Bible Explorer ಆ್ಯಪ್ ಪಡೆಯಿರಿ

ಅನ್ವೇಷಿಸಿ › ಯಾತ್ರಿಕರಿಗೆ › ಪ್ರಕಟಣೆಯ ಏಳು ಸಭೆಗಳು ಮತ್ತು ಪತ್ಮೊಸ್ › ಫಿಲದೆಲ್ಫಿಯ (ಅಲಾಶೆಹಿರ್)

ಪ್ರಕಟಣೆಯ ಏಳು ಸಭೆಗಳು ಮತ್ತು ಪತ್ಮೊಸ್ · ತಂಗುದಾಣ 10 · ದಿನ 4

ಫಿಲದೆಲ್ಫಿಯ (ಅಲಾಶೆಹಿರ್)

ಬೈಬಲಿನಲ್ಲಿ

ಫಿಲದೆಲ್ಫಿಯಕ್ಕೆ: ನಿನ್ನೆದುರಿನಲ್ಲಿ ಒಂದು ಬಾಗಿಲನ್ನು ತೆರೆದಿಟ್ಟಿದ್ದೇನೆ, ಯಾರೂ ಅದನ್ನು ಮುಚ್ಚಲಾರರು. ಜಯಹೊಂದುವವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು.

ಪ್ರಕ 3:7–8“ಫಿಲದೆಲ್ಫಿಯದಲ್ಲಿರುವ ಸಭೆಯ ದೂತನಿಗೆ ಬರೆ, ಪರಿಶುದ್ಧನೂ, ಸತ್ಯವಂತನೂ, ದಾವೀದನ ಬೀಗದಕೈಯುಳ್ಳವನೂ, ಯಾರಿಂದಲೂ ಮುಚ್ಚಲಾಗದಂತೆ ತೆರೆಯುವವನೂ, ಯಾರಿಂದಲೂ ತೆರೆಯಲಾಗದಂತೆ ಮುಚ್ಚುವವನೂ ಆಗಿರುವಾತನು ಹೇಳುವುದೇನಂದರೆ, ನಿನ್ನ ಕೃತ್ಯಗಳನ್ನು ಬಲ್ಲೆನು. ನಿನಗಿರುವ ಶಕ್ತಿ ಕೊಂಚವಾಗಿದ್ದರೂ ನೀನು ನನ್ನ ಹೆಸರನ್ನು ನಿರಾಕರಿಸದೆ, ನನ್ನ ವಾಕ್ಯವನ್ನು ಕಾಪಾಡಿದ್ದರಿಂದ ಇಗೋ ನಿನ್ನೆದುರಿನಲ್ಲಿ ಒಂದು ಬಾಗಿಲನ್ನು ತೆರೆದಿಟ್ಟಿದ್ದೇನೆ. ಯಾರೂ ಅದನ್ನು ಮುಚ್ಚಲಾರರು.
ಪ್ರಕ 3:12ಯಾವನು ಜಯಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು. ಅವನು ಎಂದಿಗೂ ಅಲ್ಲಿಂದ ಕದಲುವುದೇ ಇಲ್ಲ. ಇದಲ್ಲದೆ ನನ್ನ ದೇವರ ಹೆಸರನ್ನು, ನನ್ನ ದೇವರ ಬಳಿಯಿಂದ ಪರಲೋಕದೊಳಗಿಂದ ಇಳಿದುಬರುವ ಹೊಸ ಯೆರೂಸಲೇಮ್ ಪಟ್ಟಣವೆಂಬ ನನ್ನ ದೇವರ ಪಟ್ಟಣದ ಹೆಸರನ್ನೂ, ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು.

ಇಂದು ಇಲ್ಲಿ

ಸಂತ ಯೋಹಾನನ ಒಂದು ಬೈಜಾಂಟಿಯನ್ ಚರ್ಚಿನ ಬೃಹತ್ ಇಟ್ಟಿಗೆಯ ಕಂಬಗಳು ಅಲಾಶೆಹಿರ್‌ನ ಮನೆಗಳ ನಡುವೆ ನಿಂತಿವೆ.

ಪ್ರಯಾಣದ ಮೊದಲು ನಿಮ್ಮ ದೇಶದ ಪ್ರಯಾಣ ಸಲಹೆಯನ್ನು ಪರಿಶೀಲಿಸಿ. ಸ್ಥಳಗಳ ತೆರೆಯುವ ಸಮಯ ಮತ್ತು ನಿಯಮಗಳು ಬದಲಾಗುತ್ತವೆ — ಅವುಗಳ ಅಧಿಕೃತ ಪುಟಗಳನ್ನು ನೋಡಿ.

ಮೂಲಗಳು: OpenBible.info, CC BY 4.0 · ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ · © 2017, 2019 Bridge Connectivity Solutions, CC BY-SA 4.0; changed: footnotes, headings and the letters over Psalm 119 left out, verses in the app's numbering. · ಮೂಲಗಳು ಮತ್ತು ಹಕ್ಕುಗಳು