ಲೆಬನೋನ್ ಪರ್ವತಗಳಲ್ಲಿ ಎತ್ತರದಲ್ಲಿರುವ ಲೆಬನೋನಿನ ದೇವದಾರುಗಳ ತೋಪು, ಸುಮಾರು 1890–1900.
ಮೊದಲ ಛಾಯಾಚಿತ್ರಗಳು, 1850–1870ರ ದಶಕ
ಲೆಬನೋನಿನ ದೇವದಾರುಗಳ ತೋಪಿನಲ್ಲಿರುವ ಹಳೆಯ ಮರಗಳಲ್ಲಿ ಅತಿ ದೊಡ್ಡದು. ಛಾಯಾಚಿತ್ರ: ಫ್ರಾನ್ಸಿಸ್ ಫ್ರಿತ್, 1857.
ಕಕ್ಷೆಯಿಂದ
ಲೆಬನೋನ್ ಶ್ರೇಣಿಯ ಮೇಲೂ, ದಕ್ಷಿಣ ತುದಿ ಹೆರ್ಮೋನ್ ಪರ್ವತವಾಗಿರುವ ಆಂಟಿ-ಲೆಬನೋನಿನ ಮೇಲೂ ಹೊಸ ಹಿಮ; ಉತ್ತರ ಮೇಲ್ಭಾಗದಲ್ಲಿದೆ. ಪಶ್ಚಿಮಕ್ಕೆ ಕುಪ್ರ ಇದೆ, ಮತ್ತು ದಕ್ಷಿಣಕ್ಕೆ ಯೊರ್ದನ್ ಬಿರುಕು ಕಣಿವೆಯಲ್ಲಿರುವ ಕಪ್ಪು ಚುಕ್ಕೆಗಳು ಗಲಿಲಾಯ ಸಮುದ್ರ ಮತ್ತು ಮೃತ ಸಮುದ್ರ.ಇಸ್ರಾಯೇಲಿನ ಗಡಿಯಿಂದ ಬೈರೂತಿನಾಚೆಯವರೆಗೆ ಲೆಬನೋನಿನ ಬಹುಭಾಗ, 250 ಮಿ.ಮೀ. ಲೆನ್ಸ್‌ನಿಂದ ತೆಗೆದ ಚಿತ್ರ: ಸಮುದ್ರದ ಮೇಲೆ ಕಪ್ಪಾದ, ಕಾಡುಗಳಿಂದ ಕೂಡಿದ ಲೆಬನೋನ್ ಪರ್ವತಶ್ರೇಣಿ ಮತ್ತು ಒಳನಾಡಿನಲ್ಲಿ, ಬೆಕಾ ಕಣಿವೆಯ ಕಡೆಗೆ, ಒಣ ಪ್ರದೇಶ. ಪ್ರಾಚೀನ ಫೊಯಿನಿಕೆಯ ಬಂದರುಗಳಾದ ತೂರ್ ಮತ್ತು ಸೀದೋನ್ ಈ ತೀರದಲ್ಲಿವೆ.