್ತಾ, “ಹೋರೇಬ್” ಎಂಬ ದೇವರ ಬೆಟ್ಟಕ್ಕೆ ಬಂದನು. ಆಗ ಯೆಹೋವನ ದೂತನು ಮುಳ್ಳಿನ ಪೊದೆಯೊಳಗಿನಿಂದ ಉರಿಯುವ ಬೆಂಕಿ ಜ್ವಾಲೆಯಲ್ಲಿ ಅವನಿಗೆ ಕಾಣಿಸಿಕೊಂಡನು. ಮೋಶೆಯು ಕಣ್ಣೆತ್ತಿ ನೋಡಿದಾಗ, ಆ ಮುಳ್ಳಿನ ಪೊದೆಯು ಬೆಂಕಿಯಿಂದ ಉರಿಯುತ್ತಿತ್ತು; ಆದರೆ ಅದು ಸುಟ್ಟು ಹೋಗಲಿಲ್ಲ. ಆಗ ಮೋಶೆ, “ಇದೇನು ಆಶ್ಚರ್ಯ! ಪೊದೆಯು ಸುಟ್ಟು ಹೋಗುತ್ತಿಲ್ಲವಲ್ಲಾ! ಇದನ್ನು ಹತ್ತಿರಕ್ಕೆ ಹೋಗಿ ನೋಡುವೆನು” ಅಂದುಕೊಂಡನು. ಅವನು ಅದನ್ನು ನೋಡುವುದಕ್ಕೆ ಹತ್ತಿರ ಬರುವುದನ್ನು ಯೆಹೋವನು ಕಂಡನು. ಆಗ ದೇವರು ಆ ಪೊದೆಯೊಳಗಿಂದ “ಮೋಶೆಯೇ, ಮೋಶೆಯೇ” ಎಂದು ಅವನನ್ನು ಕರೆದನು. ಅದಕ್ಕೆ ಮೋಶೆ, “ಇಗೋ ಇದ್ದೇನೆ” ಅಂದನು. ದೇವರು ಅವನಿಗೆ, “ನೀನು ಪೊದೆಯ ಹತ್ತಿರ ಬರಬೇಡ! ನಿನ್ನ ಕಾಲಿನ ಕೆರಗಳನ್ನು ತೆಗೆದುಹಾಕು, ಯಾಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧ ಸ್ಥಳವಾಗಿದೆ” ಎಂದು ಹೇಳಿದನು. ಇದಲ್ಲದೆ ಆತನು ಅವನಿಗೆ, “ನಾನು ನಿನ್ನ ತಂದೆಯಾದ, ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರೂ ಆಗಿದ್ದೇನೆ” ಎಂದು ಹೇಳಿದನು. ಮೋಶೆಯು ದೇವರನ್ನು ನೋಡುವುದಕ್ಕೆ ಭಯಪಟ್ಟು ಮುಖವನ್ನು ಮುಚ್ಚಿಕೊಂಡನು.ಸಂಪ್ರದಾಯ
ಸಂಪ್ರದಾಯದ ಪ್ರಕಾರ, ದೇವರು ಮೋಶೆಯೊಂದಿಗೆ ಮಾತನಾಡಿದ ಸ್ಥಳದಲ್ಲಿ ಉರಿಯುವ ಪೊದೆಯ ಪ್ರಾರ್ಥನಾಲಯ ನಿಂತಿದೆ, ಮತ್ತು ಯಾತ್ರಿಕರು ಅದರ ಮುಂದೆ ತಮ್ಮ ಪಾದರಕ್ಷೆಗಳನ್ನು ತೆಗೆಯುತ್ತಾರೆ; ಮಠದಲ್ಲಿರುವ ಒಂದು ಬಾವಿಯನ್ನು ಮೋಶೆ ಇತ್ರೋವಿನ ಹೆಣ್ಣುಮಕ್ಕಳನ್ನು ಭೇಟಿಯಾದ ಬಾವಿ ಎಂದು ತೋರಿಸಲಾಗುತ್ತದೆ.
ಇಂದು ಇಲ್ಲಿ
6ನೆಯ ಶತಮಾನದಲ್ಲಿ ಚಕ್ರವರ್ತಿ ಜಸ್ಟಿನಿಯನ್ನನ ಕಾಲದಲ್ಲಿ ಕಟ್ಟಿದ ಕೋಟೆಯಂತಹ ಮಠ; ಅದರ ಬಸಿಲಿಕ, ಪ್ರಾಚೀನ ಐಕಾನ್ಗಳು ಮತ್ತು ಈಗಲೂ ಬಳಕೆಯಲ್ಲಿರುವ ಅತಿ ಹಳೆಯ ಗ್ರಂಥಾಲಯಗಳಲ್ಲಿ ಒಂದು.
ಹಳೆಯ ಯಾತ್ರಿಕರ ಕಣ್ಣುಗಳಿಂದ
ಇದಲ್ಲದೆ ಕಣಿವೆಯ ತಲೆಭಾಗಕ್ಕೆ ಹೋಗುವುದು ಅಗತ್ಯವಾಗಿತ್ತು, ಏಕೆಂದರೆ ಅಲ್ಲಿ ಪರಿಶುದ್ಧ ಪುರುಷರ ಅನೇಕ ಕುಟೀರಗಳೂ ಪೊದೆಯಿರುವ ಒಂದು ಚರ್ಚೂ ಇದ್ದವು; ಈ ಪೊದೆ ಇಂದಿನವರೆಗೂ ಜೀವಂತವಾಗಿದೆ ಮತ್ತು ಚಿಗುರುಗಳನ್ನು ಬಿಡುತ್ತದೆ.ಎಜೀರಿಯ, ಸುಮಾರು 381–384 · ನಮ್ಮ ಅನುವಾದ
ಪ್ರಯಾಣದ ಮೊದಲು ನಿಮ್ಮ ದೇಶದ ಪ್ರಯಾಣ ಸಲಹೆಯನ್ನು ಪರಿಶೀಲಿಸಿ. ಸ್ಥಳಗಳ ತೆರೆಯುವ ಸಮಯ ಮತ್ತು ನಿಯಮಗಳು ಬದಲಾಗುತ್ತವೆ — ಅವುಗಳ ಅಧಿಕೃತ ಪುಟಗಳನ್ನು ನೋಡಿ.
ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು