ಪಶ್ಚಿಮದಿಂದ ಪೂರ್ವಕ್ಕೆ ಸುಮಾರು 260 ಕಿ.ಮೀ. ಉದ್ದದ ಕ್ರೇತ, ಉತ್ತರ ಮೇಲ್ಭಾಗದಲ್ಲಿ, ಸಮುದ್ರದ ಮೇಲೆ ಸೂರ್ಯನ ಹೊಳಪು; ಅದರ ನೈಋತ್ಯದಲ್ಲಿರುವ ಚಿಕ್ಕ ದ್ವೀಪ ಗಾವ್ಡೋಸ್, ಬೈಬಲಿನ ಕ್ಲೌಡ. ಪೌಲನ ಹಡಗು ದಕ್ಷಿಣ ತೀರದುದ್ದಕ್ಕೂ ಸಲ್ಮೋನೆಯನ್ನು ದಾಟಿ ಚಂದರೇವುಗಳಿಗೆ ಸಾಗಿತು, ಮತ್ತು ಆಮೇಲೆ ಬಿರುಗಾಳಿ ಅದನ್ನು ಕ್ಲೌಡದ ಪಕ್ಕದಿಂದ ಅಟ್ಟಿಕೊಂಡು ಹೋಯಿತು.